Home Archive by category ವಾಣಿಜ್ಯ

ಚಲೋ ಕಾರ್ಡ್‍ನಲ್ಲಿ ವಿದ್ಯಾರ್ಥಿಗಳಿಗೆ ಶೇ.50 , ನಿತ್ಯ ಪ್ರಯಾಣಿಕರಿಗೆ ಶೇ.20 ರಿಯಾಯಿತಿ

ಮೂಡುಬಿದಿರೆ: ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖಾಸಗಿ ಬಸ್‍ಗಳಲ್ಲಿ ಶೇ.50 ರಿಯಾಯಿತಿ, ನಿತ್ಯ ಪ್ರಯಾಣಿಕರಿಗೆ ಶೇ.20 ರಿಯಾಯಿತಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಪಡೆಯದೆ, ಲಾಭ-ನಷ್ಟಗಳನ್ನು ನೋಡದೆ ಈ ಸೌಲಭ್ಯವನ್ನು ಚಲೋ ಬಸ್ ಕಾರ್ಡ್‍ನ ಮುಖಾಂತರ ನೀಡುತ್ತಿದ್ದು, ಇದು ಸಂಪೂರ್ಣ ಡಿಜಿಟಲ್

ಎಂ.ಪಿ ಸಿಲ್ಕ್ಸ್ ಆಷಾಢ ಆಫರ್ ರಿಯಾಯಿತಿ ದರದಲ್ಲಿ ವಿವಿಧ ಬ್ರ್ಯಾಂಡೆಡ್ ವಸ್ತ್ರಗಳು ಶೇ.50ರಷ್ಟು ಡಿಸ್ಕೌಂಟ್

ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಎಂ.ಪಿ. ಸಿಲ್ಕ್ಸ್ ಮಳಿಗೆಯಲ್ಲಿ ಆಷಾಢ ಪ್ರಯುಕ್ತ ಬಿಗ್ ಸೇಲ್‍ನ್ನು ಹಮ್ಮಿಕೊಂಡಿದ್ದು, ಶೇ.50ರಷ್ಟು ರಿಯಾಯಿತಿಯನ್ನು ಘೋಷಿಸಿದ್ದು, ಉತ್ತಮ ಗುಣಮಟ್ಟದ ವಸ್ತ್ರಗಳು ಕೈಗೆಟಕುವ ದರದಲ್ಲಿ ಸಿಗಲಿದೆ. ವಿವಿಧ ವಿನ್ಯಾಸದ ಮತ್ತು ಉತ್ತಮ ಗುಣಮಟ್ಟವನ್ನು ಹೊಂದಿರುವ ವಸ್ತ್ರ ಮಳಿಗೆ ಎಂ.ಪಿ. ಸಿಲ್ಕ್ಸ್. ಈ ಬಾರಿಯ ಆಷಾಢ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿಯನ್ನು ಘೋಷಿಸಿದ್ದಾರೆ. ಸೂರತ್ ಸೀರೆ, ಫ್ಯಾನ್ಸಿ ಮತ್ತು ಕಾಟನ್

