Home Archive by category ಗಲ್ಫ್

ಕತಾರ್: ಪಿಫಾ ವರ್ಲ್ಡ್ ಕಪ್ ಮೆಡಿಕಲ್ ಟೀಮಿಗೆ ತುಳುನಾಡಿನ ಮಹಿಳೆ ಆಯ್ಕೆ.

ಬಂಟ್ವಾಳ: ಕತಾರ್ ಪಿಫಾ ವರ್ಲ್ಡ್ ಕಪ್ ಮೆಡಿಕಲ್ ಟೀಮಿಗೆ ಸೇವೆ ಸಲ್ಲಿಸಲು ತುಳುನಾಡಿನ ಮಹಿಳೆಯೊರ್ವರು ಆಯ್ಕೆಯಾಗಿದ್ದಾರೆ.ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ದೋಟ ದರ್ಖಾಸು ನಿವಾಸಿ ನವೀನ್ ಪೂಜಾರಿಯವರ ಪತ್ನಿ ಪ್ರತಿಭಾ ಎನ್.ದರ್ಖಾಸು ಎಂಬವರು ಇದೀಗ ಕತಾರಿನ ವರ್ಲ್ಡ್ ಕಪ್ ಮೆಡಿಕಲ್ ಟೀಮಿನಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾದವರು. ಈ ಮೂಲಕ ಇವರು

ಬಂಟ್ಸ್ ಬಹರೈನ್ ಪದಗ್ರಹಣಾ ಕಾರ್ಯಕ್ರಮ : ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗಿ

ಬಹರೈನ್; “ತಾನು ಕರಗಿ ಇತರರರಿಗೆ ಬೆಳಕು ಕೊಡುವ ಮೇಣದ ಬತ್ತಿಯಂತೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಾಗ ಜೀವನದಲ್ಲಿ ಸಾರ್ಥಕೆಯನ್ನು ಕಾಣಬಹುದು . ಮಕ್ಕಳಿಗೆ ಮಾತೃ ಭಾಷೆಯನ್ನೂ ಕಳಿಸಿದಾಗ ಮಾತ್ರ ನಮ್ಮ ಸಂಸ್ಕ್ರತಿ ಉಳಿದು ಬೆಳೆಯಲು ಸಾಧ್ಯ . ನಾವು ಆರ್ಥಿಕವಾಗಿ ಬೆಳೆದಂತೆಲ್ಲಾ ಸಮಾಜವನ್ನೂ ಬೆಳೆಸಬೇಕು “ಎಂದು ಇಲ್ಲಿ ಇತ್ತೀಚಿಗೆ ಜರುಗಿದ ಬಂಟ್ಸ್ ಬಹರೈನ್ ನ ನೂತನ ಆಡಳಿತ ಮಂಡಳಿಯ ವಿದ್ಯುಕ್ತ ಪದಗ್ರಹಣ ಸಮಾರಂಭದಲ್ಲಿ ಬಂಟ್ಸ್ ಬಹರೈನ್ ನ ನೂತನ

ಬಹರೇನ್ ದ್ವೀಪದಲ್ಲಿ “ಪಟ್ಲ ಸಂಭ್ರಮ”ಕ್ಕೆ ಕ್ಷಣಗಣನೆ ಆರಂಭ

ಬಹರೈನ್ : ಯಕ್ಷಧ್ರುವ ಪಟ್ಲಾ ಫೌಂಡೇಶನ್‍ನ ಬಹರೈನ್ ಹಾಗು ಸೌದಿ ಅರೇಬಿಯಾ ಘಟಕವು ದ್ವಿತೀಯ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು ತನ್ನ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ” ಶಶಿಪ್ರಭಾ ಪರಿಣಯ” ಎನ್ನುವ ಪ್ರಸಂಗವನ್ನು ಆಡಿತೋರಿಸಲಿದೆ. ಈ ಕಾರ್ಯಮದ ಪೂರ್ವಭಾವಿ ತಯಾರಿಯು ಭರದಿಂದ ಸಾಗಿದ್ದು ದ್ವಿತೀಯ ವಾರ್ಷಿಕ ಪಟ್ಲ ಸಂಭ್ರಮಕ್ಕೆ ಇದಾಗಲೇ ಕ್ಷಣಗಣನೆ ಪ್ರಾರಂಭವಾಗಿದೆ. ಈ ಯಕ್ಷಗಾನ ಕಾರ್ಯಕ್ರಮವು ಅಕ್ಟೋಬರ್ 28ರ ಶುಕ್ರವಾರದಂದು ಮನಾಮದಲ್ಲಿರುವ

