Home ಕರಾವಳಿ Archive by category ಕಾಸರಗೋಡು (Page 3)

ಮಂಜೇಶ್ವರ: ಕಾವಲುಗಾರನ ತೆಲೆಗೆ ಹೊಡೆದು ಗೋಣಿಯಲ್ಲಿ ಕಟ್ಟಿ ಹಾಕಿ ದರೋಡೆ

ಕಾವಲುಗಾರನ ತಲೆಗೆ ಹೊಡೆದು ಗೋಣಿಯೊಯೊಳಗೆ ಕಟ್ಟಿ ಹಾಕಿ ಮಂಜೇಶ್ವರದ ಹೃದಯ ಭಾಗವಾದ ಹೊಸಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ರಾಜಧಾನಿ ಜ್ಯುವೆಲ್ಲರಿಯ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಭಾರಿ ಮೌಲ್ಯದ ಬೆಳ್ಳಿ ಆಭರಣ ಹಾಗೂ ಲಕ್ಷಾಂತರ ರೂ. ನಗದನ್ನು ಕೊಂಡೊಯ್ದಿದ್ದಾರೆ. ಕಳೆದ ರಾತ್ರಿ ಎರಡು ಗಂಟೆಯ ಸುಮಾರಿಗೆ ಎರಡು ಕಾರಿನಲ್ಲಿ ಆಗಮಿಸಿದ ಎಂಟು ಮಂದಿಯ ತಂಡ ಈ

ಇಸ್ರೇಲ್ ಪತ್ತೇದಾರಿ ಸಾಫ್ಟ್‌ವೇರ್ ಪೆಗಾಸಸ್ ವಿಚಾರ : ಮಂಜೇಶ್ವರದಲ್ಲಿ ಎಐವೈ ಎಫ್‌ನಿಂದ ಪ್ರತಿಭಟನೆ

ಮಂಜೇಶ್ವರ: ಕೇಂದ್ರ ಸರ್ಕಾರವು ವಿರೋಧ ಪಕ್ಷದ ನಾಯಕರ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸೇರಿದಂತೆ ದೂರವಾಣಿ ವಿವರಗಳನ್ನು ಸೋರಿಕೆ ಮಾಡಿರುವುದು ಅತ್ಯಂತ ಗಂಭೀರವಾಗಿದೆ.ಇರ ವಿರುದ್ಧ ಎ ಐ ವೈ ಎಫ್ ಮಂಜೇಶ್ವರ ಮಂಡಲ ಸಮಿತಿಯ ವತಿಯಿಂದ ಹೊಸಂಗಡಿಯಲ್ಲಿ ಪ್ರತಿಭಟನಾ ಧರಣಿ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ ಕೃಷ್ಣನ್ ಪೆಗಾಸಸ್ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಸೇವೆ ಸಲ್ಲಿಸುತ್ತದೆ. ಆದ್ದರಿಂದ ಕೇಂದ್ರ ಸಚಿವರು ಸೇರಿದಂತೆ

ಮಂಜೇಶ್ವರದಲ್ಲಿ ಮದ್ಯಸಾಗಟದ ಆಟೋ ರಿಕ್ಷಾ ಪಲ್ಟಿ ರಿಕ್ಷಾ ಚಾಲಕ ಪರಾರಿ

ಮಂಜೇಶ್ವರ: ಪೊಲೀಸರ ಕಣ್ತಪ್ಪಿಸಿ ಕರ್ನಾಟಕದ ಒಳ ರಸ್ತೆಯಿಂದ ಅಮಿತ ವೇಗದಲ್ಲಿ ಆಗಮಿಸಿದ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಗೆ ಅಲ್ಪ ಮುಂದೆ ಪಲ್ಟಿಯಾಗಿದೆ. ಚಾಲಕನಿಗೆ ಅಲ್ಪ ಗಾಯವಾಗಿದ್ದರೂ ಇದ್ದಲ್ಲಿಂದ ಎದ್ದು ಪರಾರಿಯಾಗಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇಂದು ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ಕುಂಜತ್ತೂರು ಪದವು ರಸ್ತೆಯಂದ ಮದ್ಯವನ್ನು ಹೇರಿಕೊಂಡು ಆಗಮಿಸಿದ ರಿಕ್ಷಾ ಪಲ್ಟಿಯಾಗಿದೆ. ಬಳಿಕ ಊರವರು

ತೂಮಿನಾಡು ಪದವು ಕಾಂಕ್ರೀಟ್ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ : ಸ್ಥಳೀಯ ನಾಗರಿಕರಿಂದ ದೂರು

