Home Archive by category ಕ್ರೈಮ್ (Page 2)

ಬೆಳ್ತಂಗಡಿ ಕಳವು ಪ್ರಕರಣ : ಕಳ್ಳರನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸರು

ಕಳೆದ ನಾಲ್ಕು ವರ್ಷದ ಹಿಂದೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದಲ್ಲಿ ಬಹಳ ಸಂಚಲನ ಹುಟ್ಟಿದ್ದ ವಾಸುದೇವ ಭಟ್ ಎಂಬವರ ಮನೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಸರಿ ಸುಮಾರು 12 ಲಕ್ಷಕ್ಕೂ ಹೆಚ್ಚು ಒಡವೆ ಹಾಗೂ ಆಭರಣ ದೋಚಿದ್ದರು. ಇದನ್ನು ಬೆನ್ನಟ್ಟಿದ ಧರ್ಮಸ್ಥಳ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಳ್ಳರನ್ನು ಪತ್ತೆ ಹಚ್ಚಿದ್ದಾರೆ. ಬಂಧಿತ ಆರೋಪಿಗಳು ಮುಂಡಾಜೆ ಗ್ರಾಮ

ಕಾಪು ಕೊಪ್ಪಲಂಗಡಿ ಬಳಿ ಭೀಕರ ಅಪಘಾತ : ಇಬ್ಬರ ಸ್ಥಿತಿ ಗಂಭೀರ

ಇಂದು ನಸುಕಿನ ವೇಳೆ ಅತೀ ವೇಗವಾಗಿ ಬಂದ ಕಾರೊಂದು ಹೆದ್ದಾರಿ ಪಕ್ಕದ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಪರಿಣಾಮ ಕಾರು ತೀವೃ ಜಖಂ ಗೊಂಡಿದ್ದು ಕಾರಿನಲ್ಲಿದ್ದ ಇಬ್ಬರ ಸ್ಥಿತಿ ಗಂಭೀರವಾದರೆ ಮತ್ತಿಬ್ಬರಿಗೆ ತೀವೃ ಸ್ವರೂಪದ ಗಾಯಗಳಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ನಾಲ್ವರು ಯುವಕರು ಪ್ರಯಾಣಿಸುತ್ತಿದ್ದ ಕಾರು ಕಾಪುವಿನ ಕೊಪ್ಪಲಂಗಡಿಯಲ್ಲಿ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಬಹುತೇಕ

ಕನ್ನಾಂಗಾರು : ಮನೆಗೆ ನುಗ್ಗಿ ನಗ ನಗದು ಕಳವು

ಮನೆಯಲ್ಲಿ ಯಾರೂ ಇಲ್ಲದನ್ನು ಖಚಿತ ಪಡಿಸಿಕೊಂಡ ಕದೀಮರು ಮನೆಯ ಬಾಗಿಲು ಹೊಡೆದು ಲಕ್ಷಾಂತರ ಮೌಲ್ಯದ ನಗ ಹಾಗೂ ಸಹಸ್ರಾರು ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಹೆಜಮಾಡಿಯ ಕನ್ನಾಂಗಾರಿನ ಅಶ್ರಫ್ ಎಂಬರ ಮನೆಯಲ್ಲಿ ಅವರ ಪತ್ನಿ ಇದ್ದು, ಭಾನುವಾರ ಮಧ್ಯಾಹ್ನ ಮನೆಗೆ ಬೀಗ ಹಾಕಿ ಕೂಗಳತೆ ದೂರದಲ್ಲಿರುವ ತನ್ನ ತಾಯಿಮನೆಗೆ ಹೋಗಿದ್ದು ರಾತ್ರಿ ಅಲ್ಲಿಯೆ ಉಳಿದಿದ್ದರು. ಸೋಮವಾರ ಸಂಜೆ ಸಮಯ ಆರ್ಡರ್ ಮಾಡಲಾದ “ಎಸಿ”ಯನ್ನು ಮನೆಗೆ ತಂದ ವ್ಯಕ್ತಿ ಮನೆಮಂದಿ

ಕೊಡಗು : SSLC ವಿದ್ಯಾರ್ಥಿನಿಯ ಕೊಲೆ ಪ್ರಕರಣ – ಆರೋಪಿಯ ಬಂಧನ

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರ ಬಿದ್ದ ಮೇ 09ರಂದು ಆರೋಪಿ ಬಾಲಕಿಯ ರುಂಡ ಕತ್ತರಿಸಿ ಎಸ್ಕೇಪ್ ಆಗಿದ್ದ. ಪೊಲೀಸರು ಹಲವು ತಂಡಗಳನ್ನು ಮಾಡಿ ಶೋಧ ಕಾರ್ಯ ನಡೆಸುತ್ತಿದ್ದರು. ಸದ್ಯ ಸೋಮವಾರಪೇಟೆ ತಾಲೂಕಿನ ಗ್ರಾಮವೊಂದರಲ್ಲಿ ಅಡಗಿದ್ದ ಆರೋಪಿ ಪ್ರಕಾಶ್‌ನನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಶಿರೂರು : ಟೂರಿಸ್ಟ್ ಕಾರಿನಲ್ಲಿ ಮೃತದೇಹ ರವಾನೆ

