Home Archive by category ರಾಷ್ಟ್ರೀಯ

ಪ್ಯಾರಾಲಿಂಪಿಕ್ಸ್ 5 ಪದಕ, 22ನೇ ಸ್ಥಾನದಲ್ಲಿ ಭಾರತ:ಪದಕ ಪಟ್ಟಿಯಲ್ಲಿ ಹಾಜರಿ ಹಾಕಿರುವ ದೇಶಗಳು 58

ಮೂರನೆಯ ದಿನ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚೀನಾವು 20 ಬಂಗಾರ ಸಹಿತ 42 ಪದಕದೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಭಾರತವು 5 ಪದಕದೊಡನೆ 22ನೇ ಸ್ಥಾನದಲ್ಲಿದೆ. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಮೊದಲ ಪದಕವನ್ನು ಗೆದ್ದವರು ನೆದರ್ಲ್ಯಾಂಡ್ಸ್‌ನ ಕ್ಯಾರೋಲಿನ್ ಗ್ರೂಟ್; ಸೈಕ್ಲಿಂಗ್‌ನಲ್ಲಿ ಆ ಸಾಧನೆ ಬಂತು. ಬ್ರಿಟನ್, ಬ್ರೆಜಿಲ್, ನೆದರ್ಲ್ಯಾಂಡ್ಸ್,

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳ

ತೈಲ ಮಾರಾಟ ಕಂಪನಿಗಳು  ಭಾನುವಾರದಿಂದಲೇ ಜಾರಿಗೆ ಬರುವಂತೆ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರವನ್ನು 39 ರೂ. ಗೆ ಹೆಚ್ಚಿಸಿವೆ. ದೆಹಲಿಯಲ್ಲಿ ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್‌ ದರವು ₹ 1,691ಕ್ಕೆ ಏರಿಕೆ ಆಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಗೆ ಅನುಗುಣವಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ಕಂಪನಿಗಳು ತಿಳಿಸಿವೆ. 14.2 ಕೆ.ಜಿಯ ಗೃಹ ಬಳಕೆ ಸಿಲಿಂಡರ್‌ ದರವು ಯಥಾಸ್ಥಿತಿಯಲ್ಲಿದೆ.

ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಕೆ ನಟ್ವರ್‌ ಸಿಂಗ್‌ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಕೆ ನಟ್ವರ್‌ ಸಿಂಗ್‌ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿದೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ದೆಹಲಿ ಬಳಿಯ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯಲ್ಲಿ ಕಳೆದೆರಡು ವಾರಗಳಿಂದ ದಾಖಲಾಗಿದ್ದ ಅವರು ತಡರಾತ್ರಿ ಕೊನೆಯುಸಿರೆಳೆದರು. ನಟ್ವರ್‌ ಸಿಂಗ್ ಅವರು ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ 1931 ರಲ್ಲಿ ಜನಿಸಿದರು. ಅವರು ವೃತ್ತಿಯಲ್ಲಿ ರಾಜತಾಂತ್ರಿಕರಾಗಿದ್ದರು,

ಪ್ಯಾರಿಸ್ ಒಲಿಂಪಿಕ್ಸ್ : ಶೂಟರ್ ಮನು ಭಾಕರ್‌ಗೆ ಕಂಚು

ಪ್ಯಾರಿಸ್ ಒಲಿಂಪಿಕ್ಸ್​ನ ಎರಡನೇ ದಿನ ಭಾರತಕ್ಕೆ ಶುಭ ಸುದ್ದಿ ಸಿಕ್ಕಿದೆ. ಈ ಮಹಾ ಕ್ರೀಡಾಕೂಟದಲ್ಲಿ ಭಾರತ ತನ್ನ ಪದಕದ ಖಾತೆಯನ್ನು ತೆರೆದಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಮನು ಭಾಕರ್ ಕಂಚಿನ ಪದಕಕ್ಕೆ ಕೊರಳ್ಳೊಡಿದ್ದಾರೆ. ಈ ಮೂಲಕ ಶೂಟಿಂಗ್‌ನಲ್ಲಿ ಭಾರತಕ್ಕೆ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ 221.7

