Home Archive by category ಮನರಂಜನೆ

ಜೂಲಿಯಟ್-2 ಸಿನಿಮಾ ತುಳುನಾಡಿನ ಹೊಸ ಭರವಸೆ

ಕನ್ನಡದಲ್ಲಿ ಕರಾವಳಿ ಕಂಟೆಂಟ್ ಇರುವ ಚಿತ್ರಗಳು ಹೆಚ್ಚು ಜನಪ್ರೀಯತೆ ಪಡೆಯುತ್ತಿವೆ. ಈ ಮೂಲಕ ಸಿನಿಪ್ರಿಯರ ಅಭಿರುಚಿ ಕೂಡ ಬದಲಾಗುತ್ತಿದೆ. ಇದೀಗ ತುಳುನಾಡಿನ ಹೊಸ ಭರವಸೆಯೊಂದಿಗೆ ಜೂಲಿಯಟ್-2 ಕನ್ನಡ ಸಿನಿಮಾದ ಟೀಸರ್ ಬಿಡುಗಡೆಗೊಂಡಿದೆ. ಹೊಸ ರೀತಿಯ ಕಥೆಯೊಂದಿಗೆ ಮನರಂಜಿಸುತ್ತಿರುವ ಕರಾವಳಿ ಕಡೆಯ ಕಥೆಗಳಲ್ಲಿ ಜೂಲಿಯಟ್-2 ಟೀಸರ್ ಹೆಚ್ಚು ಗಮನಸೆಳೆಯುತ್ತಿದೆ.

ಮಯೂರ್ ಆರ್ ಶೆಟ್ಟಿ ನಿರ್ದೇಶನದ ಪಿಲಿ ತುಳು ಚಲನಚಿತ್ರ , ಫೆ.4, 5ರಂದು ಯುಎಇ ದುಬೈ, ಅಬುಧಾಬಿಯಲ್ಲಿ ಪ್ರೀಮಿಯರ್ ಪ್ರದರ್ಶನ

ಎನ್‍ಎನ್‍ಎಂ ಪ್ರೊಡಕ್ಷನ್ ಲಾಂಛನದಲ್ಲಿ ಆತ್ಮಾನಂದ ರೈ ನಿರ್ಮಿಸಿರುವ ಮಯೂರ್ ಆರ್ ಶೆಟ್ಟಿ ನಿರ್ದೇಶನದ ಪಿಲಿ ತುಳು ಚಲನಚಿತ್ರ ಫೆಬ್ರವರಿ 4, 5ರಂದು ಯುಎಇಯ ದುಬೈ ಮತ್ತು ಅಬುಧಾಬಿಯಲ್ಲಿ ಫ್ರೀಮಿಯರ್ ಪ್ರದರ್ಶನ ಹಾಗೂ ಫೆಬ್ರುವರಿ 10 ರಂದು ತುಳುನಾಡಿನಾದ್ಯಂತ ಬಿಡುಗಡೆಗೊಳ್ಳಲಿದೆ. ಇದರ ಅಂಗವಾಗಿ ಜನವರಿ 22ರಂದು ದುಬೈಯ ಪೋರ್ಚೂನ್ ಏಟ್ರಿಯಂ ಹೋಟೆಲ್ ನಲ್ಲಿ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ನಿರೂಪಣೆಯನ್ನು ರಾಜೇಶ್

ಯುವ ಜನತೆಗೆ ವಿವೇಕಾನಂದರ ಕರೆ

ಯಾರಿಗೆ ತನ್ನಲ್ಲಿ ತನಗೆ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೊ ಅವನು ನಾಸ್ತಿಕ ಎಂದು. ನಿಮ್ಮ ನಂಬಿಕೆಯಂತೆ ನೀವಾಗುತ್ತೀರಿ. ನಿಮ್ಮನ್ನು ನೀವು ಋಷಿಗಳೆಂದು ನಂಬಿದರೆ ನೀವು ನಾಳೆ ಋಷಿಗಳೇ ಆಗುತ್ತೀರಿ. ಶೈವಾವಸ್ಥೆಯಿಂದಲೇ ಮಕ್ಕಳು ಶಕ್ತಿ ಶಾಲಿಗಳಾಗುವಂತೆ ಮಾಡಿ. ಅವರಿಗೆ ದುರ್ಬಲತೆಯನ್ನಾಗಲಿ, ಮೂಢ ಆಚರಣೆಗಳನ್ನಾಗಲಿ ಬೋಧಿಸಬೇಡಿ.