ಭಾರತದ ಅತಿ ಎತ್ತರದ “ಭೀಮಾ” ರೊಬೋಟ್ : ಬಹುಪಯೋಗಿ ರೋಬೋಟ್ ಬಳಕೆಗೆ ಸಿದ್ಧ

ಬೆಂಗಳೂರು, ಜು, 5; ಹಲೋವರ್ಲ್ಡ್ ಫಿಜಿಟಲ್ ಮೆಟಾವರ್ಸ್ ಪ್ಲಾಟ್ ಫಾರ್ಮ್ ನಿಂದ ಭಾರತದ ಅತಿ ಎತ್ತರದ “ಭೀಮಾ” ರೋಬೋಟ್ ಅನ್ನು ಅನಾವರಣಗೊಳಿಸಲಾಗಿದೆ. ಹಲೋವರ್ಲ್ಡ್ ಫಿಜಿಟಲ್ ಮೆಟಾವರ್ಸ್ ಪ್ಲಾಟ್ ಫಾರ್ಮ್ ನ ಸಂಸ್ಥಾಪಕ ಹರ್ಷ ಕಿಕ್ಕೇರಿ ಅವರು ದೇಶೀಯ ರೊಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. “ಭೀಮಾ” 7.7 ಅಡಿ ಎತ್ತರದ ರೋಬೋಟ್ ಆಗಿದ್ದು, ಇದರ ದೇಹಕ್ಕೆ ಎಲ್.ಇ.ಡಿ ತಂತ್ರಜ್ಞಾನದ ಸ್ಪರ್ಷ ನೀಡಲಾಗಿದೆ. ಈ ರೋಬೋಟ್ ಬಹುಪಯೋಗಿಯಾಗಿದ್ದು, ವಿಶೇಷವಾಗಿ ಸ್ವಾಗತಕಾರನ

ಅರೆಹೊಳೆಯಲ್ಲಿ ಶ್ರೀ ದುರ್ಗಾಂಬಾ ಟ್ರೇಡರ್ಸ್ ವ್ಯಾಪಾರ ಮಳಿಗೆ

ಕಳೆದ ಹಲವಾರು ವರುಷಗಳಿಂದ ಮಸ್ಕಿಯ ವಿನಾಯಕ ಹೋಟೆಲ್ ಎದುರುಗಡೆ ಕಾರ್ಯನಿರ್ವಹಿಸುತ್ತಿದ್ದ ಶ್ರೀ ದುರ್ಗಾಂಬಾ ಟ್ರೇಡರ್ಸ್ ವ್ಯಾಪಾರ ಮಳಿಗೆಯು ಈಗ ಅವರ ಸ್ವಂತ ವಿಶಾಲ ಜಾಗವಾದ ಅರೆಹೊಳೆಯಲ್ಲಿ ಶುಭಾರಂಭಗೊಂಡಿತು. ನೂತನ ಮಳಿಗೆಯಲ್ಲಿ ಹೊಸ ಹೊಸ ಮಾದರಿಯ ಪಿಠೋಪಕರಣಗಳು, ಸಾನಿಟರಿ ವಸ್ತುಗಳು, ಪೈಂಟ್ಸ್ ಹಾಗೂ ಗುಣಮಟ್ಟದ ಕಟ್ಟಡ ಸಾಮಗ್ರಿಗಳು ಕೈಗೆಟುಕುವ ದರದಲ್ಲಿ ಲಭ್ಯವಾಗಲಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ ಪಿಠೋಪಕರಣಗಳ ಮೇಲೆ ಶೇಕಡಾ ಇಪ್ಪತ್ತರಷ್ಟು ಕಡಿಮೆ

ಕೊಟ್ಟಾರ ಚೌಕಿಯಲ್ಲಿ ಹೊಂಡಾ ಬಿಗ್ ವಿಂಗ್ ಮಳಿಗೆ ಶುಭಾರಂಭ

ಹೊಂಡಾ ಮೋಟಾರ್‍ಸ್‌ನವರ ಅತ್ಯುನ್ನತ ಶ್ರೇಣಿಯ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಹೊಂಡಾ ಬಿಗ್ ವಿಂಗ್ ಮಳಿಗೆ ಶುಭಾರಂಭಗೊಂಡಿತು. ನಗರದ ಕೊಟ್ಟಾರ ಚೌಕಿಯ ವಿಎಸ್‌ಕೆ ಟವರ್‌ನಲ್ಲಿ ಆರಂಭಗೊಂಡಿತು. ದ್ವಿಚಕ್ರ ವಾಹನ ಪ್ರೀಯರ ನೆಚ್ಚಿನ ಶೋರೋಂ ಆಗಿರುವ ಹೊಂಡಾ ಮೊಟಾರ್‍ಸ್‌ನವರ ಹೊಂಡಾ ಬಿಗ್ ವಿಂಗ್ ನಗರದ ಕೊಟ್ಟಾರ್ ಚೌಕಿಯ ವಿಎಸ್‌ಕೆ ಟವರ್‌ನಲ್ಲಿ ಆರಂಭಗೊಂಡಿತು. ಹೊಂಡಾ ಬಿಗ್ ವಿಂಗ್ ಮಳಿಗೆಯನ್ನು ಇಂಡಿಯನ್ ಐಡಲ್ 12 ರ ಖ್ಯಾತಿಯ ನಿಹಾಲ್ ತಾವ್ರೋ ಮತ್ತು ಸಚಿನ್

