Home ಕರಾವಳಿ Archive by category ಬೆಳ್ತಂಗಡಿ (Page 3)

ಶಿಬಾಜೆ: ಅಜಿರಡ್ಕದಲ್ಲಿ ಕಾಡಾನೆ ದಾಳಿ; ಕೃಷಿ ನಾಶ

ಕೊಕ್ಕಡದ ಶಿಬಾಜೆ ಗ್ರಾಮದ ಅಜಿರಡ್ಕ ಶ್ರೀಧರ ರಾವ್ ರವರ ತೋಟಕ್ಕೆ ತಡರಾತ್ರಿ ಕಾಡಾನೆ ದಾಳಿ ಮಾಡಿ ಪಸಲಿಗೆ ಬರುವ ತೆಂಗಿನ ಗಿಡ, ಕೊಕ್ಕೋ ಗಿಡ, ಬಾಳೆಗಿಡ ಅಪಾರ ಪ್ರಮಾಣದಲ್ಲಿ ನಾಶ ಮಾಡಿದೆ. ಈ ಹಿಂದೆಯೂ ಇವರ ತೋಟಕ್ಕೆ ಧಾಳಿ ಮಾಡಿದ್ದು ಕೃಷಿ ಹಾನಿ ಉಂಟು ಮಾಡಿತ್ತು, ಮೇ 6ರಂದು ಶಿಶಿಲ ಗ್ರಾಮದ ಕಳ್ಳಾಜೆ ದಿವಾಕರ ಗೌಡ ಇವರ ತೋಟಕ್ಕೂ ಧಾಳಿ ಮಾಡಿರುವ ಬಗ್ಗೆ ಮಾಹಿತಿ

ಮೇ 9ರಂದು ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟ

2023-24ನೇ ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಮೇ 9ರಂದು ಪ್ರಕಟಗೊಳ್ಳಲಿದೆ. ಮಾರ್ಚ್ 25 ರಿಂದ ಎಪ್ರಿಲ್ 06ರವರೆಗೆ ಎಸೆಸೆಲ್ಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈಗ ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ತಿಳಿಸಿದೆ.

ದ.ಕ. ಮತ್ತು ಉಡುಪಿ ಜಿಲ್ಲೆಯ ಲೋಕಾಯುಕ್ತ ಎಸ್.ಪಿ. ಸೈಮನ್ ಸಿ.ಎ ಅವರಿಗೆ ಜೋರ್ಜಿಯನ್ ಪುರಸ್ಕಾರ

ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ ನ ಏಳು ದಿನಗಳ ವಾರ್ಷಿಕ ಹಬ್ಬದಂದು ಪ್ರತಿ ವರ್ಷ ಸಮಾಜದಲ್ಲಿ ಉತ್ತಮ ಸೇವಾ ಕಾರ್ಯಗಳನ್ನು ಮಾಡಿದವರಿಗೆ ಕೊಡ ಮಾಡುವ ಜೋರ್ಜಿಯನ್ ಪುರಸ್ಕಾರವನ್ನು ದ.ಕ. ಮತ್ತು ಉಡುಪಿ ಜಿಲ್ಲೆಯ ಲೋಕಾಯುಕ್ತ ಎಸ್.ಪಿ. ಸೈಮನ್ ಸಿ.ಎ ಅವರಿಗೆ ಪ್ರಧಾನ ಮಾಡಲಾಯಿತು. ಚರ್ಚ್ ನ ಧರ್ಮಗುರು ರೆ.ಫಾ.ವರ್ಗೀಸ್ ತೋಮಸ್, ವಿವಿಧ ಚರ್ಚ್ ನ ಧರ್ಮ ಗುರುಗಳು, ಟ್ರಸ್ಟಿ ಜೋನ್ ಎಬ್ರಹಾಂ, ಚೀರಮಟ್ಟಂ, ಕಾರ್ಯದರ್ಶಿ