ಮಂಕು ಭಾಯ್ ಫಾಕ್ಸಿ ರಾಣಿ ಕನ್ನಡ ಸಿನಿಮಾ ಜ.13ರಂದು ರಾಜ್ಯಾದ್ಯಂತ ಬಿಡುಗಡೆ

ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿರುವ ಗಗನ್ ಎಂ. ನಿರ್ದೇಶನದ ಮಂಕು ಭಾಯ್ ಫಾಕ್ಸಿ ರಾಣಿ ಸಿನಿಮಾ ಜನವರಿ 13ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಈ ಸಿನಿಮಾ ಗಗನ್. ಎಂ ನಿರ್ದೇಶನದ ಚೊಚ್ಚಲ ಸಿನಿಮಾ ಆಗಿದ್ದು, ಈ ಸಿನಿಮಾದಲ್ಲಿ ನಾಯಕಿಯಾಗಿ ಬ್ರಹ್ಮಗಂಟು ಧಾರಾವಾಹಿಯ ಗೀತಾ ಭಾರತಿ ಹಾಗೂ ಪಂಚಮಿ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರೂಪೇಶ್ ಶೆಟ್ಟಿ ಅವರು ಕನ್ನಡದಲ್ಲಜ ಹೀರೋ ಆಗಿ ನಟಿಸಿದ 5ನೇ ಸಿನಿಮಾವಿದು. ಈಗಾಗಲೇ ಸಿನಿಮಾದ

ಕೋವಿಡ್ ನಿಂದ ಆರಂಭವಾದ ಹಾಡು ನೀ ಹಾಡು ಪಯಣ

ಕೋವಿಡ್, ಜಗತ್ತನ್ನೇ ತನ್ನ ಕಪಿ ಮುಷ್ಟಿಯಲ್ಲಿ ಕಟ್ಟಿ ಹಾಕಿದ್ದ ಸಂದರ್ಭ ಅದು. ಆ ಸಂದರ್ಭದಲ್ಲಿ ಒಂದು ಹೊಸ ಚಿಂತನೆಯೊಂದಿಗೆ ನಮ್ಮ ಊರಿನ ಗಾನ ಕೋಗಿಲೆಗಳಿಗೆ ಚೈತನ್ಯವಾಗಿ ರೂಪುಗೊಂಡದ್ದೇ ಉಡುಪಿ ಶೈನಿಂಗ್ ಸ್ಟಾರ್ ವೇದಿಕೆ. ಅಂದು ಮಣಿಪಾಲ ಮಹಿಳಾ ಸಮಾಜ ಎಂಬ ಮಹಾನ್ ಶಕ್ತಿಗಳಿಂದ ನಿರ್ಮಾಣ ಗೊಂಡ ಉಡುಪಿ ಶೈನಿಂಗ್ ಸ್ಟಾರ್ ಎಂಬ ವೇದಿಕೆ ಮುಂದೊಂದು ದಿನ ಇಡೀ ಕರಾವಳಿಯೇ ಮೆಚ್ಚುವಂಥ ತುಳುನಾಡಿನಾದ್ಯಂತ ಸದ್ದನ್ನ ಮಾಡುತ್ತಿರುವ ಹಾಡು ನೀ ಹಾಡು ಕಾರ್ಯಕ್ರಮಕ್ಕೆ

ಕರಾವಳಿಯ ಕುವರ ರೂಪೇಶ್ ಶೆಟ್ಟಿಗೆ ಬಿಗ್ ಬಾಸ್ ಕಿರೀಟ

ಕರಾವಳಿಯ ಕುವರ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಇದೀಗ ಬಿಗ ಬಾಸ್ ಸೀಸನ್ 9 ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ತುಳು ಚಿತ್ರಗಳ ಮೂಲಕ ಹಾಗೂ ಹಲವಾರು ಸಮಾಜ ಸೇವೆಗಳ ಮುಖಾಂತರ ಕರಾವಳಿಯ ಜನರ ಮನಸನ್ನು ಗೆದ್ದಿರುವ ರೂಪೇಶದ ಶೇಟ್ಟಿ, ಬಿಗ್ ಬಾಸ್ ಶೋ ನಲ್ಲಿ ವಿಜೇತರಾಗಿರುವುದು ಹೆಮ್ಮೆಯ ಸಂಗತಿ.ಸೆ.24ರಂದು ಶುರುವಾದ ಬಿಗ್ ಬಾಸ್ ಶೋ 100 ದಿನಗಳ ಕಾಲ ನಡೆದು, ಡಿ.31ಕ್ಕೆ ಮುಕ್ತಾಯಗೊಂಡಿದೆ. ಈ ಬಾರಿ ಒಟ್ಟು 18 ಮಂದಿ ಮನೆಯೊಳಗೆ ಎಂಟ್ರಿ ನೀಡಿದ್ದರು. ಅದರಲ್ಲಿ

