Home ಕರಾವಳಿ Archive by category ಕಾಸರಗೋಡು

ಉಪ್ಪಳ: ವೀರನಗರ ಜನನಿ ಆರ್ಟ್ ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ವಿವಿಧ ಆಟೋಟ ಸ್ಪರ್ಧೆ

ಉಪ್ಪಳದ ಅಡ್ಕ ವೀರನಗರ ಜನನಿ ಆರ್ಟ್ ಸ್ ಮತ್ತುಸ್ಪೋರ್ಟ್ಸ್ ಕ್ಲಬ್ ವತಿಯಿಂದ 27ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಚತುರ್ಥಿ ಪ್ರಯುಕ್ತ ಆಟೋಟ ಸ್ಪರ್ಧೆಗಳು ನಡೆದವು. ವೀರನಗರ ಅಡ್ಕ ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ಸ್ಪರ್ಧಾ ಕಾರ್ಯಕ್ರಮಗಳು ನಡೆದವು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿ ವೀರನಗರ ಅಡ್ಕ ವಹಿಸಿದ್ದರು. ಈ ಸಂದರ್ಭದಲ್ಲಿ ಬಜರಂಗದಳ

ಉಪ್ಪಳ: ಮುಳಿಂಜ ಶಿವತೀರ್ಥಪದವಿನಲ್ಲಿ 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಪನ್ನ

ಉಪ್ಪಳ ಮುಳಿಂಜ ಶಿವತೀರ್ಥಪದವಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ಸಿದ್ದಿವಿನಾಯಕ ಸಾರ್ವಜನಿಕ ಸಂಸ್ಥೆಯ ಆಶ್ರಯದಲ್ಲಿ 44 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಿತು. ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಹಾಗೂ ಸಾರ್ವಜನಿಕರಿಗಾಗಿ ವಿವಿಧ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು. ವಿವಿಧ ವೈದಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಶ್ರೀ ಗಣೇಶನ ಭವ್ಯವಾದ ಶೋಭಾ ಯಾತ್ರೆಯು

ಮಂಜೇಶ್ವರ: ಕಸ ಎಸೆಯುವವರ ಪತ್ತೆಗೆ ಸಿಸಿ ಕ್ಯಾಮರಾ ಅಳವಡಿಕೆ

ಮಂಜೇಶ್ವರ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಎಸೆಯುತ್ತಿದ್ದು ಇದರಿಂದ ಜನತೆ ಸಾಂಕ್ರಾಮಿಕ ರೋಗದ ಭೀತಿಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದ್ದಾರೆ. ಮಂಜೇಶ್ವರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಬಿಸಾಡುವವರ ವಿರುದ್ಧ ಹಲವು ರೀತಿಯ ವಿಭಿನ್ನವಾದ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುತಿದ್ದರೂ ಯಾವುದೂ ಫಲಪ್ರದವಾಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿರುವ

ಕಾಸರಗೋಡು: ಹೊಸಂಗಡಿಯ ಪ್ರೇರಣಾ ಜಿಲ್ಲಾ ಕಾರ್ಯಾಲಯದಲ್ಲಿ ಶ್ರೀ ಅಶ್ವತ್ಥೋಪನಯನ, ವಿವಾಹೋತ್ಸವ, ಸಾಮೂಹಿಕ ಅಶ್ವತ್ಥನಾರಾಯಣ ಪೂಜೆ

ಕಾಸರಗೋಡಿನ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಮಿತಿ ಹಾಗೂ ಹೊಸಂಗಡಿಯ ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಅಶ್ವತ್ಥೋಪನಯನ, ವಿವಾಹೋತ್ಸವ ಮತ್ತು ಸಾಮೂಹಿಕ ಅಶ್ವತ್ಥನಾರಾಯಣ ಪೂಜೆಯು ಹೊಸಂಗಡಿಯ ಪ್ರೇರಣಾ ಜಿಲ್ಲಾ ಕಾರ್ಯಾಲಯದಲ್ಲಿ ನಡೆಯಿತು. ಸಕಲ ದೇವತೆಗಳು ನೆಲೆಸಿರುವ ದೇವ ಸ್ವರೂಪದ ಮರವೆಂದೇ ಪೂಜಿಸಲ್ಪಡುವ ಸರ್ವ ದೋಷಗಳನ್ನೂ ಸಕಲ ರೋಗಗಳನ್ನೂ ನಿವಾರಣೆಗೊಳಿಸಬಲ್ಲ ಅತ್ಯಂತ ಪವಿತ್ರ ಅಶ್ವತ್ಥವೃಕ್ಷದ ಶ್ರೀ ಅಶ್ವತ್ಥೋಪನಯನ, ವಿವಾಹೋತ್ಸವ ಮತ್ತು