ಶಿಬಾಜೆ: ಅಜಿರಡ್ಕದಲ್ಲಿ ಕಾಡಾನೆ ದಾಳಿ- ಕೃಷಿ ನಾಶ

ಕೊಕ್ಕಡ : ಶಿಬಾಜೆ ಗ್ರಾಮದ ಅಜಿರಡ್ಕ ಶ್ರೀಧರ ರಾವ್ ರವರ ತೋಟಕ್ಕೆ ಮೇ 7ರಂದು ತಡರಾತ್ರಿ ಕಾಡಾನೆ ದಾಳಿ ಮಾಡಿ ಪಸಲಿಗೆ ಬರುವ ತೆಂಗಿನ ಗಿಡ, ಕೊಕ್ಕೋ ಗಿಡ, ಬಾಳೆಗಿಡ ಅಪಾರ ಪ್ರಮಾಣದಲ್ಲಿ ನಾಶ ಮಾಡಿದೆ. ಈ ಹಿಂದೆಯೂ ಇವರ ತೋಟಕ್ಕೆ ಧಾಳಿ ಮಾಡಿದ್ದು ಕೃಷಿ ಹಾನಿ ಉಂಟು ಮಾಡಿತ್ತು, ಮೇ 6ರಂದು ಶಿಶಿಲ ಗ್ರಾಮದ ಕಳ್ಳಾಜೆ ದಿವಾಕರ ಗೌಡ ಇವರ ತೋಟಕ್ಕೂ ಧಾಳಿ ಮಾಡಿರುವ ಬಗ್ಗೆ ಮಾಹಿತಿ ಲಭಿಸಿದೆ.

ದ.ಕ ದಲ್ಲಿ ಮತದಾನಕ್ಕೆ ಎಲ್ಲಾ ಸಿದ್ಧತೆ ಪೂರ್ಣ : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಎ.26ರಂದು ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎ.೨೪.ರಂದು ಸಂಜೆ 6ಗಂಟೆಗೆ ಎಲ್ಲಾ ರೀತಿಯ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.ಎ.26ರಂದು ದಕ್ಷಿಣ ಕನ್ನಡ ಜಿಲ್ಲೆಯ 1876ಮತಗಟ್ಟೆಗಳಲ್ಲಿ ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಮತದಾನ ನಡೆಸಲು ಎಲ್ಲಾ ಸಿದ್ದತೆ ಪೂರ್ಣ ಗೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಹಾಗೂ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ

ಗೋಳಿತ್ತೊಟ್ಟು: ಕಾಡಾನೆ ದಾಳಿ-ಕೃಷಿ ನಾಶ

ನೆಲ್ಯಾಡಿ: ಗೋಳಿತ್ತೊಟ್ಟು ಪರಿಸರದಲ್ಲಿ ಕಳೆದ 1 ವಾರದಿಂದ ಕಾಡಾನೆಯೊಂದು ಕೃಷಿ ತೋಟಗಳಿಗೆ ದಾಳಿ ನಡೆಸಿ ಅಪಾರ ಕೃಷಿ ನಾಶಗೊಳಿಸಿರುವುದಾಗಿ ವರದಿಯಾಗಿದೆ. ಗೋಳಿತ್ತೊಟ್ಟು ಗ್ರಾಮದ ಚೆನ್ನಪ್ಪ ಗೌಡ ಕುದ್ಕೋಳಿ, ಚಿದಾನಂದ ಗೌಡ ಅನಿಲ, ಪಿಲಿಫ್ ಬಳಕ ಹಾಗೂ ಪರಿಸರದ ನಿವಾಸಿಗಳ ತೋಟಗಳಿಗೆ ಕಾಡಾನೆ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಕೃಷಿ ನಾಶಗೊಳಿಸಿದೆ. ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಎ.11ರಂದು ಪರಿಸರಕ್ಕೆ ಭೇಟಿ ನೀಡಿದ್ದು ಅರಣ್ಯದಂಚಿನಲ್ಲಿ