ದುಬಾಯಿ : ಯುಎಇ ಗಮ್ಮತ್ ಕಲಾವಿದೆರ್ ಪ್ರಸ್ತುತ “ಕುಟುಂಬ” ನಾಟಕ ಪ್ರದರ್ಶನ

ಯುಎಇ ಯ ಗಮ್ಮತ್ ಕಲಾವಿದೆರ್ ಪ್ರೆಶಿಯಸ್ ಪಾರ್ಟಿಸ್ ಮತ್ತು ಎಂಟಟೈನ್ಮೆಂಟ್ ಸಹಯೋಗದಲ್ಲಿ ಹವ್ಯಾಸಿ ತುಳು ರಂಗ ನಾಟಕ ತಂಡವು ಪ್ರಸಿದ್ಧ ಬರಹಗಾರ, ಚಲನಚಿತ್ರ ಮತ್ತು ತುಳು ನಾಟಕ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮತ್ತು ಖ್ಯಾತ ಸಾಹಿತಿಗಳು ಬರೆದ ತುಳು ಹಾಸ್ಯ ಮತ್ತು ಸಾಮಾಜಿಕ ನಾಟಕ ‘ಕುಟುಂಬ’ ಪ್ರದರ್ಶನ ಕಂಡಿತು. ಪ್ರೆಶಿಯಸ್ ಪಾರ್ಟಿಸ್ ಮತ್ತು ಎಂಟರ್ಟೈನ್ಮೆಂಟ್ ಸಹಯೋಗದಲ್ಲಿ ಯಶಸ್ವಿಯಾಗಿ ಕುಟುಂಬ ನಾಟಕವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದ

ಸೆ.23 : ಬಹರೈನ್ ದ್ವೀಪರಾಷ್ಟ್ರದ ಕನ್ನಡಿಗರ ಕನಸಿನ ಸೌಧ ಕನ್ನಡ ಭವನ ಉದ್ಘಾಟನೆ

ಬಹರೈನ್ ನ ಸಾವಿರಾರು ಕನ್ನಡಿಗರ ಕನಸಿನ ಕೂಸಾದ “ಕನ್ನಡ ಭವನ “ದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು ಸೆಪ್ಟೆಂಬರ್ 23 ರಂದು ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ. ದ್ವೀಪದ ಹೃದಯ ಭಾಗವಾದ ಮನಾಮಾದಲ್ಲಿ ಕನ್ನಡ ಸಂಘ ಬಹರೈನ್ ನೂತನವಾಗಿ ನಿರ್ಮಿಸಿರುವ ” ಕನ್ನಡ ಭವನ”ವನ್ನು ನ್ನು ಕರ್ನಾಟಕ ಘನ ಸರಕಾರದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ ಲೋಕಾರ್ಪಣೆ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ಅನುದಾನದಿಂದ

ಬಿಲ್ಲವಾಸ್ ಕತಾರ್ ನ ನೇತೃತ್ವದಲ್ಲಿ ಅಷ್ಟಮಿ-ಚೌತಿ ಸಂಭ್ರಮ

ಬಿಲ್ಲವಾಸ್ ಕತಾರ್ ನ ಅಧ್ಯಕ್ಷ ಶ್ರೀ ರಘುನಾಥ್ ಅಂಚನ್ ರವರ ಮುಂದಾಳತ್ವದಲ್ಲಿ “ಅಷ್ಟಮಿ-ಚೌತಿ” ಆಚರಣೆ ಕಾರ್ಯಕ್ರಮ “ಗ್ರಾಂಡ್ ಕತಾರ್ ಪ್ಯಾಲೇಸ್ “ನ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮದ ಸ್ವಾಗತ ಭಾಷಣ ಮಾಡಿದ ಅಂಚನ್ ರವರು ಸಂಘದ ಸಾಧನೆ, ಒಗ್ಗಟ್ಟು ಮತ್ತು ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ಕೃಷ್ಣ – ರಾಧೆ ಛದ್ಮವೇಷ ಸ್ಪರ್ಧೆಗೆ ಅತ್ಯಂತ ಉಲ್ಲಾಸದಿಂದ ರಂಗು ರಂಗಿನ ಬಟ್ಟೆ ತೊಟ್ಟ ಪುಟಾಣಿಗಳು

ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ವಿಧಿವಶ

 ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರು ಗುರುವಾರ(ಸೆ.8)ದಂದು ನಿಧನರಾಗಿದ್ದಾರೆ. ಬ್ರಿಟನ್ ರಾಣಿ ನಿಧನದ ಹಿನ್ನೆಲೆಯಲ್ಲಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ರಾಣಿಯ ನಿಧನದ ಸುದ್ದಿಯನ್ನು ಬಂಕಿಂಗ್ ಹ್ಯಾಮ್ ಅರಮನೆಯವರು ಖಚಿತಪಡಿಸಿದ್ದಾರೆ. ಬ್ರಿಟನ್ ಗೆ ಸುದೀರ್ಘ ಸೇವೆ ಸಲ್ಲಿಸಿದ್ದ ಎರಡನೇ ಎಲಿಜಬೆತ್ 70 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. ಇದೀಗ ತನ್ನ 96ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ದುಬೈನಲ್ಲಿ ಈ-ಮಣ್ಣು ಚಲನಚಿತ್ರ ಪ್ರದರ್ಶನ

