ಬೈಂದೂರು : ರಕ್ಷಕ್ ನೆಟವರ್ಕ್ & ಸೆಕ್ಯೂರಿಟಿ ಸಲ್ಯೂಷನ್ ಶುಭಾರಂಭ

ಬೈಂದೂರು ಕಿರಿಮಂಜೇಶ್ವರದಲ್ಲಿರುವ ಜಿ.ಎನ್ ಖಾರ್ವಿ ಕಾಂಪ್ಲೆಕ್ಸ್‌ನಲ್ಲಿ ನೂತನ “ರಕ್ಷಕ್ ನೆಟವರ್ಕ್ & ಸೆಕ್ಯೂರಿಟಿ ಸಲ್ಯೂಷನ್’ ಶುಭಾರಂಭಗೊಂಡಿತು.

ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,
ನಮ್ಮ ಜಿಲ್ಲೆಯನ್ನು ಸೇಫ್ ಆಗಿಸುವ ನಿಟ್ಟಿನಲ್ಲಿ “ರಕ್ಷಕ್ ನೆಟವರ್ಕ್ & ಸೆಕ್ಯೂರಿಟಿ ಸಲ್ಯೂಷನ್’ ಸಂಸ್ಥೆಯು ಪೋಲೀಸ್ ಇಲಾಖೆಯ ಸಹಕಾರದೊಂದಿಗೆ ನಿಯಂತ್ರಣ ಕೊಠಡಿ ಮಾದರಿಯಲ್ಲಿ ಕಾರ್ಯನಿರ್ವಹಣೆ ನಡೆಸುವ ಯೋಜನೆಯನ್ನು ರೂಪಿಸಲಾಗಿರುತ್ತದೆ. ಈ ಯೋಜನೆಯಿಂದಾಗಿ ನಮ್ಮ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳ ಸಂಖ್ಯೆ ಬಾರಿ ಇಳಿಮುಖವಾಗಿದೆ. ಯಾವುದೇ ಘಟನೆ ನಡೆದ ಬಳಿಕ ಪತ್ತೆ ಹಚ್ಚುವುದಕ್ಕಿಂತ ಘಟನೆ ನಡೆಯದಂತೆ ನೋಡಿಕೊಳ್ಳುವುದು ಹಾಗೂ ಘಟನೆ ನಡೆಯುವಾಗಲೇ ಅಪರಾಧಿಗಳನ್ನು ಬಂಧಿಸುವುದು ಈ ಯೋಜನೆಯಿಂದ ಸಾಧ್ಯವಾಗುತ್ತದೆ. ಈ ಯೋಜನೆಗೆ ಸೇರ್ಪಡೆಗೊಳ್ಳುವ ಸಂಸ್ಥೆ ಹಾಗೂ ಉದ್ದಿಮೆಗಳ ಸಿಸಿಟಿವಿಗಳನ್ನು ರಾತ್ರಿ ಕಾಲದಲ್ಲಿ ಭದ್ರತೆಯ ದೃಷ್ಟಿಯಿಂದ ವೀಕ್ಷಣೆ ನಡೆಸಿ ಯಾವುದೇ ಕಳವು ಹಾಗೂ ಇನ್ನಿತರ ಅವಘಡಗಳ ಬಗ್ಗೆ ಮಾಹಿತಿಯನ್ನು ಆ ಕೂಡಲೇ ಸ್ಥಳೀಯ ಪೋಲೀಸ್ ಠಾಣೆಗೆ ನೀಡಿ ಸಂಭವಿಸಬಹುದಾದ ಕೃತ್ಯವನ್ನು ತಕ್ಷಣ ತಡೆಗಟ್ಟಲಾಗುತ್ತದೆ.” ಎಂದು ಹೇಳಿದರು.

ಸಂಸ್ಥೆಯ ಮಾಲೀಕರಾದ ಸುಬ್ರಮಣ್ಯ ಖಾರ್ವಿ ಅವರು ಮಾತನಾಡಿ, ಯಾವುದೇ ಘಟನೆಗಳು ಸಂಭವಿಸುವುದು ನಮ್ಮ ಗಮನಕ್ಕೆ ಬಂದ ಕೂಡಲೇ ಆ ಸ್ಥಳಕ್ಕೆ ಸಂಬಂಧಪಟ್ಟ ಬೀಟ್ ಪೋಲೀಸ್ ಅವರಿಗೆ, ಪೋಲೀಸ್ ಸ್ಟೇಶನ್‌ಗೆ ಮತ್ತು ಸಂಬಂಧಪಟ್ಟ ವ್ಯಕ್ತಿಗೆ ದೂರವಾಣಿ ಮೂಲಕ ಕರೆ ಮಾಡಿ ತಕ್ಷಣ ತಿಳಿಸಲಾಗುತ್ತದೆ. ನಮ್ಮಲ್ಲಿ ಸಂಭಾಷಣೆಯು ರೆಕಾರ್ಡ್ ಮಾಡಲಾಗುತ್ತದೆ. ಇದರಿಂದ ಕಳ್ಳತನ ಇನ್ನಿತರ ಘಟನೆ ಆದ ಮೇಲೆ ಕಾರ್ಯಪ್ರವೃತ್ತರಾಗುವುದಕ್ಕಿಂತ ಘಟನೆ ನಡೆಯದಂತೆ ತಡೆಯುವುದಕ್ಕೆ ಸಹಕಾರಿಯಾಗಿರುತ್ತದೆ.