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಭೇಟಿ

ಕೊಕ್ಕಡ: ಬಯಲು ಆಲಯ ಪ್ರಖ್ಯಾತ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ದ.ಕ ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ, ಕೊಕ್ಕಡ ಸಿಎ ಬ್ಯಾಂಕ್ ನ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ವೇಣೂರು ಸಿಎ ಬ್ಯಾಂಕ್ ನ ಅಧ್ಯಕ್ಷ ಸುಂದರ ಹೆಗ್ಡೆ,

ಪಿಯುಸಿ ಫಲಿತಾಂಶ: ದ.ಕ. ಪ್ರಥಮ, ಉಡುಪಿ ದ್ವಿತೀಯ

ಕರ್ನಾಟಕ 2023-24ರ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಯುಥಾಪ್ರಕಾರ ಹೆಣ್ಣುಮಕ್ಕಳು ಮೇಲುಗಯ್ ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯು ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದೆ.ಗದಗ ಜಿಲ್ಲೆಯು ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿದೆ. ಬೆಂಗಳೂರಿನ ಮೇಧಾ ಡಿ. ಅವರು ಕಲಾ ವಿಭಾಗದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ; ಅಲ್ಲದೆ ವಿಜಯಪುರದ ವೇದಾಂತ್ ಮತ್ತು ಕವಿತಾ ಕೂಡ ಟಾಪರ್‌ಗಳಲ್ಲಿ ಇದ್ದಾರೆ. ವಿಜ್ಞಾನ ವಿಭಾಗದಲ್ಲಿ 598 ಅಂಕ ಪಡೆದ ವಿದ್ಯಾಲಕ್ಷ್ಮಿ ಮೊದಲ

ಉದನೆ: ಖಾಸಗಿ ಬಸ್, ಕಂಟೈನರ್ ಡಿಕ್ಕಿ-ಹಲವರಿಗೆ ಗಾಯ

ನೆಲ್ಯಾಡಿ: ಖಾಸಗಿ ಬಸ್ಸ ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ ಹಲವರು ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉದನೆ ಸಮೀಪದ ನೇಲ್ಯಡ್ಕದಲ್ಲಿ ಎ.3ರಂದು ಸಂಜೆ ನಡೆದಿದೆ. ಪಿರಿಯಾಪಟ್ಟಣದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ವರನ ಕಡೆಯ ಮದುವೆ ದಿಬ್ಬಣದ ಖಾಸಗಿ ಬಸ್ ಇನ್ನೊಂದು ಬಸ್ಸನ್ನು ಓವರ್ ಟೇಕ್ ಮಾಡುವ ವೇಳೆ ಎದುರುಗಡೆಯಿಂದ ಬರುತ್ತಿದ್ದ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಬಸ್‌ನಲ್ಲಿದ್ದ ಸುಮಾರು 20ಕ್ಕೂ

ಗೋಳಿತ್ತೊಟ್ಟು: ದ್ವಿಚಕ್ರ ವಾಹನಗಳ ಅಪಘಾತದ ಗಾಯಾಳು ನಿಧನ

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಸಮೀಪ ಮಾ.30ರಂದು ರಾತ್ರಿ ಬೈಕ್‌ಗಳ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸಾವರ, ಗೋಳಿತ್ತೊಟ್ಟು ಗ್ರಾಮದ ಸಣ್ಣಂಪಾಡಿ ನಿವಾಸಿ ವಿನಯ್(26ವ.)ಅವರು ಚಿಕಿತ್ಸೆಗೆ ಸ್ಪಂದಿಸದೆ ಮಾ.31ರ ಮಧ್ಯಾಹ್ನದ ವೇಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸಣ್ಣಂಪಾಡಿ ನಿವಾಸಿ ಜೇಕಬ್ ಅವರ