ವಿಟ್ಲ ಚಂದಳಿಕೆ ಕಾರ್ತಿಕ್ ಫ್ರೆಂಡ್ಸ್ ಕ್ಲಬ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಬೆಳ್ಳಿ ಹಬ್ಬ ಸಮಿತಿ ವತಿಯಿಂದ 25 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಉದ್ಘಾಟನೆಗೊಂಡಿತು. ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಭಕ್ತರ ಸತ್ಸಂಕಲ್ಪಕ್ಕೆ ದೇವರ ಅನುಗ್ರಹ ಸದಾ
ದಕ್ಷಿಣ ಕನ್ನಡ ಜಿಲ್ಲೆಗೆ ಗೃಹ ಲಕ್ಷ್ಮಿ ಯೋಜನೆಗಾಗಿ 60ಕೋಟಿ ರೂಪಾಯಿ ನೀಡಲಾಗಿದೆ. ಮಹಿಳೆಯರಿಗೆ ಶಕ್ತಿ ತುಂಬುವ ಮೂಲಕ ಕುಟುಂಬವನ್ನು ಸದೃಢವಾಗಿಸಲಾಗುತ್ತಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದಲ್ಲಿ ಸಮುದಾಯ ಭವನದ ಶಿಲಾನ್ಯಾಸವನ್ನು ನಡೆಸಿ ಮಾತನಾಡಿದರು. ಕ್ರೈಸ್ತ ಅಕಾಡೆಮಿಯ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಚರ್ಚ್ ಬಳಿಯ ಇಂಟರ್ ಲಾಕ್ ಅಳವಡಿಕೆಗೆ ಹಾಗೂ ಸಮುದಾಯ ಭವನಕ್ಕೆ
ವಿಟ್ಲ : ಶೋರಿನ್ – ರಿಯು ಕರಾಟೆ ಅಸೋಸಿಯೇಷನ್ (ರಿ.), ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಮತ್ತು ಹೆಚ್.ಕೆ. ಅನಂತ್ ರಾಜ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಷನ್, ಮೂಡಬಿದ್ರೆ ಇದರ ಜಂಟಿ ಆಶ್ರಯದಲ್ಲಿ ನಡೆದ 2೦ನೇ ಮುಕ್ತ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ – 2023, ಸೆಪ್ಟೆಂಬರ್ 9, ಶನಿವಾರದಂದು ಮೂಡಬಿದ್ರೆಯಲ್ಲಿ ನಡೆಯಿತು. ಈ ಚಾಂಪಿಯನ್ಶಿಪ್ ನಲ್ಲಿ ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ
ವಿಟ್ಲ : ಸೆಪ್ಟೆಂಬರ್ 09 : ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ ಪೆರಾಜೆ ಮಾಣಿ ಇದರ ಜಂಟಿ ಆಶ್ರಯದೊಂದಿಗೆ ಬಂಟ್ವಾಳ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯು ಸೆಪ್ಟೆಂಬರ್ 09 ರಂದು ಬಾಲವಿಕಾಸ ಶಾಲೆಯಲ್ಲಿ ಜರಗಿತು. ಈ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರಾದ
ವಿಟ್ಲ: ನಗರೋತ್ಥಾನ ಹಾಗೂ 15ನೇ ಹಣಕಾಸು ಯೋಜನೆಯ ಅನುದಾನ ಹಂಚಿಕೆಯಲ್ಲಿ ಬಿಜೆಪಿ ಬೆಂಬಲಿತ 12 ಮಂದಿ ಸದಸ್ಯರನ್ನು ಕಡೆಗಣಿಸಲಾಗಿದೆ. ಶಾಸಕರು ಅನುದಾನವನ್ನು ಎಲ್ಲರಿಗೂ ಸಮನಾಗಿ ಹಂಚಬೇಕು ಎಂದು ಆಗ್ರಹಿಸಿ ಸೆ.7ರಂದು ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಧರಣಿಯನ್ನು ನಡೆಸುವ ಮೂಲಕ ನ್ಯಾಯವನ್ನು ಯಾಚಿಸಲಿದ್ದೇವೆ. ಸ್ಥಳಕ್ಕೆ ಯೋಜನಾ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳು ಆಗಮಿಸಿ ಮನವಿಯನ್ನು ಸ್ವೀಕಾರ ಮಾಡಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಅರುಣ್ ಎಂ. ವಿಟ್ಲ
ಬಂಟ್ವಾಳ: ಹಿರಿಯ ರಂಗಕರ್ಮಿ, ನಟ, ನಿರ್ದೇಶಕ, ತರಬೇತುದಾರ, ಸಂಘಟಕ, ಕಾರ್ಯಕ್ರಮ ನಿರೂಪಕ ಮಂಜು ವಿಟ್ಲ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನಲ್ಲಿರುವ ಪುತ್ರಿ ಮನೆಯಲ್ಲಿ ಬುಧವಾರ ನಿಧನರಾದರು.ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ ಮತ್ತು ಕಲಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಮಂಜುವಿಟ್ಲ ಅವರು ಹಿರಿಯ ತರಬೇತುದಾರರಾಗಿ, ಚಿತ್ರಕಲಾವಿದರಾಗಿ, ಕಾರ್ಯಕ್ರಮ ನಿರೂಪಕರಾಗಿ, ರಂಗಕಲಾವಿದರಾಗಿ, ರಂಗ ನಿರ್ದೇಶಕರಾಗಿ, ವಿಮರ್ಷಕರಾಗಿ,
ವಿಟ್ಲ – ಪೆರಾಜೆ, ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸ್ಕಾಲರ್ ಶಿಪ್ ಮಾಸ್ಟರ್ ಎಂದೇ ಖ್ಯಾತರಾದ ನಿವೃತ್ತ ಸರಕಾರಿ ಶಿಕ್ಷಕರಾದ ಶ್ರೀ ನಾರಾಯಣ ನಾಯ್ಕ್ ರವರು ಮಾತನಾಡಿ, ” ಎರಡು ರೀತಿಯ ದೇವರು ಕಾಣಸಿಗುವ ಪವಿತ್ರ ಸ್ಥಳವೆಂದರೆ ಅದು ಶಾಲೆ. ಶಿಕ್ಷಕ ವೃತ್ತಿ ಎನ್ನುವುದು ಬಿಳಿ ಬಟ್ಟೆ ಇದ್ದಂತೆ.
