Home Archive by category ಕ್ರೈಮ್

ಮಂಜೇಶ್ವರ : ಶಸ್ತ್ರಾಸ್ತ್ರದೊಂದಿಗೆ ತಿರುಗಾಡುತ್ತಿದ್ದ ವ್ಯಕ್ತಿಯ ಬಂಧನ

ಮಂಜೇಶ್ವರ: ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಬಂದೂಕು ಹಾಗೂ ಶಸ್ತ್ರಾಸ್ತ್ರದೊಂದಿಗೆ ಉಪ್ಪಳದಲ್ಲಿ ತಿರುಗಾಡುತಿದ್ದ ಮೂವರನ್ನು ಮಂಜೇಶ್ವರ ಎಸ್ಸೈ ಅನ್ಸಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಈ ತಂಡದಲ್ಲಿದ್ದ ಪ್ರಮುಖ ಆರೋಪಿ ಅಯಾಝ್ ಎಂಬಾತನನ್ನು ಆತನ ಸಹೋದರ ಪೊಲೀಸರಲ್ಲಿ ಬಲ ಪ್ರಯೋಗಿಸಿ ಬಿಡಿಸಿರುವುದಾಗಿ ಆರೋಪಿಸಲಾಗಿದೆ. ಬಳಿಕ ಹೆಚ್ಚಿನ ಪೊಲೀಸರು

ಬೀಟ್ ಪೊಲೀಸ್ ಸಭೆ : ಅನೈತಿಕ ಚಟುವಟಿಕೆಗಳ ತಾಣ ಹೆಜಮಾಡಿ ಬಂದರು

ಹೆಜಮಾಡಿಯ ಮೀನುಗಾರಿಕಾ ಬಂದರು ಪ್ರದೇಶ ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದ್ದು, ಈ ಬಗ್ಗೆ ಪಡುಬಿದ್ರಿ ಪೆÇಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಸದಸ್ಯರು ಸಹಿತ ಗ್ರಾಮಸ್ಥರು ಹೆಜಮಾಡಿ ಬಂದರು ಪೊಲೀಸರಲ್ಲಿ ಆಗ್ರಹಿಸಿದ್ದಾರೆ. ಹೆಜಮಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಬೀಟ್ ಪೊಲೀಸ್ ಸಭೆಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯರೊರ್ವರು, ಶನಿವಾರ ಹಾಗೂ ಭಾನುವಾರ ಅತೀ ಹೆಚ್ಚು ಮಣಿಪಾಲ ಕಡೆಯಿಂದ ಜೋಡಿಗಳು ಬರುತ್ತಿದ್ದು , ಅವರಿಂದ ಈ ಪ್ರದೇಶಕ್ಕೆ

ಪಡುಬಿದ್ರಿ ಯುವಕನೋರ್ವ ನೇಣಿಗೆ ಶರಣು

ಪೈಂಟಿಂಗ್ ವೃತ್ತಿ ನಡೆಸುತ್ತಿದ್ದ ಯುವಕನೋರ್ವ ಅಣ್ಣನೊಂದಿಗೆ ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣೆಗೆ ಶರಣಾದ ಘಟನೆ ನಡೆದಿದೆ.ಮೃತ ಯುವಕ ಸೋನಿತ್ ಪೂಜಾರಿ(30), ಇವರು ಅಣ್ಣ ಅತ್ತಿಗೆಯೊಂದಿಗೆ ಅವರಾಲು ಮಟ್ಟು ರಸ್ತೆಯ ಬೀಡು ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದು, ಅಣ್ಣ ಅತ್ತಿಗೆ ಕೆಲಸಕ್ಕೆ ಹೋಗುತ್ತಿದ್ದು, ಅವರ ಮಗು ಶಾಲೆಗೆ ಹೋಗುತ್ತಿತ್ತು, ಇಂದು ಕೆಲಸಕ್ಕೆ ಹೋಗದ ಈತ ಸಂಜೆ ಸುಮಾರು ಐದು ಗಂಟೆಯ ವರಗೆ ಪೇಟೆಯಲ್ಲೇ ಇದ್ದ ಈತ ಮತ್ತೆ ಮನೆಗೆ ಮರಳಿದ್ದ. ಈತನ

