Home Archive by category ರಾಷ್ಟ್ರೀಯ (Page 2)

ಅಮ್ನೆಸ್ಟಿ ಇಂಟರ್ನ್ಯಾಷನಲ್ ವಿಷಾದ

2023ರಲ್ಲಿ ಪ್ರಪಂಚದಲ್ಲಿ 1,153 ಜನರಿಗೆ ಮರಣದಂಡನೆ ನೆರವೇರಿಸಿದ್ದು ಇದು ದಶಕದಲ್ಲೇ ಅತಿ ಹೆಚ್ಚು ಎಂದು ಲಂಡನ್ ಮೂಲದ ಅಮ್ನೆಸ್ಟಿ ಇಂಟರ್ನಾ್ಯಶನಲ್ ಹೇಳಿದೆ. ಇಷ್ಟೊಂದು ಮರಣದಂಡನೆ ನೆರವೇರಿರುವುದು 2015ರ ಬಳಿಕ ಅತಿ ಹೆಚ್ಚಿನದಾಗಿದೆ. 2023ರಲ್ಲಿ ಮರಣದಂಡನೆ ನೆರವೇರಿದ ಪ್ರಮಾಣವು 2022ಕ್ಕಿಂತ 30 ಶೇಕಡಾ ಹೆಚ್ಚು. ಮರಣದಂಡನೆ ಶಿಕ್ಷೆ ತೀರ್ಪು ನೀಡಿಕೆ ಕೂಡ

ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್ ಕಿರುಚಿತ್ರಕ್ಕೆ ಪ್ರಶಸ್ತಿ

ಚಲನಚಿತ್ರೋತ್ಸವದಲ್ಲಿ ಭಾರತದ ಪಾಯಲ್ ಕಪಾಡಿಯಾರ ಕಿರು ಚಿತ್ರ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಚಿತ್ರವು ಅತ್ಯುತ್ತಮ ಪ್ರಶಸ್ತಿ ಪಡೆದಿದೆ. ಕಿರುಚಿತ್ರ ವಿಭಾಗದಲ್ಲಿ ಪಾಯಲ್‌ರ ಈ ಚಿತ್ರವು ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ಮುಂಬಯಿ ಮೂಲದ ಪಾಯಲ್‌ರಿಗೆ ಕಿರುಚಿತ್ರ ತಯಾರಿಕೆ ಮತ್ತು ಪ್ರಶಸ್ತಿ ಹೊಸತಲ್ಲ. 2021ರ ಕಾನ್ ಚಿತ್ರೋತ್ಸವದಲ್ಲಿ ಅವರ ‘ನೈಟ್ ಆಫ್ ನೋಯಿಂಗ್ ನತಿಂಗ್’ ಗೋಲ್ಡನ್ ಐ ಪ್ರಶಸ್ತಿ ಪಡೆದಿತ್ತು.

ಪುಲ್ವಾಮದಲ್ಲಿ ಸೈನಿಕರ ಸಾವು ಆಕಸ್ಮಿಕವೇ, ಕೊಲೆಯೇ?

ಸತ್ಯಪಾಲ್ ಮಲಿಕ್ ಅವರ ಕಚೇರಿಗಳ ಮೇಲೆ ಆರು ತಿಂಗಳ ಹಿಂದೆ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳ ದಾಳಿಯೋ ದಾಳಿಗೆ ಕಾರಣ ಪುಲ್ವಾಮಾದ ಕೊಲೆಗಳು ಎಂಬುದು ಒಂದು ಮಾತು. 2019ರಲ್ಲಿ 40 ಸಿಆರ್‌ಪಿಎಫ್ ಸೈನಿಕರು ಪುಲ್ವಾಮಾದಲ್ಲಿ ಸ್ಫೋಟಕ್ಕೆ ಸಿಕ್ಕಿ ಸತ್ತರು. ಇದನ್ನು ಚುನಾವಣಾ ವಿಷಯ ಮಾಡಿ ಬಿಜೆಪಿಯು ಅದೇ ವರುಷ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿತು ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕೊನೆಯ ರಾಜ್ಯಪಾಲರಾಗಿದ್ದ ಸತ್ಯ ಪಾಲ್ ಮಲಿಕ್ ಕಳೆದ ವರುಷ

