Home Archive by category benagaluru

ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್ ಅವರು ಹೃದಯಾಘಾತದಿಂದ ಇಂದು ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಅವರು 1942 ಆಗಸ್ಟ್ 19ರಂದು ಮೈಸೂರು

ಸೋನು ಗೌಡಗೆ ಸಿಜೆಎಂ ಶರತ್ತುಬದ್ಧ ಜಾಮೀನು

ಕಾನೂನು ತಪ್ಪಿ ಮಗು ದತ್ತು ಪಡೆದಿದ್ದರು ಎಂಬ ಆರೋಪಕ್ಕೆ ಒಳಗಾಗಿದ್ದ ರೀಲ್ಸ್ ನಟಿ ಸೋನು ಗೌಡ ಅವರಿಗೆ ಬೆಂಗಳೂರು ಗ್ರಾಮಾಂತರ ಸಿಜೆಎಂ ಅವರು ಜಾಮೀನು ಮಂಜೂರು ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಹೆಣ್ಣು ಮಗುವನ್ನು ದತ್ತು ಪಡೆಯುವಾಗ ಸೋನುಗೌಡ ಅವರು ಕಾನೂನು ನಿಯಮ ಪಾಲಿಸಿಲ್ಲ ಎಂದು ಅವರನ್ನು ಬಂಧಿಸಲಾಗಿತ್ತು. ವಾರದಲ್ಲಿ ವಿಚಾರಣೆ ಮುಗಿಯದೆ ಮೂರು ವಾರ ಎಳೆದಿತ್ತು. ಈಗ ಮ್ಯಾಜಿಸ್ಟ್ರೇಟ್ ಅವರು ಶರತ್ತುಬದ್ಧ ಜಾಮೀನು ನೀಡಿದ್ದಾರೆ.

ಗೌರಿ ಲಂಕೇಶ್ ಕೊಲೆ ಆರೋಪಿ ನಾಯಕ್‌ಗೆ ನೋಟೀಸು

ಗೌರಿ ಲಂಕೇಶ್ ಕೊಲೆ ಆರೋಪಿ ಎನ್. ಮೋಹನ್ ನಾಯಕ್ ಹೈಕೋರ್ಟಿನಲ್ಲಿ ಜಾಮೀನು ಪಡೆದಿದ್ದುದರ ಸಿಂಧುತ್ವ ಪ್ರಶ್ನಿಸಿದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಆರೋಪಿ ನಾಯಕ್‌ಗೆ ನೋಟೀಸು ನೀಡಿತು. ಹೈಕೋರ್ಟ್ 2023ರ ಡಿಸೆಂಬರ್ 7ರಂದು ಮೋಹನ್ ನಾಯಕ್‌ಗೆ ಜಾಮೀನು ನೀಡಿತ್ತು. ಕೂಡಲೆ ಗೌರಿ ತಂಗಿ ಕವಿತಾ ಲಂಕೇಶ್ ಸುಪ್ರೀಂನಲ್ಲಿ ಪ್ರಶ್ನಿಸಿದ್ದರು. ಆ ಸಂಬಂಧ ಜನವರಿಯಲ್ಲಿ ಆರೋಪಿಗೆ ಸುಪ್ರೀಂ ಕೋರ್ಟ್ ನೋಟೀಸು ನೀಡಿತ್ತು. ರಾಜ್ಯ ಸರಕಾರವೂ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚದ ಪದಗ್ರಹಣ ಸಮಾರಂಭ

ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚದ ಪದಗ್ರಹಣ ಸಮಾರಂಭ ಬೆಂಗಳೂರಿನ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಜರಗಿತು.ನೂತನ ಪದಾಧಿಕಾರಿಗಳಿಗೆ ನೂತನ ಜವಾಬ್ದಾರಿಗಳ ಘೋಷಣಾ ಪತ್ರವನ್ನು ಓಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ರಘು ಕೌಟಿಲ್ಯ ನೀಡಿದರು. ರಾಜ್ಯ ಬಿಜೆಪಿ ಕಾರ್ಯದರ್ಶಿ ಆರ್ ಸಿ ನಾರಾಯಣ್ ಇವರಿಗೂ ಜವಾಬ್ದಾರಿಯ ಘೋಷಣಾ ಪತ್ರವನ್ನು ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯರವರು ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ

ಗುಡ್ಡೆ ಹೋಟೆಲಿನ ಅಯ್ಯಪ್ಪ ಸ್ವಾಮಿ ಭಕ್ತವೃಂದದವರಿಂದ ಹೆಮ್ಮುಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿಗಾಗಿ ನೆರವು

ಬೈಂದೂರು ತಾಲೂಕುಗುಡ್ಡೆ ಹೋಟೆಲ್ ಅಯ್ಯಪ್ಪ ಸ್ವಾಮಿ ಮಂದಿರದ ಗುರು ಸ್ವಾಮಿ ಕಾಮೇಶ್ ಹಾಗೂ ಭಕ್ತವೃಂದದವರು ಹೆಮ್ಮುಂಜೆಯಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಿಹಿ ತಿಂಡಿ ಹಂಚಿ ರೂಪಾಯಿ ಹತ್ತು ಸಾವಿರದ ನೂರನ್ನು ಶಾಲೆಯ ಕಂಪ್ಯೂಟರ್ ಕ್ಯಾಬಿನ್ ರಚನೆಗೆ ದೇಣಿಗೆಯಾಗಿ ನೀಡಿದರು. ಶಾಲೆಯ ಬಗ್ಗೆ ಇರುವ ಕಾಳಜಿ, ಅಭಿಮಾನ ಹಾಗೂ ಪ್ರೋತ್ಸಾಹವನ್ನು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ,ಎಸ್.ಎಮ್. ಡಿ .ಸಿ.ಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಊರಿನ ಜನತೆ ತಮ್ಮ

ಕಣಿಪುರ ಶ್ರೀ ಗೋಪಾಲ ಕೃಷ್ಣ ದೇವರು ಶ್ರೀ ಮಹಾಗಣಪತಿ ದೇವರು ಶ್ರೀ ವನ ಶಾಸ್ತಾರ ದೇವರ ನವೀಕರಣ ಪುನಃ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಪುನಃ ಪ್ರತಿಷ್ಠೆ ಮತ್ತು ವಾರ್ಷಿಕ ಜಾತ್ರೆ

ಪತ್ರಿಕೆ ಮತ್ತು ದೃಶ್ಯ ಮಾಧ್ಯಮ ಮತ್ತು ಫೋಟೋಗ್ರಾಫರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುವ ಕುರಿತು ಕಣಿಪುರ ಶ್ರೀ ಗೋಪಾಲ ಕೃಷ್ಣ ದೇವರು ಶ್ರೀ ಮಹಾಗಣಪತಿ ದೇವರು ಶ್ರೀ ವನ ಶಾಸ್ತಾರ ದೇವರ ನವೀಕರಣ ಪುನಃ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಪುನಃ ಪ್ರತಿಷ್ಠೆ ಮತ್ತು ವಾರ್ಷಿಕ ಜಾತ್ರೆ ತಾರೀಕು 16/02/2024 ದಿಂದ ತಾರೀಕು 29/02/2024 ಗುರುವಾರ ವರೆಗೆ ನಡೆಯಲಿದ್ದು ಈ ಸಂದರ್ಭದಲ್ಲಿ ಪತ್ರಿಕೆ ಮತ್ತು ದೃಶ್ಯ ಮಾಧ್ಯಮ ಮತ್ತು ಫೋಟೋಗ್ರಾಫರ್ ಹಾಗೂ ಸಾಮಾಜಿಕ

ಬೆಳ್ತಂಗಡಿ ಹುಣ್ಸೆಕಟ್ಟೆಯಲ್ಲಿ ಅಧ್ಯಕ್ಷರಾದ ಜಯವಿಕ್ರಮ್ಕ ಕಲ್ಲಾಪುರ ನೇತೃತ್ವದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆ

*ಮಾರ್ಚ್ 10ರಂದು ನಡೆಯುವ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು ಬೆಳ್ತಂಗಡಿ ತಾಲೂಕಿನ ಹುಣ್ಸೆಕಟ್ಟೆಯಲ್ಲಿ ಅಧ್ಯಕ್ಷರಾದ ಜಯವಿಕ್ರಮ್ ಕಲ್ಲಾಪುರವರ ನೇತೃತ್ವದಲ್ಲಿ ಫೆಬ್ರವರಿ 5ರಂದು ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್,ಜೊತೆ ಕಾರ್ಯದರ್ಶಿ ಗಣೇಶ್ ಪೂಜಾರಿ,ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷರಾದ ಪೀತಾಂಬರ ಹೇರಾಜೆ,ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕರಾದ ಯೋಗೀಶ್