ಹೊಸ ವರ್ಷಾಚರಣೆಗೆ ಸಜ್ಜಾದ ಹೋಟೆಲ್ ಓಶಿಯನ್ ಪರ್ಲ್

ಮಂಗಳೂರು ನಗರದ ಪ್ರತಿಷ್ಟಿತ ಹೋಟೆಲ್‍ಗಳಲ್ಲಿ ಒಂದಾದ ಓಶಿಯನ್ ಪರ್ಲ್ ಹೋಟೆಲ್‍ನಲ್ಲಿ 2023 ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಗಳೂರಿನ ಓಶಿಯನ್ ಪರ್ಲ್ ಹೋಟೆಲ್ ಖಾದ್ಯಪ್ರೀಯರ ಅಚ್ಚುಮೆಚ್ಚಿನ ಹೋಟೆಲ್ ಆಗಿದ್ದು, ಈ ಬಾರಿ ಹೊಸ ವರ್ಷ 2023ನ್ನು ಬರಮಾಡಿಕೊಳ್ಳಲು ಈಗಾಗಲೇ ಸಜ್ಜಾಗಿದ್ದಾರೆ. ಮಂಗಳೂರಿನ ಜನತೆಗಾಗಿ ವಿಶೇಷ ಮನೋರಂಜನೆಯ ಕಾರ್ಯಕ್ರಮದ ಜೊತೆಗೆ

ಎಪ್ರಿಲ್‍ನಲ್ಲಿ ಬಿರ್ದ್ ದ ಕಂಬುಲ ತುಳು ಚಿತ್ರ ಬಿಡುಗಡೆ

ಮೂಡುಬಿದಿರೆ : ತುಳುನಾಡಿನ ಜಾನಪದ ಕ್ರೀಡೆ ಕಂಬಳವನ್ನು ಮುಂದಿಟ್ಟುಕೊಂಡು ತಯಾರಾಗುತ್ತಿರುವ ಚಲನಚಿತ್ರ ತುಳುವಿನ ಬಿರ್ದ್‍ದ ಕಂಬುಲದ ಚಿತ್ರೀಕರಣವು ಮುಕ್ತಾಯದ ಹಂತದಲ್ಲಿದೆ ಎಂದು ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಹೇಳಿದರು.ಅವರು ಮಂಗಳೂರಿನ ಉರ್ವ ಮೈದಾನದಲ್ಲಿ ಬಿರ್ದ್‍ದ ಕಂಬುಲ ಚಿತ್ರೀಕರಣದ ಸಂದರ್ಭದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಿನೆಮಾವು ತುಳುನಾಡಿನ ಭಾಷೆ, ಸಂಸ್ಕೃತಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ

“ಲಾಸ್ಟ್ ಬೆಂಚ್” ತುಳು ಸಿನಿಮಾ ಇಂದು ತುಳುನಾಡಿನಾದ್ಯಂತ ಬಿಡುಗಡೆ

ಮಂಗಳೂರು: ಎ ಎಸ್ ಪೆÇ್ರಡಕ್ಷನ್ ಲಾಂಛನದಲ್ಲಿ ತಯಾರಾದ ಆಶಿಕಾ ಸುವರ್ಣ ನಿರ್ಮಾಣದಲ್ಲಿ ಎಂ ಪಿ ಪ್ರಧಾನ್ ನಿರ್ದೇಶನದ ಬಹುನಿರೀಕ್ಷಿತ ” ವಿಐಪೀಸ್ ಲಾಸ್ಟ್ ಬೆಂಚ್” ತುಳು ಚಿತ್ರ ಶುಕ್ರವಾರ ತುಳುನಾಡಿನಾದ್ಯಂತ ಬಿಡುಗಡೆಗೊಂಡಿತು. ನಗರದ ಬಿಗ್ ಸಿನೆಮಾಸ್ ನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಡಿ. ವೇದವ್ಯಾಸ ಕಾಮತ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಉದ್ಘಾಟನೆ ನೆರವೇರಿಸಿ ಮಾತಾಡಿದ ಅವರು, “ಲಾಸ್ಟ್ ಬೆಂಚ್ ಸಿನಿಮಾ ಇಂದು

ನಟ ಶಿವರಾಜ್ ಕುಮಾರ್ ಧರ್ಮಸ್ಥಳಕ್ಕೆ ಭೇಟಿ

ಬೆಳ್ತಂಗಡಿ : ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಾನಕ್ಕೆ ಕನ್ನಡ ಚಿತ್ರ ನಟ ಶಿವರಾಜ್ ಕುಮಾರ್ ಅವರು ಕುಟುಂಬ ಸಹಿತವಾಗಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ನಟ ಶಿವರಾಜ್ ಕುಮಾರ್ ಮತ್ತು ಕುಟುಂಬ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದು ಡಿ.9 ರಂದು ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಿವರಾಜ್ ಕುಮಾರ್ ಕುಟುಂಬ ಅಗಮಿಸಿದ್ದು ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಈ ವೇಳೆ ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿಯರಾದ ನಿರುಪಮ