ರೆಮಲ್ ಎಂಬ ಮೃದು ಮರಳು ಅನಾಹುತ

ರೆಮಲ್ ಚಂಡಮಾರುತವು ಪಡುವಣ ಬಂಗಾಳದಲ್ಲಿ ಹದಿನಾರಕ್ಕೂ ಹೆಚ್ಚು ಮತ್ತು ಬಾಂಗ್ಲಾದೇಶದಲ್ಲಿ ಹದಿನೆಂಟಕ್ಕೂ ಹೆಚ್ಚು ಜನರ ಪ್ರಾಣ ಹರಣ ಮಾಡಿದೆ. ಇದೇ ವೇಳೆ ಅಮೆರಿಕ ಸಂಯುಕ್ತ ಸಂಸ್ಥಾನದ ಬಯಲು ಪ್ರದೇಶದಲ್ಲಿ ದಿಗಿಣ ಹಾಕಿದ ಸುಳಿಗಾಳಿಯು ನಾಲ್ಕು ಮಕ್ಕಳ ಸಹಿತ ಹದಿನೆಂಟಕ್ಕೂ ಹೆಚ್ಚು ಮಂದಿಯ ಜೀವವನ್ನು ಹೀರಿದೆ. ರೆಮಲ್ ಚಂಡ ಸುಂಟರ ಕುಣಿತಕ್ಕೆ ಮರಗಳುರುಳಿ, ಕಟ್ಟಡಗಳು ಜರಿದು, ಭೂಕುಸಿತ ಉಂಟಾಗಿ, ಮಾಡಿನ ತಗಡುಗಳು ತರಗೆಲೆಗಳಾಗಿ ಹಾರಿ ಎಲ್ಲೆಲ್ಲೂ ವೇಗದ ಗಾಳಿ ಮತ್ತು

ಹೋಟೆಲ್ ಉದ್ಯಮದಲ್ಲಿ ಹೊಸತನ ಸೃಷ್ಟಿಸಿದ ರಾಜೇಂದ್ರ ಶೆಟ್ಟಿ: ಪುಣೆಗೆ ಲಗ್ಗೆ ಇಟ್ಟಿದೆ ಹೋಟೆಲ್ “ವಿಶ್ವನಾಥ್ ಪ್ಯಾಲೆಸ್” “ಪಂಜುರ್ಲಿ

ಜಗತ್ತಿನಲ್ಲೇ ಹೋಟೆಲ್ ಉದ್ಯಮದಲ್ಲಿ ಪ್ರಸಿದ್ಧಿಯನ್ನು ಪಡೆದವರು ನಮ್ಮ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರು.ಪುಣೆಯ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ   ಪಂಜುರ್ಲಿ ಗ್ರೂಪಿನ “ವಿಶ್ವನಾಥ್ ಪ್ಯಾಲೆಸ್”  ಹೋಟೆಲ್ ಬದುಕಿಗೊಂದು ಭರವಸೆಯ ಬೆಳಕಾಗಿದೆ.   ಉಪಹಾರ  ಸೇವಿಸುವುದಕ್ಕಾಗಿ  ಹೋಟೆಲ್ ಒಳಗಡೆ ಹೆಜ್ಜೆ ಇಟ್ಟಾಗ  ಪ್ರತೀ ಹೆಜ್ಜೆಗೂ ಇಲ್ಲಿನ ಗೋಡೆಗಳ ಮೇಲಿನ ಭಿತ್ತಿ ಪತ್ರಗಳು ಮೈ