ವಿಟ್ಲದ ನೀರಕಣಿ ಜೆ.ಎಲ್. ಅಡಿಟೋರಿಯಂನಲ್ಲಿ ಸೆಪ್ಟೆಂಬರ್ 2 ಹಾಗೂ 3ರಂದು ಬೃಹತ್ ಸಸ್ಯಮೇಳ, ಆಹಾರ ಮೇಳ, ವಸ್ತು ಪ್ರದರ್ಶನ, ಮಾರಾಟ ಹಾಗೂ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ ಎಂದು ಮೇಳದ ಅಧ್ಯಕ್ಷ ಜಯರಾಮ್ ಬುಳೇರಿಕಟ್ಟೆ ತಿಳಿಸಿದ್ದಾರೆ. ವಿಟ್ಲದ ಪಂಚಮಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು. ವಿವಿಧ ತಳಿಯ ಸಸ್ಯಗಳು, ನೂರಕ್ಕೂ ಹೆಚ್ಚಿನ ಸ್ಟಾಲ್‍ಗಳು, ಕರಾವಳಿ ಹಲಸಿನ ದೋಸೆ ಸೇರಿದಂತೆ ಸುಮಾರು 60 ಬಗೆಯ ದೋಸೆಗಳು, ಉತ್ತರ
ವಿಟ್ಲ: ಸಂಸ್ಕಾರ, ಸಂಸ್ಕೃತಿ ಹಳ್ಳಿಯಲ್ಲಿ ದೃಢವಾಗಿದ್ದು, ಗ್ರಾಮೀಣ ಭಾಗದಲ್ಲಿ ಇದು ವ್ಯತ್ಯಾಸವಾಗದಂತೆ ತಡೆಯುವ ಕಾರ್ಯವಾಗಬೇಕು. ಹಳ್ಳಿಯಲ್ಲಿ ಸಂಸ್ಕಾರದಲ್ಲಿ ವ್ಯತ್ಯಾಸವಾದ ಭಾರತ ಹಾಳಾಗುತ್ತದೆ. ಭಾವನೆಯಿಂದ ಕೂಡಿದ ರಥ ಭಾರತವಾಗಿದ್ದು, ಸನಾತನ ಧರ್ಮದ ರಕ್ಷಣೆಯ ಭಾವವನ್ನು ಎಲ್ಲರೂ ಹೊಂದಿದ್ದಾರೆ. ಹಬ್ಬಗಳ ಆಚರಣೆಯಿಂದ ಸಂಘಟನೆ ಬಲವಾಗುತ್ತದೆ ಎಂದು ಗೌರಿಗದ್ದೆ ಸ್ವರ್ಣ ಪೀಠಿಕಾವುರದ ಅವಧೂತ ಶ್ರೀ ವಿನಯ ಗುರೂಜಿ ಹೇಳಿದರು. ಅವರು ಮಾಣಿಲ ಶ್ರೀಧಾಮ ಶ್ರೀ
ಮುಂಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಟ್ಲ ಆಲ್ ಇಂಡಿಯಾ ಶಿಟೋ ರಿಯೋ ಕರಾಟೆ ಡೊ ಯೂನಿಯನ್ ತಂಡದ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶೋಟೊಕನ್ ಕರಾಟೆ-ಡೊ ಫೆಡರೆಷನ್ ಇವರ ಆಶ್ರಯದಲ್ಲಿ ಮರಾಠ ಮಂಡಲ್ ಹಾಲ್ ಮುಲುಂದ್ ಮುಂಬೈ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಇಂಡಿಪೆಂಡೆನ್ಸ್ ಕಪ್ ಕರಾಟೆ ಚಾಂಪಿಂಯನ್‍ಶಿಪ್‍ನಲ್ಲಿ ಆಲ್ ಇಂಡಿಯಾ ಶಿಟೋ ರಿಯೋ ಕರಾಟೆ ಡೊ ಯೂನಿಯನ್ತಂ ಡದ ಕರಾಟೆ