ಟೂರಿಸ್ಟ್ ಕಾರಿನಲ್ಲಿ ಮೃತದೇಹ ಕೊಂಡೊಯ್ಯುತ್ತಿದ್ದುದ್ದನ್ನು ಶಿರೂರ್ ಟೋಲ್ ಗೇಟ್ ಬಳಿ ಆಂಬ್ಯುಲೆನ್ಸ್ ಚಾಲಕ ತಡೆದು ನಿಲ್ಲಿಸಿದ ಘಟನೆ ನಡೆದಿದೆ.ಸ್ವಿಫ್ಟ್ ಡಿಜೈರ್ ಕಾರಿನ ಢಿಕ್ಕಿಯಲ್ಲಿ ಮೃತದೇಹವನ್ನು ಇರಿಸಿ ರವಾನೆ ಮಾಡುತ್ತಿದ್ದ. ಕಾರಿನಲ್ಲಿ ಮೃತದೇಹ ಕೊಂಡೊಯ್ಯುತ್ತಿದ್ದ ಚಾಲಕನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.ಆಂಬ್ಯುಲೆನ್ಸ್‌ನಲ್ಲಿ ಜಾಸ್ತಿ ಹಣ ಕೇಳಿದ್ದಕ್ಕಾಗಿ ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿದೆ ಎಂದು ವಾರೀಸುದಾರರು

ಪಡುಬಿದ್ರಿ: ನಾಪತ್ತೆಯಾದ ವ್ಯಕ್ತಿ ಶವವಾಗಿ ಪತ್ತೆ

ಪಡುಬಿದ್ರಿ: ಕಳೆದ ಎರಡು ದಿನದ ಹಿಂದೆ ನಾಪತ್ತೆಯಾದ ಪಲಿಮಾರು ಗುಂಡಿ ನಿವಾಸಿ ವ್ಯಕ್ತಿಯ ಶವ ಪಕ್ಕದ ಕೆಸರು ತುಂಬಿದ ಹಳ್ಳವೊಂದರಲ್ಲಿ ಪತ್ತೆಯಾಗಿದೆ.ಮೃತರು ಪಲಿಮಾರು ಗುಂಡಿ ನಿವಾಸಿ, ಮುಂಬೈ ಮಹಾ ನಗರದಲ್ಲಿ ವಾಸವಿದ್ದ ಆನಂದ ಪೂಜಾರಿ(51), ಊರಿನ ಮನೆಯಲ್ಲಿ ಕುಟುಂಬದ ದೈವದ ಧಾರ್ಮಿಕ ಕಾರ್ಯಕ್ರಮವಿದ್ದು ಅದರಲ್ಲಿ ಪಾಲ್ಗೊಂಡಿದ್ದ ಇವರು ರಾತ್ರಿ ಸುಮಾರು ಹನ್ನೆರಡರ ಸುಮಾರಿಗೆ ಪಕ್ಕದ ಮನೆಯ ಅಂಗಳದಲ್ಲಿ ನಡೆದು ಹೋಗುವುದನ್ನು ಆ ಮನೆ ಮಂದಿ ನೋಡಿದ್ದರು. ಅಲ್ಲಿಂದ

ಸುಳ್ಯ: ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ-ಪ್ರಮುಖ ಆರೋಪಿ ಮುಸ್ತಾಫ ಪೈಚಾರ್ NIA ಬಲೆಗೆ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ತಂಡ ಮೂವರನ್ನು ಸಕಲೇಶಪುರ ತಾಲೂಕಿನ ಆನೆಮಹಲ್‌ನಲ್ಲಿ ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಸುಳ್ಯ ಮೂಲದ ಮುಸ್ತಫಾ ಪೈಚಾರ್, ಸೋಮವಾರಪೇಟೆ ಮೂಲದ ಇಲ್ಯಾಸ್ ಹಾಗೂ ಸಿರಾಜ್ ಎಂದು ಗುರುತಿಸಲಾಗಿದೆ. ಪ್ರವೀಣ್ ನೆಟ್ಟಾರು ಪ್ರಕರಣದ ನಾಲ್ಕನೇ ಆರೋಪಿ ಎಂದು ಗುರುತಿಸಲಾಗಿದ್ದ ಮುಸ್ತಫಾ ಪೈಚಾರ್ ಹಾಗೂ ಇಲ್ಯಾಸ್ ಆನೆಮಹಲ್‌ನ ಸಿರಾಜ್ ಬಳಿ ಕೆಲಸಕ್ಕೆ ಸೇರಿದ್ದರು ಎನ್ನಲಾಗಿದ್ದು, ಆರೋಪಿಗಳಿಗೆ ಆಶ್ರಯ ನೀಡಿದ್ದ

