Home Archive by category ರಾಷ್ಟ್ರೀಯ (Page 5)

ದೆಹಲಿ : ಹೈಕೋರ್ಟ್‌ಗೆ ಮುಖ್ಯ ನ್ಯಾಯಾಧೀಶರಾಗಿ ಗುಜರಾತಿನ ಎನ್. ವಿ. ಅಂಜಾರಿಯಾ ನೇಮಕ

ಇದೇ ಫೆಬ್ರವರಿ 24ರಂದು ನಿವೃತ್ತರಾಗುವ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಕನ್ನಡಿಗರೆ ಆದ ದಿನೇಶ್ ಕುಮಾರ್ ಅವರ ಜಾಗಕ್ಕೆ ಎನ್. ವಿ. ಅಂಜಾರಿಯಾ ಅವರನ್ನು ನೇಮಕ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಮುಖ್ಯ ನ್ಯಾಯಮೂರ್ತಿ ಆಯ್ಕೆಯನ್ನು ಸೂಚಿಸಿದೆ. ಗುಜರಾತ್ ರಾಜ್ಯದವರಾದ ಎನ್. ವಿ. ಅಂಜಾರಿಯಾ ಅವರು ಸದ್ಯ ಗುಜರಾತ್ ಹೈಕೋರ್ಟಿನಲ್ಲಿ

ಅಂಕಿ ಅಂಶದ ಪ್ರಶ್ನೆಗೆ ಸೊನ್ನೆ ಸೊನ್ನೆ ಉತ್ತರ

ಜಿಎಸ್‍ಟಿ ವಂಚನೆಯಲ್ಲಿ ಗುಜರಾತ್ ಮತ್ತು ಮುಂಬಯಿಯ ಗುಜರಾತ್ ಉದ್ಯಮಿಗಳೇ ಮೊದಲ ಸ್ಥಾನದಲ್ಲಿರುವುದು ವರದಿಯಾಗಿದೆ. ಕರ್ನಾಟಕದ ಕಾಂಗ್ರೆಸ್ ಸರಕಾರವು ಒಕ್ಕೂಟ ಸರಕಾರವು ತನಗೆ ಮಾಡಿರುವ ಹಣಕಾಸು ವಂಚನೆಯ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಈ ನಡುವೆ ಲೋಕ ಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿಯವರು ತೆರಿಗೆ ಪಾಲು ನೀಡಿಕೆ ಮತ್ತು ಅನುದಾನ ಕೊಡುವುದರಲ್ಲಿ ಬಿಜೆಪಿಯೇತರ ಸರಕಾರಗಳನ್ನು ಒಕ್ಕೂಟ ಸರಕಾರವು ವಂಚಿಸಿದೆ ಎಂದು ಆಳುವವರನ್ನು

ಸಿನಿ ರಾಜಕೀಯ ಈಜಿದವರು, ಮುಳುಗಿದವರು

ತಮಿಳು ನಟ ವಿಜಯ್ ತಮಿಳಗ ವೆಟ್ರಿ ಕಳಗಂ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಆ ಹೆಸರಿನ ಅರ್ಥ ತಮಿಳುನಾಡು ವಿಜಯ ಸಂಘಟನೆ. ವಿಜಯ್ ಎಂದರೆ ಗೆಲುವು, ವೆಟ್ರಿ ಎಂದೇ ಅರ್ಥ. ನಟಿಸುತ್ತಿರುವ ಎರಡು ಸಿನಿಮಾ ಮುಗಿಸಿ ಚಿತ್ರ ರಂಗಕ್ಕೆ ವಿದಾಯ ಹೇಳುವುದಾಗಿ ಸಹ ವಿಜಯ್ ಹೇಳಿದ್ದಾರೆ. ಕ್ರಿಶ್ಚಿಯನ್ ತಂದೆ ಎಸ್. ಎ. ಚಂದ್ರಶೇಖರ್, ಹಿಂದೂ ತಾಯಿ ಶೋಭಾ ಪುತ್ರ ವಿಜಯ್‍ರ ಮಡದಿ ಶ್ರೀಲಂಕಾ ತಮಿಳದಿ. ಹುಟ್ಟು ಹೆಸರು ಜೋಸೆಫ್ ವಿಜಯ್ ಚಂದ್ರಶೇಖರ್. ವಿಜಯ್ ರಾಜಕೀಯ ಪಕ್ಷ