ಪ್ಯಾರಿಸ್ ಒಲಿಂಪಿಕ್: ಬಾಕ್ಸಿಂಗ್  ಸ್ಪರ್ಧೆಯಲ್ಲಿ ಭಾರತದ ಪ್ರೀತಿ ಪವಾರ್ ಪ್ರೀ ಕ್ವಾರ್ಟರ್ಫೈನಲ್ಗೆ

ಪ್ಯಾರಿಸ್ ಒಲಿಂಪಿಕ್‌ ಕ್ರೀಡಾಕೂಟದ ಮಹಿಳೆಯರ 54 ಕೆಜಿ ವಿಭಾಗದ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಭಾರತದ ಬಾಕ್ಸರ್ ಪ್ರೀತಿ ಪವಾರ್ ಪ್ರೀ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶನಿವಾರ ರಾತ್ರಿ ನಡೆದ ಪೈಪೋಟಿಯಲ್ಲಿ ವಿಯೆಟ್ನಾಂನ ವೋ ಥಿ ಕಿಮ್ ಅನ್ಹ್ ಎದುರು ಪ್ರಾಬಲ್ಯ ಮೆರೆದ ಪ್ರೀತಿ,  5–0 ಅಂತರದ ಗೆಲುವು ಸಾಧಿಸಿದ್ದಾರೆ.ಏಷಿಯನ್‌ ಗೇಮ್ಸ್‌ ಕಂಚಿನ ಪದಕ ವಿಚೇತೆ ಪ್ರೀತಿ ಅವರಿಗೆ ಇದು ಚೊಚ್ಚಲ ಒಲಿಂಪಿಕ್ ಸ್ಪರ್ಧೆಯಾಗಿದೆ. ಹರಿಯಾಣದ 20 ವರ್ಷದ ಈ

ಕುರ್ಚಿ ಉಳಿಸಿ ಬಜೆಟ್: ಕೇಂದ್ರದ ವಿರುದ್ಧ ರಾಹುಲ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್ ಅನ್ನು ‘ಕುರ್ಚಿ ಉಳಿಸಿ ಬಜೆಟ್’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ‘ಈ ಬಜೆಟ್ ಇತರೆ ರಾಜ್ಯಗಳ ವೆಚ್ಚದಲ್ಲಿ ಬಿಜೆಪಿ ಮಿತ್ರಪಕ್ಷಗಳಿಗೆ ‘ಪೊಳ್ಳು ಭರವಸೆ’ಗಳನ್ನು ನೀಡಿದೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ‘2024ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಣಾಳಿಕೆ ಹಾಗೂ ಹಿಂದಿನ ಬಜೆಟ್‌ಗಳ

ಪ್ರಧಾನಿ ಮೋದಿ ‘ಮನ್ ಕಿ ಬಾತ್’: ಮತದಾರರಿಗೆ ಧನ್ಯವಾದ ಸಲ್ಲಿಸಿದ ಪ್ರಧಾನಿ

ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲವಾದ ನಂಬಿಕೆಯನ್ನು ಇರಿಸಿದ್ದಕ್ಕಾಗಿ ನಾನು ದೇಶದ ಜನರಿಗೆ ಧನ್ಯವಾದಗಳನ್ನು ಹೇಳಲಿಚ್ಛಿಸುತ್ತೇನೆ. 2024ರ ಲೋಕಸಭೆ ಚುನಾವಣೆ ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರದ ಹಬ್ಬವಾಗಿತ್ತು. 65 ಕೋಟಿಗೂ ಹೆಚ್ಚು ಮಂದಿ ಮತದಾನದ ಹಕ್ಕು ಚಲಾಯಿಸಿದ್ದಾರೆ. ಯಾವುದೇ ದೇಶದಲ್ಲಿ ಇಷ್ಟು ದೊಡ್ಡ ಚುನಾವಣೆ ನಡೆದಿಲ್ಲ. ಇದಕ್ಕಾಗಿ ಚುನಾವಣಾ ಆಯೋಗ ಮತ್ತು ಇದಕ್ಕೆ ಸಂಬಂಧಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ

ದೆಹಲಿ:  ಸೇನಾಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿರುವ ಇಬ್ಬರು ಸಹಪಾಠಿಗಳು

ದೇಶದ ಸೇನಾ ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ಸಹಪಾಠಿಗಳು ಅಂದರೆ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಅಡ್ಮಿರಲ್ ದಿನೇಶ್ ತ್ರಿಪಾಠಿ ಕ್ರಮವಾಗಿ ಭಾರತದ ಸೇನಾಪಡೆ ಹಾಗೂ ನೌಕಾಪಡೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ನೌಕಾಪಡೆಯ ಮುಖ್ಯ ಅಡ್ಮಿರಲ್ ದಿನೇಶ್ ತ್ರಿಪಾಠಿ ಹಾಗೂ ಸೇನಾಪಡೆಯ ನಿಯೋಜಿತ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮಧ್ಯಪ್ರದೇಶದ ರೇವಾ ಪಟ್ಟಣದ ಸೈನಿಕಶಾಲೆಯಲ್ಲಿ ಓದಿದ್ದರು. 1970ರ ದಶಕದಲ್ಲಿ ಇವರು ಆ

ಈ ವಿಶ್ವದಲ್ಲಿ ನೀನೊಂದು ಬೊಟ್ಟು ಕೂಡ ಅಲ್ಲ

ನಮ್ಮೂರಿನ ಇಲ್ಲವೇ ಯಾವುದೇ ಒಂದು ಊರಿನ ಚಿತ್ರ ಅಲ್ಲವೇ ನೆಲಪಟ ಬಿಡಿಸಿದರೆ ಅದರಲ್ಲಿ ನೀವು ಇಲ್ಲವೇ ನಾವೊಂದು ಬೊಟ್ಟು.ಕರ್ನಾಟಕದ ಅಥವಾ ಭಾರತದ ಭೂಪಟ ಬರೆದರೆ ಪೇರೂರು ಇಲ್ಲವೇ ನಿಮ್ಮೂರು ಒಂದು ಬೊಟ್ಟು. ನಮ್ಮ ಲೋಕ ಭೂಪಟದಲ್ಲಿ ಕರ್ನಾಟಕ ಒಂದು ಬೊಟ್ಟು. ನೇಸರ ಸಂಸಾರದ ಚಿತ್ರದಲ್ಲಿ ಭೂಮಿಯೇ ಒಂದು ಬೊಟ್ಟು. ನಮ್ಮ ಬೆಂಗದಿರ ಕುಟುಂಬದಲ್ಲಿ ಎಂಟು ಗ್ರಹಗಳಿರುವುದು ನಮಗೆ ಗೊತ್ತು. ಆದರೆ ಹನ್ನೆರಡು ಗ್ರಹಗಳು ಇದ್ದು ನಾಲ್ಕನ್ನು ಸಣ್ಣದೆಂದು ಹೊರಗಿಡಲಾಗಿದೆ. ಇತರ

ಶ್ರೀನಗರದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ದೇಶದ ಜನತೆಗೆ ಯೋಗ ದಿನದ ಶುಭಾಶಯ ತಿಳಿಸಿದ ಮೋದಿ

ಜಗತ್ತು ಯೋಗವನ್ನು ಜಾಗತಿಕ ಕ್ಷೇಮದ ಪ್ರಬಲ ರಾಯಭಾರಿ ಎಂಬಂತೆ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಾಶ್ಮೀರದ ‘ಶೇರ್ ಇ ಕಾಶ್ಮೀರ್ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್’ನಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಮೋದಿ, ಜನರು ತಮ್ಮ ವೈಯಕ್ತಿಕ ಯೋಗಕ್ಷೇಮಕ್ಕೂ ಸಮಾಜದ ಕಲ್ಯಾಣಕ್ಕೂಸಂಬಂಧವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಯೋಗ ನೆರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ನಾವು