ತಾತ್ಕಾಲಿಕವಾಗಿ ಮದುವೆ ಸಭಾಂಗಣ ಹಾಗೂ ಇನ್ನಿತರ ಸಾರ್ವಜನಿಕ ಸಮಾರಂಭ ಹಾಗೂ ಪ್ರವಾಸ ಇನ್ನಿತರ ವಿಷಯಗಳಿಗಾಗಿ ಮನೆ ಬಾಗಿಲು ಹಾಕಿ ಹೊರ ಹೋಗುವ ಮುನ್ನ ನಮ್ಮ ಸಂಸ್ಥೆಯನ್ನು ಸಂಪರ್ಕಿಸಿದರೆ, ನೀವು ಹೊರಡುವ ಮುನ್ನ ನಮ್ಮ ಸಿಬ್ಬಂದಿ ನಿಮ್ಮಲ್ಲಿಗೆ ಬಂದು ಮನೆಯ ಒಳಗಡೆ Ultra HD CCTV ಕ್ಯಾಮರಾ ಅಳವಡಿಸಿ ನೇರ ವೀಕ್ಷಣೆ ನಡೆಸುತ್ತೇವೆ. ನೀವು ಮರಳಿ ಬಂದ ನಂತರ ಕ್ಯಾಮರಾವನ್ನು ಹಿಂತಿರುಗಿ ತೆಗೆದುಕೊಂಡು ಹೋಗುತ್ತೇವೆ.

ಜಾತ್ರೆ ಉತ್ಸವ, ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಕಣ್ಣಾವಲು ಒದಗಿಸುವ ವ್ಯವಸ್ಥೆ ಇರುತ್ತದೆ.

ಈ ಸಂದರ್ಭದಲ್ಲಿ ಸವಿತ್ರು ತೇಜ್ ಪಿ.ಡಿ. ಮಾನ್ಯ ಪೋಲೀಸ್ ವೃತ್ತ ನಿರೀಕ್ಷಕರು ಬೈಂದೂರು, ಶ್ರೀ ತಿಮ್ಮೇಶ ಬಿ.ಎನ್‌ ಉಪ ನಿರೀಕ್ಷಕರು ಬೈಂದೂರು ಪೋಲೀಸ್ ಠಾಣೆ, ಶ್ರೀ ಶೇಖರ ಖಾರ್ವಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಕಿರಿಮಂಜೇಶ್ವರ, ಎಸ್. ಪ್ರಕಾಶ್ಚಂದ್ರ ಶೆಟ್ಟಿ ನಿರ್ದೇಶಕರು, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಆ. ಮಂಗಳೂರು ಅಧ್ಯಕ್ಷರು, ಖಂಬದಕೋಣೆ ರೈ.ಸೇ.ಸ.ಸಂಘ ನಿ. ಉಪ್ಪುಂದ , ಶ್ರೀ ಎಸ್. ರಾಜು ಪೂಜಾರಿ ನಿರ್ದೇಶಕರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಅಧ್ಯಕ್ಷರು, ಮರವಂತೆ-ಬಡಾಕೆರೆ ವ್ಯ.ಸೇ.ಸ. ಸಂಘ ನಿ. ನಾವುಂದ ಶ್ರೀ ಗೋವಿಂದ ಬಾಬು ಪೂಜಾರಿ ಅಧ್ಯಕ್ಷರು,ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ, ಶ್ರೀ ಮಹೇಂದ್ರ ಪೂಜಾರಿ ಮಾಜಿ ಅಧ್ಯಕ್ಷರು, ತಾಲೂಕು ಪಂಚಾಯತ್ ಬೈಂದೂರು ಅಧ್ಯಕ್ಷರು, ಎನ್. ವಿ. ಪ್ರಕಾಶ್ ಐತಾಳ್ ವ್ಯವಸ್ಥಾಪನಾ ಸಮಿತಿ, ಶ್ರೀ ಅಗಸ್ತೇಶ್ವರ ದೇವಸ್ಥಾನ, ಕಿರಿಮಂಜೇಶ್ವರ ಶ್ರೀ ನಾಗೇಶ ಖಾರ್ವಿ, ಅಧ್ಯಕ್ಷರು, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ, ಉಪ್ಪುಂದ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

add - Rai's spices

Related Posts

Leave a Reply

Your email address will not be published.