ಪ್ರಧಾನಿ ಮತ್ತು ರಾಹುಲ್‍ರಿಗೆ ಬಹಿರಂಗ ಚರ್ಚೆಗೆ ಕರೆ

ಸುಪ್ರೀಂ ಕೋರ್ಟಿನ ಮಾಜೀ ನ್ಯಾಯಾಧೀಶರಾದ ಮದನ್ ಲೋಕೂರ್, ದಿಲ್ಲಿ ಹೈಕೋರ್ಟಿನ ನಿವೃತ್ತ ಜಸ್ಟಿಸ್ ಎ. ವಿ. ಶಾ ಮತ್ತು ದ ಹಿಂದೂ ಪತ್ರಿಕೆಯ ಹಿಂದಿನ ಸಂಪಾದಕರಾದ ಎನ್. ರಾಮ್ ಅವರುಗಳು ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಯವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ರಾಜಕೀಯ ವೇದಿಕೆಯ ಬದಲು ಜನತಾ ವೇದಿಕೆಯಲ್ಲಿ ಜನಪರ ಕಾರ್ಯಕ್ರಮಗಳನ್ನು ಕುರಿತು ಈ ಚರ್ಚೆ ಆಗಬೇಕಾದುದು ಈಗಿನ ಅಗತ್ಯ ಎಂದು ಅವರು ತಿಳಿಸಿದ್ದಾರೆ. ಒಂದು ವೇಳೆ ಮೋದಿಯವರಿಗಾಗಲಿ,

ಶತಮಾನದ ಬಳಿಕ ಪ್ಯಾರಿಸ್ ಒಲಿಂಪಿಕ್ಸ್ || Olympic Games Paris 2024

ಒಲಿಂಪಿಕ್ಸ್ ಬೆಳಕಿನ ಪಂಜು ಗ್ರೀಸಿನ ಅಥೆನ್ಸ್‍ನಿಂz 12 ದಿನಗಳ ಸಾಗರ ಪಯಣದ ಬಳಿಕ ಫ್ರಾನ್ಸಿನ ಮಾರ್ಸೆಲ್ ಬಂದರು ತಲುಪಿದೆ. ಸಾವಿರ ದೋಣಿಗಳು ಕವಾಯತಿನ ನಡುವೆ ಒಲಿಂಪಿಕ್ಸ್ ದೊಂದಿ ತಂದ 1896ರ ಬೆಲೆಮ್ ವ್ಯಾಪಾರಿ ಹಡಗನ್ನು ಮಾರ್ಸೆಲ್‍ನಲ್ಲಿ ಸ್ವಾಗತಿಸಲಾಯಿತು. ಕಳೆದ ಮೂರು ಒಲಿಂಪಿಕ್ಸ್‍ಗಳಲ್ಲಿ ಮಾರ್ಸೆಲ್‍ನವರೇ ಇದ್ದ ಫ್ರಾನ್ಸಿನ ಹುಟ್ಟು ಹಾಕು ತಂಡವು ಚಿನ್ನ ಗೆದ್ದಿತ್ತು. ಮಾಜೀ ಒಲಿಂಪಿಕ್ಸ್ ಆಟಗಾರ ಟೋನಿ ವಿಸ್ಟಾಂ ಸಕಲ ಸೇನಾ, ಪೋಲೀಸು, ನಾಗರಿಕ

ಬಾಹ್ಯಾಕಾಶಕ್ಕೆ ಮೂರನೆಯ ದಾಪುಗಾಲು

ಭಾರತದ ಬಾಹ್ಯಾಕಾಶದ ಕನಸನ್ನು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸಾಕಾರಪಡಿಸಿಕೊಂಡ ಮಹಿಳೆಯರು ಎಂದರೆ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್. ಭಾರತೀಯ ಮೂಲದ ಅಮೆರಿಕದ ಪ್ರಜೆಗಳು ಇವರು. ಈಗ ಸುನಿತಾ ವಿಲಿಯಮ್ಸ್ ಅವರು ಮೂರನೆಯ ಬಾರಿಗೆ ಬಾಹ್ಯಾಕಾಶಕ್ಕೆ ನೆಗೆದಿದ್ದಾರೆ. ಕಲ್ಪನಾ ಬದುಕು ಅರ್ಧದಲ್ಲೇ ಉರಿದು ಗಗನದ ತಾರೆಯಾಯಿತು. ಇಲ್ಲದಿದ್ದರೆ ಅವರು ಕೂಡ ಮತ್ತಷ್ಟು ಬಾಹ್ಯಾಕಾಶ ಸಾಧನೆಗಳನ್ನು ಮಾಡುತ್ತಿದ್ದರು. ಕಲ್ಪನಾ ಚಾವ್ಲಾ ಭಾರತ ಮೂಲದ ಮೊದಲ ಮಹಿಳಾ