ಉಪ್ಪಳ: ಮುಳಿಂಜ ಶಿವತೀರ್ಥಪದವಿನಲ್ಲಿ 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಉಪ್ಪಳ ಮುಳಿಂಜ ಶಿವತೀರ್ಥಪದವಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ಸಿದ್ದಿವಿನಾಯಕ ಸಾರ್ವಜನಿಕ ಸಂಸ್ಥೆಯ ಆಶ್ರಯದಲ್ಲಿ ೪೪ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯುತ್ತಿದೆ. ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಹಾಗೂ ಸಾರ್ವಜನಿಕರಿಗಾಗಿ ವಿವಿಧ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು. ವಿವಿಧ ವೈದಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯುತ್ತಿದೆ.

ಮಂಜೇಶ್ವರ: ಕುಳೂರು ಸಂತಡ್ಕದ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ: ಸಂಭ್ರಮ

ಮಂಜೇಶ್ವರ ಕುಳೂರು ಸಂತಡ್ಕದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರದ ಪರಿಸರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗ್ಗೆ ಗಣಪತಿಯ ಪ್ರತಿಷ್ಠಾಪನೆಗೊಂಡು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಮೆರವಣಿಗೆ ವಾದ್ಯ ಘೋಷಣೆ ಭಜನಾ ತಂಡಗಳ ಪ್ರದರ್ಶನದೊಂದಿಗೆ ಹೊರಟ ವಿಸರ್ಜನಾ ಮೆರವಣಿಗೆಯು ಬಾಳ್ಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರ ಸಂತಡ್ಕ ಬೇಳದ ಮೂಲಕ

*ಮಂಗಲ್ಪಾಡಿ: ಮುಟ್ಟಂ ನವೋದಯ ಮಿತ್ರ ವೃಂದದಿಂದ 32ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮ

ಮಂಗಲ್ಪಾಡಿ ಮುಟ್ಟಂ ನವೋದಯ ಮಿತ್ರ ವೃಂದದ ವತಿಯಿಂದ 32ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಮುಟ್ಟಂನಲ್ಲಿ ಜರುಗಿತು. ಧಾರ್ಮಿಕ ಕಾರ್ಯಕ್ರಮದಂಗವಾಗಿ ಚಂದ್ರಶೇಖರ ನಾವಡ ಬಜಕೊಡ್ಲು ಅವರ ಪೌರೋಹಿತ್ಯದದಲ್ಲಿ ಬೆಳಿಗ್ಗೆ ಶ್ರೀ ಗಣಪತಿ ದೇವರ ವಿಗ್ರಹ ಪ್ರತಿಷ್ಠೆ, ಗಣಹೋಮ, ಪ್ರತಿಷ್ಠೆ ಪೂಜೆ, ಸಾಮೂಹಿಕ ಪ್ರಾರ್ಥನೆ ನೆರವೇರಿತು. ಸೀರೆ ಶ್ರೀ ಶಂಕರನಾರಾಯಣ ಭಜನಾ ಸಂಘ ಶಿರಿಯ ವತಿಯಿಂದ ಮತ್ತು ಅಡ್ಕ ಶ್ರೀ ಭಗವತೀ ಮಹಿಳಾ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ ನಡೆಯಿತು.

