Home Archive by category ಮನರಂಜನೆ (Page 2)

ಮಂಗಳೂರು: ಮಾನ್ಸೂನ್‌ನಲ್ಲಿ ಮಾನಸ ವಾಟರ್‌ಪಾರ್ಕ್‌ನಲ್ಲಿ ವಿಶೇಷ ಆಫರ್

ಮಂಗಳೂರಿನ ವಾಮಂಜೂರಿನಲ್ಲಿರುವ ಮಾನಸ ವಾಟರ್ ಪಾರ್ಕ್‌ನಲ್ಲಿ ಮಾನಸ ಮ್ಯಾಕ್ಸ್ ರಾಯಲ್ ಪ್ರೀಮಿಯಂ ಕ್ಲಬ್ ಸದಸ್ಯತ್ವ ಆರಂಭಗೊಂಡಿದ್ದು, ಆ ಮೂಲಕ ವಿಶೇಷ ಸೌಲಭ್ಯಗಳನ್ನು ಪಡೆದುಕೊಳ್ಳಬಹದು. ಮನೋರಂಜನೆಯ ವಾಟರ್ ಪಾರ್ಕ್ ಮಾನಸ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್, ಹಚ್ಚ ಹಸಿರಿನ ಪರಿಸರದಲ್ಲಿ ಪ್ರವಾಸಿಗರಿಗೆ ಮನೋರಂಜನೆ ನೀಡುವ ಪಾರ್ಕ್ ಆಗಿದ್ದು, ಅನೇಕ ಸೌಲಭ್ಯಗಳನ್ನು

ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್ ಕಿರುಚಿತ್ರಕ್ಕೆ ಪ್ರಶಸ್ತಿ

ಚಲನಚಿತ್ರೋತ್ಸವದಲ್ಲಿ ಭಾರತದ ಪಾಯಲ್ ಕಪಾಡಿಯಾರ ಕಿರು ಚಿತ್ರ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಚಿತ್ರವು ಅತ್ಯುತ್ತಮ ಪ್ರಶಸ್ತಿ ಪಡೆದಿದೆ. ಕಿರುಚಿತ್ರ ವಿಭಾಗದಲ್ಲಿ ಪಾಯಲ್‌ರ ಈ ಚಿತ್ರವು ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ಮುಂಬಯಿ ಮೂಲದ ಪಾಯಲ್‌ರಿಗೆ ಕಿರುಚಿತ್ರ ತಯಾರಿಕೆ ಮತ್ತು ಪ್ರಶಸ್ತಿ ಹೊಸತಲ್ಲ. 2021ರ ಕಾನ್ ಚಿತ್ರೋತ್ಸವದಲ್ಲಿ ಅವರ ‘ನೈಟ್ ಆಫ್ ನೋಯಿಂಗ್ ನತಿಂಗ್’ ಗೋಲ್ಡನ್ ಐ ಪ್ರಶಸ್ತಿ ಪಡೆದಿತ್ತು.

ಮಂಗಳೂರು: ಪ್ರವಾಸಿಗರನ್ನು ಆಕರ್ಷಿಸುತ್ತಿರುವ ವಾಮಂಜೂರಿನ ಮಾನಸ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್

ಬೇಸಿಗೆ ಸಮಯವನ್ನು ಕಳೆಯಲು ಪ್ರವಾಸ ಕೈಗೊಳ್ಳುವವರಿಗೆ ಸಿಹಿಸುದ್ದಿ..ಮಂಗಳೂರಿನ ವಾಮಂಜೂರಿನಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ ಬೇಸಿಗೆ ಸಮಯವನ್ನು ಕಳೆಯಲು ಸುಸಜ್ಜಿತ ರೀತಿಯಲ್ಲಿದ್ದು ವಿವಿಧ ಮನೋರಂಜನಾ ವಾಟರ್ ಗೇಮ್ಸ್ ಸೇರಿದಂತೆ ಕುದುರೆ ಸವಾರಿ, ಜಿಪ್ ಲೈನ್ ಮೂಲಕ ಜನರನ್ನು ತನ್ನತ್ತ ಸೆಳೆಯುತ್ತಿದೆ ಮಾನಸ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್. ಈ ಬಗ್ಗೆ ಒಂದು ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ….. ಮಂಗಳೂರಿನ ವಾಮಂಜೂರಿನ ಪಿಲಿಕುಳದ ಬಳಿಯಿರುವ ಮಾನಸ

ವಿದೇಶದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ಯಕ್ಷಗಾನ ಪ್ರದರ್ಶನ

ಯಕ್ಷಗಾನ ಇತಿಹಾಸದಲ್ಲೇ ಪರಿಪೂರ್ಣ ಮೇಳವೊಂದು ಪ್ರಪ್ರಥಮ ಬಾರಿಗೆ ವಿದೇಶಕ್ಕೆ ತೆರಳಿ ಯಕ್ಷಗಾನ ಪ್ರದರ್ಶನ ನೀಡಲು ಸಿದ್ಧವಾಗಿದೆ.ತೆಂಕುತಿಟ್ಟಿನ ಪ್ರಸಿದ್ಧ ಶ್ರೀ ಗೆಜ್ಜೆಗಿರಿ ಮೇಳವು ಮಸ್ಕತ್ ಮತ್ತು ದುಬೈ ಯಲ್ಲಿ ಆದಿ ಮಾಯೆ ಪರಾಶಕ್ತಿ ಧೂಮಾವತಿ ಮತ್ತು ಮಾತೆ ದೇಯಿ ಬೈದೆತಿ ಅಮ್ಮನವರ ಬೆಳಕಿನ ಯಕ್ಷಗಾನ ಗೆಜ್ಜೆಸೇವೆ ನೀಡಲಿದ್ದು ಪೂರ್ಣ ಪ್ರಮಾಣದ ಮೇಳವೊಂದು ವಿದೇಶಿ ನೆಲದಲ್ಲಿ ಪ್ರದರ್ಶನ ನೀಡುತ್ತಿರುವುದು ಯಕ್ಷರಂಗದ ಇತಿಹಾಸದಲ್ಲಿ ಪ್ರಥಮವೆನಿಸಿದೆ. ವಿದೇಶದ

ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್ ಅವರು ಹೃದಯಾಘಾತದಿಂದ ಇಂದು ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಅವರು 1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದ್ದರು. ಶಾರದಾ ವಿಲಾಸ್ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ

ಸುರತ್ಕಲ್ : ಪಟ್ಲ ಫೌಂಡೇಶನ್ ಘಟಕದ ಚತುರ್ಥ ವಾರ್ಷಿಕೋತ್ಸವ

ಸುರತ್ಕಲ್: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಇದರ ಸುರತ್ಕಲ್ ಘಟಕದ ಚತುರ್ಥ ವಾರ್ಷಿಕೋತ್ಸವ ಕಾರ್ಯಕ್ರಮವು ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ದೀಪ ಪ್ರಜ್ವಲನೆಗೈದ ಯಕ್ಷಧ್ರುವ ಯಕ್ಷ ಶಿಕ್ಷಣ ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಯುಎಸ್ ಎ ಮಾತನಾಡಿ, “ಅಮೇರಿಕದಲ್ಲಿ ಯಕ್ಷಗಾನ ಮಾಡಿಸುವ ಮೂಲಕ ಅಲ್ಲಿನ ಜನರಿಗೂ ನಮ್ಮ ಕರಾವಳಿಯ ಸಂಸ್ಕೃತಿಯ ಪರಿಚಯ ಮಾಡಿದ ಕೀರ್ತಿ ಪಟ್ಲ ಸತೀಶ್ ಶೆಟ್ಟಿ

ಮೂಡುಬಿದಿರೆ: ಗೋವಿಂದ ಭಟ್ ಅವರಿಗೆ ಬಲಿಪ ಭಾಗವತ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಯಕ್ಷಗಾನ ಲೋಕದ ಮೇರು ಭಾಗವತ ದಿ. ಬಲಿಪ ನಾರಾಯಣ ಭಾಗವತ ಅವರ ಮೊದಲ ವರ್ಷದ ಸಂಸ್ಮರಣೆಯ ಅಂಗವಾಗಿ ಹಿರಿಯ ಕಲಾವಿದ ಗೋವಿಂದ ಭಟ್ ಅವರಿಗೆ ಬಲಿಪ ಭಾಗವತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾರೂರಿನ ನೂಯಿಯಲ್ಲಿರುವ ಬಲಿಪರ ನಿವಾಸದ ಆವರಣದಲ್ಲಿ ಜರಗಿದ ಕಟೀಲು ಮೇಳದ ಹರಿಕೆ ಬಯಲಾಟದ ರಂಗಸ್ಥಳದಲ್ಲಿ ಮಾನಪತ್ರ, ನಗದು ಗೌರವದೊಂದಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗೋವಿಂದ ಭಟ್‌ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಬಲಿಪರು ಎಂದರೆ ಯಕ್ಷಗಾನ ಯಕ್ಷಗಾನ