ಪ್ರತ್ಯೇಕತೆ ಕೆರಳಿಸಿದ ಆಯವ್ಯಯ

ಚುನಾವಣಾ ಪೂರ್ವ ಮಧ್ಯಾವಧಿ ಆಯವ್ಯಯ ಮಂಡನೆ ಆಗಿದೆ. ಸಂಸದ ಶಶಿ ತರೂರ್ ಪ್ರಕಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಅಂಕಿ ಅಂಶಗಳಿಗಿಂತ ಹೆಚ್ಚಾಗಿ ಗಿಲೀಟಿನ ಮಾಮೂಲಿ ಶಬ್ದಗಳದ್ದಾಗಿದೆ. ಈ ಮಾತನ್ನು ನಿರ್ಮಲಾರ ಗಂಡ ಪರಕಾಲ ಪ್ರಭಾಕರ್ ಅವರು ಬಿಜೆಪಿ ಸರಕಾರದ ಒಟ್ಟಾರೆ ಶಬ್ದಗಳ ಕಸರತ್ತು ಗಮನಿಸಿ ಹಿಂದೆಯೇ ಟೀಕಿಸಿದ್ದಾರೆ. ಬಜೆಟ್ ಮಂಡನೆ ವೇಳೆ ಸಂಸದರ ಹಾಜರಾತಿ ಕಡಿಮೆ ಇತ್ತು. ಗ್ಯಾಲರಿಯಲ್ಲಿ ನಿರ್ಮಲಾರ ಮಗಳು ವಂಗಮಯಿ ಪರಕಾಲ ಕುಳಿತಿದ್ದರು.

ಕೇಂದ್ರ ಬಜೆಟ್ : 2047ಕ್ಕೆ ಅರಳಲಿದೆ ವಿಕಸಿತ್ ಭಾರತ್ ಆಶ್ವಾಸನೆ

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದ ಮೂಲಕ ಬಿಜೆಪಿ ಒಕ್ಕೂಟ ಸರಕಾರದ ಜನಪರ ಯೋಜನೆಗಳು ದೇಶದ ಮೂಲೆ ಮೂಲೆಗೆ ತಲುಪಿದೆ ಎಂದು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಹೇಳುವುದರ ಮೂಲಕ ಚುನಾವಣಾ ಪೂರ್ವ ತಾತ್ಕಾಲಿಕ ಬಜೆಟ್ ಮಂಡಿಸಿದರು. 2047ಕ್ಕೆ ವಿಕಸಿತ ಭಾರತ್ ಅರಳಲು ತಮ್ಮ ಬಜೆಟ್ ಸಹಾಯಕ ಎಂದು ಅವರು ಹೇಳಿದರು.ತಾತ್ಕಾಲಿಕ ಬಜೆಟ್ಟಿನ ಕೆಲವು ಮುಖ್ಯಾಂಶಗಳು ಮುಂದಿನಂತಿವೆ. ದೇಶದ ಜನರು ನಮಗೆ ಬಹುಮತ ನೀಡಿ ಗೆಲ್ಲಿಸಿದ್ದಾರೆ. ಕಳೆದ ಹತ್ತು ವರುಷಗಳಿಂದ ಭಾರತದ

ಜನವರಿ 29,ಭಾರತೀಯ ವೃತ್ತಪತ್ರಿಕೆ ದಿನ

ಕೆಲವರ ದಿನ ಆರಂಭವಾಗುವುದೇ ದಿನ ಪತ್ರಿಕೆಯನ್ನು ಓದುವ ಮೂಲಕ. ಕೈಯಲ್ಲಿ ಒಂದು ಕಪ್ ಕಾಫಿ ಅಥವಾ ಟೀ ಜೊತೆಗೆ ದಿನಪತ್ರಿಕೆಯಿದ್ದರೆ ಸುದ್ದಿಯನ್ನು ಓದುತ್ತಾ ಓದುಗರು ತಮ್ಮ ದಿನವನ್ನು ಆರಂಭಿಸುತ್ತಾರೆ. ರಾಜ್ಯ, ದೇಶ, ವಿದೇಶಗಳಲ್ಲಿ ನಡೆಯುವ ಸುದ್ದಿಗಳನ್ನು ಜನರಿಗೆ ತಲುಪಿಸುವ ದಿನ ಪತ್ರಿಕೆಗಳು ಇವತ್ತಿಗೂ ನಂಬಿಕೆಗೆ ಅರ್ಹವಾಗಿದೆ. ಹೀಗಾಗಿ ಪ್ರತಿ ವರ್ಷ ಜ. 29ರಂದು ಭಾರತೀಯ ವೃತ್ತಪತ್ರಿಕೆ ದಿನವನ್ನು ಆಚರಿಸಲಾಗುತ್ತದೆ.ಡಿಜಿಟಲ್‌ ಯುಗದಲ್ಲಿರುವ ನಾವಿಂದು