ಮಂಜೇಶ್ವರ : ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ 2016-17 ರಲ್ಲಿ ಮಂಜೇಶ್ವರ ಹಾರ್ಬರ್ ಇಂಜಿನಿಯರಿಂಗ್ ಉಸ್ತುವಾರಿಯಲ್ಲಿ ಮಂಜೂರಾದ. ಪಂಡ್ ನಿಂದ ನಡೆಸಿದ 685 ಮೀಟರ್ ವ್ಯಾಪ್ತಿಯಲ್ಲಿ ತೂಮಿನಾಡು ಪದವು ಕಾಂಕ್ರೀಟ್ ರಸ್ತೆ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ವಿಜಿಲೆನ್ಸ್ ಇಲಾಖೆಯಲ್ಲಿ ಸ್ಥಳೀಯ ನಾಗರಿಕರಿಂದ ಹಾಗೂ ಬಿಜೆಪಿ ಮತ್ತು ಸಿಪಿಎಂ ಲೋಕಲ್ ಕಮಿಟಿಯ ವತಿಯಿಂದ ದೂರು ದಾಖಲಿಸಿದ್ದಾರೆ. ಕಾಮಗಾರಿ ನಡೆದ ಬಳಿಕ ಈ ರಸ್ತೆಗೆ ಕೇವಲ ಒಂದು

ಮಂಜೇಶ್ವರ: ಡಾ. ಡಿ. ಕೆ ಚೌಟರ 2ನೇ ವರ್ಷದ “ನೆನಪು” ಕಾರ್ಯಕ್ರಮ

ಮಂಜೇಶ್ವರ : ಜಮೀನ್ದಾರ್ ಕುಟುಂಬ ಹಿನ್ನೆಲೆಯಿಂದ ಬಂದರೂ ಬದುಕನ್ನು ನೊಂದವರ, ಶೋಷಿತರ ದನಿಯನ್ನಾಗಿಸಿದ ಕಲಾಪ್ರೇಮಿ, ರಂಗಕರ್ಮಿ,ಸಾಹಿತಿ, ಸಾಂಸ್ಕೃತಿಕ ರಾಯಭಾರಿ ದಿ. ಡಾ. ಡಿ. ಕೆ ಚೌಟರ 2ನೇ ವರ್ಷದ “ನೆನಪು” ಕಾರ್ಯಕ್ರಮ ಮಂಜೇಶ್ವರ ದ ಗೋವಿಂದ ಪೈ ನಿವಾಸ ’ಗಿಳಿವಿಂಡು’ನಲ್ಲಿ ನಡೆಯಿತು.ರಾಷ್ಟ್ರಕವಿಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ, ಸಾಮಾಜಿಕ ಮುಂದಾಳು ಕೆ. ಆರ್. ಜಯಾನಂದ ನೆನಪಿನ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು

ಪೆರ್ಲದಲ್ಲಿ ರಿಕ್ಷಾ ಚಾಲಕರಿಗೆ ಉಚಿತ ಪೆಟ್ರೊಲ್/ಡಿಸೇಲ್ ವಿತರಣೆ

ಕೋರೋನ ಮಹಾಮಾರಿಯಿಂದ  ಜಗತ್ತೇ ತತ್ತರಿಸಿದ ಸಂದರ್ಭದಲ್ಲಿ ಲಾಕ್ ಡೌನ್ ಘೊಷಿಸಿದಾಗ ಸಂಕಷ್ಟಕ್ಕೀಡಾದವರ ಸಹಾಯಕ್ಕೆ ಸಮರೋಪಾದಿ ಕಾರ್ಯಗಳು ನಡೆದವು. ಹಲವಾರು ಸಂಘಟನೆಗಳು, ಸಹೃದಯಿಗಳು,ಕೊಡುಗೈ ದಾನಿಗಳು ಸಂತ್ರಸ್ತರ ನೆರವಿಗೆ ಬಂದರು. ಆದರೆ ಇದೇ ಸಂದರ್ಭಕ್ಕನುಗುಣವಾಗಿ ಇಲ್ಲೊಬ್ಬರು ದುಬೈ ಉದ್ಯೋಗಿ ತನ್ನ ಮಾಲೀಕತ್ವದಲ್ಲಿರುವ ಊರಿನ ಪೆಟ್ರೊಲ್ ಬಂಕ್ ಮೂಲಕ ರಿಕ್ಷಾ ಚಾಲಕರಿಗೆ ಉಚಿತ ಪೆಟ್ರೊಲ್/ಡಿಸೇಲ್ ವಿತರಿಸುವ ಮೂಲಕ ರಿಕ್ಷಾ ಚಾಲಕರಿಗೆ ತಮ್ಮ ಕೈಲಾದ ಕೊಡುಗೆ

ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯಿಂದ ಪ್ರತಿಭಟನೆ

ಮಂಜೇಶ್ವರ: ವ್ಯಾಪಾರ ವಲಯದಲ್ಲಿ ಸರಕಾರದ ನಿಯಂತ್ರಣಗಳು ದಿನದಿಂದ ದಿನಕ್ಕೆ ಉಲ್ಬಣಗೊಳುತ್ತಿರುವ ಹಿನ್ನೆಲೆಯಲ್ಲಿ ಸರಕಾರ ನೀತಿಯನ್ನು ಖಂಡಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾ ಮಟ್ಟದಲ್ಲಿ ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ಮಂಜೇಶ್ವರದ ಹೊಸಂಗಡಿಯಲ್ಲೂ ಮಂಜೇಶ್ವರ ವ್ಯಾಪಾರ ಯೂನಿಟ್ ನ ನೇತೃತ್ವದಲ್ಲಿ ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಒಂದು ಗಂಟೆಗಳ ಕಾಲ ನಿಂತುಕೊಂಡು ಪ್ರತಿಭಟನೆಯನ್ನು ನಡೆಸಿ ಗಮನ ಸೆಳೆದರು. ಕೆಲವೊಂದು ಅಂಗಡಿಗಳನ್ನು

ಮಂಜೇಶ್ವರ ಗ್ರಾ.ಪಂ. ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿನ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಸರಕಾರಿ ಜಿಡಬ್ಲ್ಯುಎಲ್‍ಪಿ ಶಾಲೆ ಮಂಜೇಶ್ವರದಲ್ಲಿ ನಡೆಯಿತು. ಕೋವಿಡ್ ಮಾನದಂಡಗಳನ್ನು ಪಾಲಿಸಿ ಕೊಂಡು ಮಂಜೇಶ್ವರ ಗ್ರಾಮ ಪಂಚಾಯತು ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಲಾ ಪರಿಸರದಲ್ಲಿ ಗಿಡ ನೀಡುವುದರೊಂದಿಗೆ ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ ಉದ್ಘಾಟಿಸಿದರು. ಈ ಸಂದರ್ಭ

ಮಂಜೇಶ್ವರದಲ್ಲಿ ಗುಜರಿ ಅಂಗಡಿಗೆ ನುಗ್ಗಿದ ಕಳ್ಳರು

ಮಂಜೇಶ್ವರ: ತೂಮಿನಾಡು ಪದವು ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಗುಜರಿ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು ಒಂದೂವರೆ ಲಕ್ಷ ರೂ ಬೆಲೆಬಾಳುವ ಗುಜರಿ ಸಾಮಾಗ್ರಿಗಳನ್ನು ಕೊಂಡೊಯ್ದಿದ್ದಾರೆ.  ಕಳೆದ ರಾತ್ರಿ ಕಳವು ನಡೆದಿದ್ದು, ಗುಜರಿ ಸಾಮಾಗ್ರಿಗಳನ್ನು ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿವೆ. ಅಂಗಡಿಯ ಮುಂಭಾಗದ ಗೇಟನ್ನು ಮುರಿದು ಒಳನುಗ್ಗಿದ ಕಳ್ಳರ ತಂಡ ಓಮ್ನಿ ವ್ಯಾನಿನಲ್ಲಿ ಸಾಮಾಗ್ರಿಗಳನ್ನು ಸಾಗಿಸಿದೆ. ಮೂಲತಃ ಉಳ್ಳಾಲ ನಿವಾಸಿಯೂ

ಮಂಜೇಶ್ವರದಲ್ಲಿ ಎಲ್‍ಡಿಎಫ್‍ನಿಂದ ಲಕ್ಷದ್ವೀಪ ಸಂರಕ್ಷಿಸಿ ಪ್ರತಿಭಟನೆ

ಮಂಜೇಶ್ವರ: ಲಕ್ಷದ್ವೀಪ ಸಂರಕ್ಷಿಸಿರಿ ಎಂಬ ಘೋಷಣೆಯನ್ನು ಮುಂದಿಟ್ಟುಕೊಂಡು ಎಲ್‍ಡಿಎಫ್ ಕೇರಳ ರಾಜ್ಯ ಸಮಿತಿಯ ಕರೆಯಂತೆ ಮಂಜೇಶ್ವರ ಪ್ರಧಾನ ಅಂಚೆ ಕಚೇರಿ ಮುಂದೆ ನಡೆದ ಧರಣ ಸತ್ಯಾಗ್ರಹವನ್ನು ಎಲ್‍ಡಿಎಫ್ ಮಂಜೇಶ್ವರ ಮಂಡಲ ಸಂಚಾಲಕ ಬಿವಿ.ರಾಜನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪ್ರಫುಲ್ ಪಾಟೀಲ್ ಎಂಬ ಸಂಘ ಪರಿವಾರದ ಏಜಂಟನ್ನು ಮುಂದಿಟ್ಟು ಲಕ್ಷದ್ವೀಪ ಜನತೆಯೊಂದಿಗೆ ನಡೆಸುತ್ತಿರುವ ಯುದ್ಧವನ್ನು ಕೊನೆಗಾಣಿಸಬೇಕು, ಸ್ಥಳೀಯ ಜನರ ಜೀವನ ಶೈಲಿ ಹಾಗೂ ಲಕ್ಷ