ಮೇ.24ರಂದು ಗಾಯತ್ರಿ ಫಿಲ್ಮ್ ಮೇಕರ್ಸ್‌ನ ಬಲಿಪೆ ತುಳುಚಿತ್ರ ಬಿಡುಗಡೆ

ಗಾಯತ್ರಿ ಫಿಲ್ಮ್ ಮೇಕರ್ಸ್ ಬ್ಯಾನರ್‌ನಡಿಯಲ್ಲಿ ತಯಾರಾದ ಎಂಡೋ ಸಂತ್ರಸ್ತರ ನೋವು ಹಾಗೂ ತುಳುನಾಡಿನ ದೈವ ದೇವರ ಕಥೆಯನ್ನೊಳಗೊಂಡು ಸಿದ್ಧಗೊಂಡಿರುವ ಬಲಿಪೆ ತುಳುಚಿತ್ರವು ಮೇ.24ರಂದು ಬಿಡುಗಡೆಗೊಳ್ಳಲಿದೆ. ಬಲಿಪೆ ಎಂದರೆ ದೈವದ ವಾಹನವಾಗಿದ್ದು, ನೂರು ಹುಲಿಯ ಶಕ್ತಿಯನ್ನು ಹೊಂದಿರುವ ಒಂದು ಹುಲಿ ಎಂದರ್ಥ. ಬಲಿಪ ಚಿತ್ರದಲ್ಲಿ ತುಳುವ ಮಾಣಿಕ್ಯ ಅರವಿಂದ್ ಬೋಳಾರ್, ರಂಜನ್ ಬೋಳಾರ್ ಹಾಗೂ ನಾಯಕ ನಟನಾಗಿ ಹರ್ಷಿತ್ ಬಂಗೇರ, ನಾಯಕ ನಟಿಯಾಗಿ ಅಂಕಿತಾ ಪಟ್ಲ ನಟಿಸಿದ್ದು,

ಒಟಿಟಿಯಲ್ಲಿ ಮಂಕುಭಾಯ್ ಫಾಕ್ಸಿ ರಾಣಿ ಸಿನಿಮಾ

ಬಿಗ್‌ಬಾಸ್ ಸೀಸನ್ 9ರ ವಿಜೇತ ನಟ ರೂಪೇಶ್ ಶೆಟ್ಟಿ ಅಭಿನಯದ ಮಂಕು ಭಾಯ್ ಫಾಕ್ಸಿ ರಾಣಿ ಕನ್ನಡ ಸಿನಿಮಾ ಇದೀಗ ಒಟಿಟಿಯಲ್ಲಿ ಲಭ್ಯವಿದೆ. ಅಮೆಜಾನ್ ಪ್ರೈಮ್‌ನಲ್ಲಿ ಸಿನಿ ಪ್ರೇಕ್ಷಕರು ಸಿನಿಮಾ ವೀಕ್ಷಿಸಲು ಅವಕಾಶ ಕಲ್ಪಿಸಿದ್ದಾರೆ. ಕಳೆದ ವರ್ಷ ಸಿನಿಮಾ ಮಂದಿರದಲ್ಲಿ ಬಿಡುಗಡೆಗೊಂಡು ಪ್ರೇಕ್ಷಕರ ಮನಗೆದ್ದಿದ್ದ ಮಂಕು ಭಾಯ್ ಫಾಕ್ಸಿ ರಾಣಿ ಸಿನಿಮಾ ಓಟಿಟಿ ಪ್ಲಾಟ್ ಪಾಮ್‌ನಲ್ಲಿ ಲಭ್ಯವಿದೆ. ಇದೀಗ ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಿಸಲು ಅವಕಾಶವಿದೆ.ನಟ ರೂಪೇಶ್ ಶೆಟ್ಟಿ

ಮಾಸ್ಟರ್ ಚೆಫ್ ಇಂಡಿಯಾ-2023 ವಿಜೇತರಾಗಿ ಮಂಗಳೂರಿನ ಮೊಹಮ್ಮದ್ ಆಶಿಕ್

ಮಂಗಳೂರಿನ ಮೊಹಮ್ಮದ್ ಆಶಿಕ್ ಮಾಸ್ಟರ್ ಚೆಫ್ ಇಂಡಿಯಾ-2023 ವಿಜೇತರಾಗಿ ಹೊರಹೊಮ್ಮಿದರು. ನಂಬಿ ಜೆಸ್ಸಿಕಾ ಮರಕ್ ಮತ್ತು ರುಖ್ಸಾರ್ ಸಯೀದ್, ಸೂರಜ್ ಅವರೊಂದಿಗೆ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಸ್ಥಾನಗಳನ್ನು ಪಡೆದರು. ಮೊಹಮ್ಮದ್ ಆಶಿಕ್ ಇದಿಗ ಮಂಗಳೂರಿನಲ್ಲಿ ಚಿರಪರಿಚಿತ ಹೆಸರು ಮಂಗಳೂರಿನ ಕುಲುಕಿ ಹಬ್ ಎನ್ನುವ ಸಣ್ಣ ಜ್ಯೂಸ್ ಮಳಿಗೆಯಿಂದ ಸಾಗಿ ಇಂದು ಭಾರತದ ದೊಡ್ಡ ರಿಯಾಲಿಟಿ ಶೋ ಸೋನಿ ಟಿವಿಯ ಮಾಸ್ಟರ್ ಚೆಫ್ ಇಂಡಿಯಾದಲ್ಲಿ ವಿಜೆತರಾದವರು.ಹೋಟೆಲ್