ಮಂಗಳೂರಿನಲ್ಲಿ ವಾಣಿಜ್ಯ ಸಪ್ತಾಹ-ರಫ್ತುದಾರರ ಸಮಾವೇಶ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ಸಂಸ್ಥೆ ವತಿಯಿಂದ 75ನೇ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಾಣಿಜ್ಯ ಸಪ್ತಾಹ ರಫ್ತುದಾರರ ಸಮಾವೇಶಕ್ಕೆ ನಗರದ ಓಷಿಯನ್ ಪರ್ಲ್ ಹೋಟೆಲ್‍ನಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಅವರು ಸೆ.23ರ ಗುರುವಾರ ಚಾಲನೆ ನೀಡಿದರು.

ವಾರಾಂತ್ಯ ಲಾಕ್ಡೌನ್ ವಿರೋಧಿಸಿ ವ್ಯವಹಾರ ನಡೆಸಲು ಕರಾವಳಿ ವರ್ತಕರ ತೀರ್ಮಾನ

ದ. ಕ , ಉಡುಪಿ ಜಿಲ್ಲೆಗಳಲ್ಲಿ ಸತತವಾಗಿ ವಾರಾಂತ್ಯ ಲಾಕ್ಡೌನ್ ಮುಂದುವರಿಸುತ್ತಿರುವುದರಿಂದ ಜನ ಸಾಮಾನ್ಯ ರಿಗೂ ಕೆಲ ವರ್ಗದ ವ್ಯಾಪಾರಿಗಳಿಗೂ ತೀವ್ರ ತೊಂದರೆ ಯಾಗಿದ್ದು ಅವೈಜ್ಞಾನಿಕ ಮತ್ತು ತಾರ ತಮ್ಯ ಗಳಿಂದ ಕೂಡಿದ ಈ ನಿರ್ಧಾರವನ್ನು ಪ್ರತಿಭಟಿಸಿ ಅಂಗಡಿ ತೆರೆದು ವ್ಯವಹಾರ ನಡೆಸಲು ಕರಾವಳಿ ಜಿಲ್ಲೆಗಳ ಜವಳಿ, ಪಾದರಕ್ಷೆ, ಫ್ಯಾನ್ಸಿ ಮುಂತಾದ ಅಂಗಡಿಗಳ ಮಾಲೀಕರು ನಿನ್ನೆ ನಡೆದ ಸಂಘದ ವಿಶೇಷ ಮಹಾ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡರು. ಪ್ರತೀ ಅಂಗಡಿಯವರು

ಮಲಬಾರ್ ಗೋಲ್ಡ್ & ಡೈಮಂಡ್ಸ್:9ನೇ ಆವೃತ್ತಿಯ ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನಕ್ಕೆ ಚಾಲನೆ