ಸೋನು ಗೌಡಗೆ ಸಿಜೆಎಂ ಶರತ್ತುಬದ್ಧ ಜಾಮೀನು

ಕಾನೂನು ತಪ್ಪಿ ಮಗು ದತ್ತು ಪಡೆದಿದ್ದರು ಎಂಬ ಆರೋಪಕ್ಕೆ ಒಳಗಾಗಿದ್ದ ರೀಲ್ಸ್ ನಟಿ ಸೋನು ಗೌಡ ಅವರಿಗೆ ಬೆಂಗಳೂರು ಗ್ರಾಮಾಂತರ ಸಿಜೆಎಂ ಅವರು ಜಾಮೀನು ಮಂಜೂರು ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಹೆಣ್ಣು ಮಗುವನ್ನು ದತ್ತು ಪಡೆಯುವಾಗ ಸೋನುಗೌಡ ಅವರು ಕಾನೂನು ನಿಯಮ ಪಾಲಿಸಿಲ್ಲ ಎಂದು ಅವರನ್ನು ಬಂಧಿಸಲಾಗಿತ್ತು. ವಾರದಲ್ಲಿ ವಿಚಾರಣೆ ಮುಗಿಯದೆ ಮೂರು ವಾರ ಎಳೆದಿತ್ತು. ಈಗ ಮ್ಯಾಜಿಸ್ಟ್ರೇಟ್ ಅವರು ಶರತ್ತುಬದ್ಧ ಜಾಮೀನು ನೀಡಿದ್ದಾರೆ.

ಬಂಟ್ವಾಳ: ವ್ಯಕ್ತಿಯೋರ್ವರ ಚಿನ್ನದ ಸರ, ಹಣ ಕಸಿದು, ಹಲ್ಲೆ ನಡೆಸಿ, ಜೀವ ಬೆದರಿಕೆ

ವ್ಯಕ್ತಿಯೋರ್ವರು ತನ್ನ ಮೋಟಾರ್ ಸೈಕಲ್ ನಲ್ಲಿ ಕಛೇರಿಗೆ ಹೋಗುತ್ತಿರುವಾಗ, ಕಾರಿನಲ್ಲಿ ಬಂದ ಆರೋಪಿಗಳು ವ್ಯಕ್ತಿಯ ಕುತ್ತಿಗೆಯಲ್ಲಿದ್ದ 5 ಪವನ್ ಚಿನ್ನದ ಸರ, ಪರ್ಸ್ ನಲ್ಲಿದ್ದ ಹಣವನ್ನು ಕಸಿದುಕೊಂಡು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್‌ನಲ್ಲಿ ನಡೆದಿದೆ. ಮಾಣಿ ಗ್ರಾಮ ಬಂಟ್ವಾಳ ನಿವಾಸಿ ಸ್ಟೀವನ್ ಆಲ್ವೀನ್ ಪಾಯಸ್ (೫೧) ಎಂಬುವರು ಮಾರ್ಚ್ ೫ರಂದು ಬೆಳಗ್ಗೆ, ಅವರ ಮೋಟಾರ್ ಸೈಕಲ್‌ನಲ್ಲಿ ಕಛೇರಿಗೆ

ಪಟಾಕಿ ಟುಸ್ ಮಾಡುವ ಹೊತ್ತಲ್ಲಿ

ದಕ್ಷಿಣ ಕನ್ನಡ ಜಿಲ್ಲಾಡಳಿತವು ಜಿಲ್ಲೆಯ ಎಲ್ಲ ಸುಡುಮದ್ದು ತಯಾರಿಕಾ ಘಟಕಗಳನ್ನು ಮುಂದಿನ ಆದೇಶದವರೆಗೆ ಅಮಾನತಿನಲ್ಲಿ ಇಟ್ಟಿದೆ. ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಕುಡ್ತ್ಯಾರುನಲ್ಲಿ ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ ಸಾವು ನೋವು ಸಂಭವಿಸಿರುವುದು ಇದಕ್ಕೆ ಕಾರಣ. 2008ರ ಸ್ಫೋಟಕ ಕಾಯ್ದೆಯ ನಿಯಮಾವಳಿ ಪ್ರಕಾರ ಈ ತಾತ್ಕಾಲಿಕ ಸುಡುಮದ್ದು ತಯಾರಿಕೆ ನಿಲುಗಡೆಯ ಆದೇಶ ನೀಡಲಾಗಿದೆ. ಈಗ ಉತ್ಸವಗಳ ಕಾಲ. ಉತ್ಸವಗಳಲ್ಲಿ ಮುಸ್ಲಿಮರು ತಯಾರಿಸುವ ದುಡುಮ್