ಐಬಿಬಿಐ ನಡೆಸಿದ ಮೌಲ್ಯಮಾಪಕರ ಪರೀಕ್ಷೆ : ಸಿಎ ನಿತಿನ್ ಬಾಳಿಗಾ ತೇರ್ಗಡೆ
ಮಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಸಿಎ ನಿತಿನ್ ಬಾಳಿಗಾ ಅವರು ಇತ್ತೀಚೆಗೆ ಐಬಿಬಿಐ ನಡೆಸಿದ ಕ್ಯಾಟಗರಿ ಫೈನಾನ್ಸಿಯಲ್ ಅಸೆಟ್ ಸೆಕ್ಯುರಿಟೀಸ್ ವಿಭಾಗದ ಮೌಲ್ಯಮಾಪಕರ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಹಣಕಾಸು ಆಸ್ತಿಗಳಿಗೆ ನೋಂದಾಯಿತ ಮೌಲ್ಯಮಾಪಕರಾಗಿ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಸಿಎ ನಿತಿನ್ ಬಾಳಿಗಾ ಅವರು ಮೂಲತಃ ಮಂಗಳೂರಿನ ಉರ್ವ ಮಾರ್ಕೇಟ್‍ನ ನಿವಾಸಿಯಾಗಿದ್ದಾರೆ.