ಭಾರತದಲ್ಲಿ ಕೋವಿಶೀಲ್ಡನ್ನೇ ಮುಖ್ಯವಾಗಿಸಿದ್ದೇಕೆ?

ಕೋವಿಡ್ ಕಾಲದಲ್ಲಿ ಬಾಬಾ ರಾಮದೇವ್ ಕಂಪೆನಿಗೆ ಮತ್ತು ಕೋವಿಶೀಲ್ಡ್ ಲಸಿಕೆ ಕಂಪೆನಿಗೆ ಅನುಕೂಲವಾಗುವಂತೆ ಮೋದಿಯವರ ಸರಕಾರ ನಡೆದುಕೊಂಡಿತು ಎಂಬ ವಿಷಯ ಸುಪ್ರೀಂ ಕೋರ್ಟಿನಲ್ಲೇ ಪ್ರಕಟಗೊಂಡಿದೆ. ಈ ಬಗೆಗೆ ಸರ್ವೋಚ್ಚ ನ್ಯಾಯಾಲಯವು ಜನರ ಒಳಿತಿಗಿಂತ ಲಸಿಕೆ ಕಂಪೆನಿಗಳ ಲಾಭ ಮುಖ್ಯವಾಯಿತೇ ಎಂದು ಬಿಜೆಪಿ ಒಕ್ಕೂಟ ಸರಕಾರವನ್ನು ಹಿಂದೆಯೇ ಪ್ರಶ್ನಿಸಿದ್ದೂ ಆಗಿದೆ. ಸುಪ್ರೀಂ ಕೋರ್ಟ್ ಖಂಡನೆಯ ಬಳಿಕ ಉತ್ತರಾಖಂಡ ಸರಕಾರವು ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ಸಹೋದರರ ಕಂಪೆನಿಯ

ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್ ರದ್ದು : ಸುಪ್ರೀಂ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಕೆ

ಉತ್ತರಾಖಂಡ ಸರಕಾರವು ರಾಮದೇವ್ ಅವರ ಆಯುರ್ವೇದ ಸಂಸ್ಥೆಯ 14 ಉತ್ಪನ್ನಗಳ ಪರವಾನಗಿ ರದ್ದು ಪಡಿಸಿದೆ. ಆ ಬಗೆಗೆ ಸಂಪೂರ್ಣ ಮಾಹಿತಿಯನ್ನು ಇಂದು ಬೆಳಿಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದೆ. ದಿವ್ಯಾ ಫಾರ್ಮಸಿಯ ದೃಷ್ಟಿ ಐ ಡ್ರಾಪ್, ಸ್ವಸರಿ ಗೋಲ್ಡ್, ಸ್ವಸರಿ ವಟಿ, ಬ್ರಾಂಕೋಮ್, ಸ್ವಸರಿ ಪ್ರವಾಹಿ, ಸ್ವಸರಿ ಅವಲೇಹ್, ಮುಕ್ತಾ ವಟಿ ಎಕ್ಸ್ಟ್ರಾ ಪವರ್, ಲಿಪಿಡಮ್, ಬಿಪಿ ಗ್ರಿಟ್, ಮಧುಗ್ರಿಟ್, ಮಧುನಾಶಿನಿ ವಟಿ, ಲಿವಾಮೃತ್ ಅಡ್ವಾನ್ಸ್, ಲಿವೋ ಗ್ರಿಟ್ ಈ ಎಲ್ಲ