ಈ-ಮಣ್ಣು ಚಲನ ಚಿತ್ರವನ್ನು ದುಬೈನ ಗಲೇರಿಯಾ ಚಿತ್ರಮಂದಿರದಲ್ಲಿ ವಿಶೇಷ ಅತಿಥಿಗಳನ್ನು ಆಹ್ವಾನಿಸಿ ಪ್ರದರ್ಶಿಸಿದ್ದು, ಯು.ಎ.ಇ.ಕನ್ನಡಿಗರಲ್ಲಿ ಸಡಗರ ಮೂಡಿಸಿತ್ತು. ಹೃದಯ ಸ್ವರ್ಶಿ ಮತ್ತು ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಈ ಚಲನಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಶಿವಧ್ವಜ್ ಶೆಟ್ಟಿ ನಿರ್ದೇಶಿಸಿದ್ದು, ದುಬೈನ ಅನಿವಾಸಿ ಕನ್ನಡಿಗ ಈಶ್ವರಿದಾಸ್ ಶೆಟ್ಟಿ ನಿರ್ಮಿಸಿದ್ದಾರೆ. ಈ ಚಲನಚಿತ್ರದ ಕನ್ನಡ ಭಾಷೆ ಮತ್ತು ಲಾಭ ರಹಿತ ಪ್ರದರ್ಶನಕ್ಕೆ

ಬಹರೈನ್‍ ಸಂಗೀತ ಗಾನ ಸಂಭ್ರಮ-2022

ಅಮ್ಮ ಕಲಾವಿದರು ಬಹರೈನ್ ಅರ್ಪಿಸುವ ಸಂಗೀತ ಗಾನ ಸಂಭ್ರಮ 22 ಕಾರ್ಯಕ್ರಮದ ಮುಹೂರ್ತ ಪೂಜೆ ಹಾಗೂ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ಆಗಸ್ಟ್ 19ರಂದು ಸ್ಥಳೀಯ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಗಣ್ಯ ಅತಿಥಿಗಳ ಸಮಕ್ಷಮದಲ್ಲಿ ನೆರವೇರಿತು. ಅಮ್ಮ ಕಲಾವಿದರು ಸಂಘಟನೆಯ ಮುಖ್ಯಸ್ಥರಾದ ಮೋಹನದಾಸ್ ರೈ ಎರುಂಬು ಸಾರಥ್ಯದಲ್ಲಿ ನಡೆಯಲಿರುವ ಈ ಸಂಗೀತ ಕಾರ್ಯಕ್ರಮದಲ್ಲಿ ತಾಯ್ನಾಡಿಂದ ಖ್ಯಾತ ಗಾಯಕ ತುಳುನಾಡ ಗಾನಗಂಧರ್ವ ಜಗದೀಶ ಆಚಾರ್ಯ ಪುತ್ತೂರು ಮತ್ತು ಅವರ ಬಳಗದ ಯುವ

ಉಳ್ಳಾಲ : ಸಂಚಾರಿ ಎಎಸ್‍ಐನಿಂದ ಸಿಟಿಬಸ್ ನಿರ್ವಾಹಕನಿಗೆ ಹಲ್ಲೆ

ಉಳ್ಳಾಲ: ಸಂಚಾರಿ ಠಾಣಾ ಎಎಸ್ ಐ ಸಿಟಿ ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿರುವ ಘಟನೆ ತಲಪಾಡಿಯಲ್ಲಿ ನಡೆದಿದ್ದು, ಕೃತ್ಯ ಖಂಡಿಸಿ ಬಸ್ ಸಿಬ್ಬಂದಿ ತಲಪಾಡಿ- ಸ್ಟೇಟ್ ಬ್ಯಾಂಕ್ ಚಲಿಸುವ ಬಸ್ ಬಂದ್ ನಡೆಸಿ ಪ್ರತಿಭಟನೆ ನಡೆಸಿದ್ರು.ಉಷಾ ಹೆಸರಿನ ಸಿಟಿ ಬಸ್ ನಿರ್ವಾಹಕ ರಾಜು ಎಂಬಾತನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜೆಪ್ಪು ಸಂಚಾರಿ ಠಾಣೆಯ ಎಎಸ್ ಐ ಆಲ್ಬರ್ಟ್ ಲಸ್ರಾದೊ ಇಂದು ಬೆಳಿಗ್ಗೆ ತಲಪಾಡಿ ಬಳಿ ಸಿಟಿ ಬಸ್ಸುಗಳ ವಿರುದ್ಧ ಕೇಸುಗಳನ್ನು