ಜಗತ್ತಿನ ಅತಿದೊಡ್ಡ ಚಿನ್ನ ಮತ್ತು ವಜ್ರಾಭರಣಗಳ ರಿಟೇಲ್ ಚೈನ್ ಮಾರಾಟದ ಸಂಸ್ಥೆಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ 9ನೇ ಆವೃತ್ತಿಯ ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಬಾರಿ ವಿಶೇಷ ವಿವಾಹ ಗೀತೆಯಾಗಿ #MakeWayForTheBride  ಅನ್ನು ಪ್ರಸ್ತುತಪಡಿಸಿದ್ದು, ಆಧುನಿಕ ದಿನಮಾನಗಳ ಭಾರತೀಯ ವಿವಾಹ ಸಮಾರಂಭಗಳ ಹೆಗ್ಗುರುತಾಗಿರುವ ವಧುವಿನ ಅದ್ಧೂರಿ ಪ್ರವೇಶವನ್ನು ಚಿತ್ರಿಸಿದೆ. ಕಲಾತ್ಮಕವಾಗಿ ಚಿತ್ರೀಸಲಾದ 3 ನಿಮಿಷಗಳ ಈ

ಕೋಳಿ ಮೊಟ್ಟೆಗೆ ಹೆಚ್ಚಿದ ಬೇಡಿಕೆ: ಮೊಟ್ಟೆ ದರದಲ್ಲೂ ಏರಿಕೆ

ಕೋಳಿ ಮೊಟ್ಟೆಗೆ ಬೇಡಿಕೆ ಹೆಚ್ಚಿದ್ದು, ಸರಬರಾಜಿನಲ್ಲಿ ಕೂಡ ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ತಾಜಾ ಮೀನಿನ ಅಭಾವ ಹಾಗೂ ಬೆಲೆಯೂ ಗಗನಕ್ಕೆ ಏರಿರುವುದರಿಂದ ಮೊಟ್ಟೆಗೆ ಡಿಮ್ಯಾಂಡ್ ಸಿಕ್ಕಾಪಟ್ಟೆ ಇದೆ. ಏಪ್ರಿಲ್ ಅಂತ್ಯದಿಂದ ಮೊಟ್ಟೆ ದರದಲ್ಲಿ ಏರಿಕೆ ಕಾಣುತ್ತಿದ್ದು, ಇದೀಗ ಚಿಲ್ಲರೆ ಅಂಗಡಿಯಲ್ಲಿ 5ರೂ. ಇದ್ದ ದರ 6.50 ರಿಂದ 7 ರೂ. ತಲುಪಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಲಾಕ್ ಡೌನ್ ಹಾಗೂ ಕಡಲ ಮೀನುಗಾರಿಕೆ ರಜೆಯ ಹಿನ್ನೆಲೆಯಲ್ಲಿ

ಚಿನ್ನಕ್ಕೆ ಹಾಲ್‌ಮಾರ್ಕಿಂಗ್ ಕಡ್ಡಾಯ: ಇದು ಖರೀದಿದಾರರು, ಮಾರಾಟಗಾರರಿಗೆ ಅತ್ಯಗತ್ಯ: ಎಂ.ಪಿ.ಅಹ್ಮದ್

ಬೆಂಗಳೂರು: ಗ್ರಾಹಕರ ಹಕ್ಕುಗಳು ಅತ್ಯಂತ ಮಹತ್ವ ಮತ್ತು ಅಗತ್ಯ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರಗಳು ಅನೇಕ ಕಾನೂನುಗಳನ್ನು ತಂದಿವೆ. ಗ್ರಾಹಕರು ತಾವು ಖರೀದಿಸುವ ಯಾವುದೇ ಉತ್ಪನ್ನವಾಗಲೀ ಅದಕ್ಕೆ ನೀಡುವ ಹಣಕ್ಕೆ ತಕ್ಕಂತೆ ಮೌಲ್ಯವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ 1986 ರಲ್ಲಿ ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಸರ್ಕಾರ ಚಿನ್ನ ಮತ್ತು ಚಿನ್ನದ ಉತ್ಪನ್ನಗಳಿಗೆ ಹಾಲ್‌ಮಾರ್ಕ್ ಅನ್ನು ಕಡ್ಡಾಯಗೊಳಿಸಿದ ಕಾನೂನು