ಭಾರತದ ಡಬಲ್ಸ್ ಟೆನ್ನಿಸಿಗರು

ಆಸ್ಟ್ರೇಲಿಯಾ ಓಪನ್ ಟೆನ್ನಿಸ್‍ನಲ್ಲಿ 43ರ ಪ್ರಾಯದಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗೆ ಪುರುಷರ ಡಬಲ್ಸ್ ಗೆದ್ದು ರೋಹನ್ ಬೋಪಣ್ಣ ಸಾಧನೆ ಮಾಡಿದರು. ಅತಿ ಹಿರಿಯ ಗ್ರಾನ್‍ಸ್ಲಾಮ್ ವಿನ್ನರ್, ಅತಿ ಹಿರಿಯ ಟೆನ್ನಿಸ್ ಡಬಲ್ಸ್ ಒನ್ ಇತ್ಯಾದಿ ಸಾಧನೆ ಕರ್ನಾಟಕದ ಕೊಡವ ರೋಹನ್ ಬೋಪಣ್ಣ ಅವರದಾಯಿತು. ಭಾರತದ ಜಾಗತಿಕ ಗ್ರಾನ್‍ಸ್ಲಾಮ್ ಸಾಧಕರಾದ ಸಾನಿಯಾ ಮಿರ್ಜಾ, ಲಿಯಾಂಡರ್ ಪಯಸ್, ಮಹೇಶ್ ಭೂಪತಿ ಮೊದಲಾದವರ ಸಾಲಿಗೆ ಬೋಪಣ್ಣ

ನಿತೀಶ್ ಕುಮಾರ್ ಇಂಡಿಯಾ ಮೈತ್ರಿಕೂಟ ಬಿಡುತ್ತಿರುವ ಬಗ್ಗೆ ಮೊದಲೇ ಸುಳಿವು ಸಿಕ್ಕಿತ್ತು: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಬಿಹಾರ ಮುಖ್ಯಮಂತ್ರಿ ಬಿಜೆಪಿಯೊಂದಿಗೆ ಕೈಜೋಡಿಸುವ ವಿಚಾರದ ಬಗ್ಗೆ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಹಾಗೂ ಅವರ ಮಗ ತೇಜಸ್ವಿ ಯಾದವ್ ಅವರು ಐದು ದಿನಗಳ ಹಿಂದೆಯೇ ನನಗೆ ಮಾಹಿತಿ ನೀಡಿದ್ದರು. ಅದು ಈಗ ನಿಜವಾಗಿದೆ. ಅವರು ಹೋಗುವುದಾದರೆ ಹೋಗಲಿ ಎಂದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿತೀಶ್ ಕುಮಾರ್ ಅವರು ಇಂಡಿಯಾ ಮೈತ್ರಿಕೂಟ ಬಿಡುತ್ತಿರುವ ಬಗ್ಗೆ ಮುಂಚೆಯೇ ಸುಳಿವು

ಪಾಟ್ನಾ: ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್‌ ಕುಮಾರ್‌ ರಾಜೀನಾಮೆ

ಬಿಹಾರ ರಾಜಕೀಯ ಭಾರಿ ಕುತೂಹಲ ಕೆರಳಿಸಿದ್ದು, ನಿತೀಶ್‌ ಕುಮಾರ್‌ ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಹಾರ ರಾಜ್ಯಪಾಲರನ್ನು ಭೇಟಿ ಮಾಡಿದ ನಿತೀಶ್‌ ಕುಮಾರ್‌ ಅಧಿಕೃತವಾಗಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಆರ್‌ಜೆಡಿ, ಕಾಂಗ್ರೆಸ್‌, ಎಡರಂಗ ಹಾಗೂ ಜೆಡಿಯು ಮೈತ್ರಿ ಸರ್ಕಾರ ಪತನಗೊಂಡಿದೆ. ಇನ್ನೊಂದೆಡೆ, ಬಿಜೆಪಿ ಜತೆಗೆ ಸೇರಿ ಇಂದು ಸಂಜೆ ಮತ್ತೆ ಜೆಡಿಯು – ಬಿಜೆಪಿ ಸರ್ಕಾರ ರಚನೆಯಾಗೋದು ಸಹ ಬಹುತೇಕ ಖಚಿತವಾಗಿದೆ. ಭಾನುವಾರ

ಒಣಗುತ್ತಿರುವ ಗಣರಾಜ್ಯ ತತ್ವಗಳು || Republic Day

ಗಣರಾಜ್ಯ ಎನ್ನುವುದು ಹಳೆಯ ಕಲ್ಪನೆ. ಅದರ ಆಧುನಿಕ ರೂಪವೇ ಪ್ರಜಾಪ್ರಭುತ್ವ. ಸೆಪ್ಟೆಂಬರ್ 15ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ಆಯಿತು. 2023ರ ಅಂದು ಸಂವಿಧಾನದ ಪೀಠಿಕೆ ಓದುವ ದೊಡ್ಡ ಆಂದೋಲನವೇ ನಡೆಯಿತು. ಭಾರತವು 1947ರಲ್ಲಿ ಸ್ವಾತಂತ್ರ್ಯ ಪಡೆದರೂ ಗಣರಾಜ್ಯ ಇಲ್ಲವೇ ಪ್ರಜಾಪ್ರಭುತ್ವ ದೇಶವಾದುದು 1950ರ ಜನವರಿ 26ರಂದು. ಆದ್ದರಿಂದ ಈ ದಿನ ದೇಶದ ಪ್ರಜಾಪ್ರಭುತ್ವ ದಿನ, ಗಣರಾಜ್ಯೋತ್ಸವ ದಿನ ಎನ್ನುವುದು ಸಹ ರೂಢಿ. ಈ ಸಂವಿಧಾನವನ್ನು ಎರಡು