ಅಕ್ರಮ ಮರ ಸಾಗಾಟ ಪ್ರಕರಣ ಆರೋಪಿ ಬಂಧನ

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ವಿಶಾಲನಗರ ಬಳಿ ಅಕ್ರಮವಾಗಿ ಅಕೇಶಿಯಾ ಮರ ಸಾಗಟ ಮಾಡುತ್ತಿದ್ದ ವಾಹನ ಹಾಗೂ ಆರೋಪಿಯನ್ನು ಮಂಗಳೂರು ಅರಣ್ಯ ಸಂಚಾರಿದಳದ ಸಿಬ್ಬಂದಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ವಶ ಪಡಿಸಿಕೊಂಡಿರುವ ವಾಹನ ಹಾಗೂ ಸ್ವತ್ತುಗಳ ಮೌಲ್ಯ ಸುಮಾರು 19 ಲಕ್ಷ ರೂಪಾಯಿಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒರ್ವನನ್ನು ವಶಕ್ಕೆ ಪಡೆದುಕೊಂಡಿದ್ದು ತನಿಖೆ ನ ನಡೆಸಲಾಗುತ್ತಿದೆ.ಸಂಚಾರಿದಳದ ಉಪ ಅರಣ್ಯ

ಗೃಹಿಣಿಯ ಚಿನ್ನಾಭರಣ ಎಗರಿಸಿದ ಪ್ರಕರಣ ಆರೋಪಿ ಹಲವು ಸುಲಿಗೆ ಪ್ರಕರಣಗಳಲ್ಲಿ ಭಾಗಿ

ಕುಂದಾಪುರ: ವಾರದ ಹಿಂದೆ ಮಹಿಳೆಯ ತಲೆಗೆ ರಾಡ್‍ನಿಂದ ಹಲ್ಲೆ ನಡೆಸಿ ಬಳಿಕ ಚಿನ್ನಾಭರಣಗಳನ್ನು ಎಗರಿಸಿದ ಆರೋಪಿಯನ್ನು ತ್ರಾಸಿಯ ಬಳಿ ಕುಂದಾಪುರ ಗ್ರಾಮಾಂತರ ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿತ ಆರೋಪಿಯನ್ನು ತ್ರಾಸಿಯ ಭರತ್‍ನಗರ ನಿವಾಸಿ ಪ್ರವೀಣ್ (24) ಎಂದು ಗುರುತಿಸಲಾಗಿದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿರುವ ಬೈಕ್, ಚಿನ್ನದ ಉಂಗುರ ಮತ್ತು ಗುಜ್ಜಾಡಿ ಸೊಸೈಟಿಯೊಂದರಲ್ಲಿ ಚಿನ್ನದ ಕರಿಮಣಿ ಸರ ಅಡವಿರಿಸಿ ಪಡೆದುಕೊಂಡ ನಗದು ಹಣ ಒಟ್ಟು ರೂ.

ಉಳ್ಳಾಲ : ಹಿಟ್ ಆಂಡ್ ರನ್ ಪ್ರಕರಣ ಓರ್ವ ,ಮೃತ್ಯು, ಇನ್ನೋರ್ವನಿಗೆ ಗಾಯ

ಉಳ್ಳಾಲ: ಅಪರಿಚಿತ ವಾಹನವೊಂದು ರಾಷ್ಟ್ರೀಯ ಹೆದ್ದಾರಿ 66 ರ ಜೆಪ್ಪಿನಮೊಗರು ಬಳಿ ಹುಲ್ಲುಗಳನ್ನು ಕಟಾವು ನಡೆಸುತ್ತಿದ್ದ ಇಬ್ಬರು ಕಾರ್ಮಿಕರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಾಳು ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಹೊರಜಿಲ್ಲೆಯ ಕಾರ್ಮಿಕರಾಗಿದ್ದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಹೆದ್ದಾರಿ ಬಳಿಯ ಹುಲ್ಲುಗಳನ್ನು ಕಟಾವು ನಡೆಸುತ್ತಿದ್ದಾಗ, ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ವಾಹನ ಢಿಕ್ಕಿ