ಸುರತ್ಕಲ್ ಕಾಂತೇರಿ ಧೂಮಾವತಿ ದೈವಸ್ಥಾನದ ಸಭಾಭವನದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆ

ಮಾರ್ಚ್ 10ರಂದು ನಡೆಯುವ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು ಫೆಬ್ರವರಿ 6 ರಂದು ಸುರತ್ಕಲ್ ನಕಾಂತೇರಿ ಧೂಮಾವತಿ ದೈವಸ್ಥಾನದ ಸಭಾಭವನದಲ್ಲಿ ಸುರತ್ಕಲ್ ಯುವವಾಹಿನಿ ಘಟಕದ ಅಧ್ಯಕ್ಷರಾದ ಅಶೋಕ್ ಕುಮಾರ್ ಅಗರಮೇಲುರವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್,ಪ್ರಧಾನ ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ,ಯುವವಾಹಿನಿ ಘಟಕದ ಕಾರ್ಯದರ್ಶಿ ಶ್ರೀಮತಿ ಸುಲತಾ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಕಾರ್ಯಕರ್ತ ಶ್ರೀ ಗೋಪಾಲ್ ಚೆಟ್ಟಿಯಾರ್ ವಿಧಿವಶ

ಮಂಗಳೂರು, ಫೆಬ್ರವರಿ 6, 2024: ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸೇವಾ ಪ್ರಮುಖ್ ಆಗಿ, ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಆಗಿ, ಮಂಗಳೂರು ವಿಭಾಗ ಸಂಘಚಾಲಕರಾಗಿ ಕಾರ್ಯನಿರ್ವಹಿಸಿದ್ದ ಶ್ರೀ ಗೋಪಾಲ್ ಚೆಟ್ಟಿಯಾರ್ (78) ಅವರು ಇಂದು ಬೆಳಗ್ಗೆ 2:45ಕ್ಕೆ ದೈವಾಧೀನರಾಗಿದ್ದಾರೆ. ಅವರು ಮೂಲತಃ ಕೇರಳದ ಪೆರ್ಲದವರು. ವಿದ್ಯಾರ್ಥಿ ಜೀವನದಿಂದಲ್ಲೇ ಸಂಘದ ಸ್ವಯಂಸೇವಕರು, ಕಾರ್ಯಕರ್ತರು. ತಹಸೀಲ್ದಾರರಾಗಿದ್ದ ಅವರು ನಿವೃತ್ತಿಯ ನಂತರ

ಬೆಂಗಳೂರು : ಒಡೆಯರ್, ಹಂಸಲೇಖರಿಗೆ ಸಿಟಿ ಇನ್‌ಸ್ಟಿಟ್ಯೂಟ್ ಗೌರವ

ಬೆಂಗಳೂರಿನ ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ ಇದೇ ಪ್ರಜಾಪ್ರಭುತ್ವದ ದಿನ ಮಾದರಿ ಮೈಸೂರು ನಿರ್ಮಾಪಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮೂರ್ತಿ ತೆರದಿಡಲಾಗುತ್ತಿದೆ. ಸಿಟಿ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಕೆ. ಸುಕುಮಾರ್ ಈ ಮಾಹಿತಿ ನೀಡಿದರು. ಅವರು ಮುಂದುವರಿದು ಕೃಷ್ಣರಾಜ ಒಡೆಯರ್ ಮತ್ತು ಸಂಗೀತ ದಿಗ್ಗಜ ಹಂಸಲೇಖ ಅವರಿಗೆ ಸಿಟಿ ಇನ್‌ಸ್ಟಿಟ್ಯೂಟ್‌ನ ಗೌರವ ಸದಸ್ಯತ್ವವನ್ನು ಗಣರಾಜ್ಯೋತ್ಸವದ ದಿನ ನೀಡಲಾಗುವುದು ಎಂದೂ ಅವರು ಹೇಳಿದರು. ಗಾಂಧೀಜಿಯವರಿಂದ ರಾಜರ್ಷಿ ಎಂದು