ಉಪ್ಪಳ: ಕಲಾವಿದ, ನಿರ್ದೇಶಕ, ಅಧ್ಯಾಪಕ ನವೀನ್ ಚಂದ್ರ ಐಲ ನಿಧನ

ಉಪ್ಪಳ: ಕಲಾವಿದ, ನಿರ್ದೇಶಕ, ಪ್ರಸ್ತುತ ಅಧ್ಯಾಪಕರಾಗಿರುವ ಮೂಲತಃ ಉಪ್ಪಳ ಐಲ ನಿವಾಸಿಯೂ ಇದೀಗ ಮಂಗಳೂರು ಬಿಕರ್ಣಕಟ್ಟೆಯಲ್ಲಿ ವಾಸಿಸುತಿದ್ದ ನವೀನ್ ಚಂದ್ರ ಐಲ (54) ಹೃದಯಾಘಾತಗೊಂಡು ರಾತ್ರಿ ಸ್ವ-ಗೃಹದಲ್ಲಿ ನಿಧನರಾದರು. ಉಪ್ಪಳ, ಐಲ ಬೋವಿ ಶಾಲಾ ಬಳಿಯ ಶ್ರೀ ಗುತ್ಯಮ್ಮ ಭಗವತೀ ಕ್ಷೇತ್ರ ಸಮೀಪ ನಿವಾಸಿಯಾಗಿರುವ ದಿ.ಕಣ್ಣ ಪೂಜಾರಿ – ದಿ. ಲಕ್ಷ್ಮಿ ದಂಪತಿ ಪುತ್ರರಾಗಿರುವ ನವೀನ್ ಚಂದ್ರ ಐಲರವರು ಮಂಗಳೂರಿನ ಬಿಕರ್ಣಕಟ್ಟೆಯಲ್ಲಿ ಕಳೆದ 9 ವರ್ಷಗಳಿಂದ

ಉಪ್ಪಳ: ಶ್ರೀ ಭಗವತೀ ಕ್ಷೇತ್ರದಲ್ಲಿ ಸುತ್ತುಗೋಪುರ ಪುನರ್ ನಿರ್ಮಾಣದ ಶಿಲಾನ್ಯಾಸ

ಉಪ್ಪಳದ ಶ್ರೀ ಭಗವತೀ ಕ್ಷೇತ್ರದಲ್ಲಿ ಸುತ್ತುಗೋಪುರ ಪುನರ್ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ನಡೆಯಿತು. ಉಪ್ಪಳದ ಶ್ರೀ ಭಗವತೀ ಕ್ಷೇತ್ರ ಪುನರ್ ನಿರ್ಮಾಣಗೊಳ್ಳುತ್ತಿದೆ. ಶ್ರೀ ದೇವಳ ಸುತ್ತುಗೋಪುರ ಪುನರ್ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಬೆಳಿಗ್ಗೆ 9 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಪ್ರಾರ್ಥನೆ ನೆರವೇರಿತು. ನಂತರ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಮುಂಬೈ ಉದ್ಯಮಿ ಹೇರಂಭ ಇಂಡಸ್ಟ್ರೀಸ್‍ನ ಸದಾಶಿವ

ಮಂಜೇಶ್ವರ: ಉಪಯೋಗ ಶೂನ್ಯವಾದ ಪ್ಲಾಸ್ಟಿಕ್ ನಿಕ್ಷೇಪ ಕೇಂದ್ರ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿಯ 8 ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಪ್ಲಾಸ್ಟಿಕ್ ನಿಕ್ಷೇಪ ಕೇಂದ್ರ ಉಪಯೋಗ ಶೂನ್ಯವಾಗಿ ಸುಮಾರು 2 ವರ್ಷ ಕಳೆದರೂ ಯಾರೂ ಇತ್ತ ಕಡೆ ಗಮನ ಹರಿಸುತ್ತಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಮಾಲಿನ್ಯ ನಿಕ್ಷೇಪ ಕೇಂದ್ರದಲ್ಲಿ ಶೇಖರಿಸಿಡಬೇಕಾದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಿಕ್ಷೇಪ ಕೇಂದ್ರದ ಹೊರಗಡೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಾಕುತ್ತಿರುವುದು ಸ್ಥಳೀಯರಲ್ಲಿ ಆತಂಕವನ್ನು ಹೆಚ್ಚಿಸಿದೆ. ನಿಕ್ಷೇಪ ಕೇಂದ್ರದ ಹೊರಗಡೆ