ಪ್ರವೀಣ್ ನೆಟ್ಟಾರು ಹತ್ಯೆ ಮೂವರು ಆರೋಪಿಗಳ ಬಂಧನ

ಕೇರಳ ಗಡಿಭಾಗ ತಲಪಾಡಿಯ ಚೆಕ್‍ಪೋಸ್ಟ್ ಬಳಿ ಆರೋಪಿಗಳನ್ನು ಪೊಲೀಸರು ಬಂಧಿಸಲಾಯಿತು ಎಂದು ಎಡಿಜಿಪಿ ಅಲೋಕ್ ಕುಮಾರ್ ವಿವರ ನೀಡಿದರು. ಬಂಧಿತರನ್ನು ಸುಳ್ಯದ ಶಿಹಾಬುದ್ದೀನ್ (33), ರಿಯಾಜ್ ಅಂಕತ್ತಡ್ಕ (27), ಬಶೀರ್ ಎಲಿಮಲೆ (28) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಶಿಹಾಬ್ ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ ಪೂರೈಕೆ ಮಾಡುವ ವೃತ್ತಿಯಲ್ಲಿದ್ದ. ರಿಯಾಜ್ ಎಂಬಾತ ಬೆಳ್ಳಾರೆ ಮತ್ತು ಸುಳ್ಯದಲ್ಲಿ ಚಿಕನ್ ಸಪ್ಲೈ ಕೆಲಸ ಮಾಡುತ್ತಿದ್ದ, ಇನ್ನೋರ್ವ ಬಂಧಿತ

ಉಡುಪಿ : ಭಯದ ವಾತಾವರಣ ಸೃಷ್ಟಿಸಿದ ಮಾನಸಿಕ ಅಸ್ವಸ್ಥ ಚಿಕಿತ್ಸೆಗೆ ದಾಖಲು.

ಉಡುಪಿ ಆ.7, ಉಡುಪಿ ನಗರದ ಪುತ್ತೂರಿನಲ್ಲಿ ಕಳೆದ ಎರಡು ದಿನಗಳಿಂದ ಸಾರ್ವಜನಿಕರ ಮನೆಗಳಿಗೆ ರಾತ್ರಿ ಹೊತ್ತು ಪ್ರವೇಶ ಮಾಡಲು ಪ್ರಯತ್ನಿಸುವ ಹಾಗೂ ಭಯದ ವಾತಾವರಣ ಸೃಷ್ಟಿಸಿದ ಮಾನಸಿಕ ಯುವಕನನ್ನು ವಿಶು ಶೆಟ್ಟಿ ವಶಕ್ಕೆ ಪಡೆದು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ಆ.7ರ ರಾತ್ರಿ ನಡೆದಿದೆ. ರಕ್ಷಣಾ ಕಾರ್ಯದಲ್ಲಿ ಪುತ್ತೂರಿನ ತೌಫಿಕ್ ಸಹಕರಿಸಿದ್ದಾರೆ. ಯುವಕನು ತನ್ನ ಹೆಸರು ಬಸವನ್ ತಂದೆ ನಂಜುಂಡ ತಾಯಿ ರುದ್ರಮ್ಮ ಹಾಗೂ ಮನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್

ಮೂಡುಬಿದರೆ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಮೂಡುಬಿದಿರೆ: ಮಹಾವೀರ ಕಾಲೇಜು ಬಳಿಯ ಕೀರ್ತಿನಗರದ ನಿವಾಸಿ ಅಲ್ಫೋನ್ಸ್ ( 68) ಎಂಬವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಅಲ್ಫೋನ್ಸ್ ಅವರು ಕಳೆದ ಕೆಲವು ಸಮಯಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ಮನೆಯವರು ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಬಾವಿಗೆ ಹಾರಿದ್ದು ಬೆಳಿಗ್ಗೆ ಹುಡುಕಾಡಿದಾಗ ಮೃತ ದೇಹ ಬಾವಿಯಲ್ಲಿ ಪತ್ತೆಯಾಗಿದೆ. ಮೂಡುಬಿದಿರೆ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ

ಸುರತ್ಕಲ್ ಫಾಜಿಲ್ ಕೊಲೆ ಪ್ರಕರಣ ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ನಡೆದ ಕೊಲೆ ?

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಎರಡು ದಿನದ ಬಳಿಕ ಸುರತ್ಕಲ್ ನಲ್ಲಿ ಕೊಲೆಯಾದ ಫಾಝಿಲ್ ಪ್ರಕರಣದಲ್ಲಿ ನಗರ ಪೆÇಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳವಾರ ಉಡುಪಿ ಉದ್ಯಾವರ ಸಮೀಪ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಜುಲೈ 28ರಂದು