Home Archive by category Fresh News (Page 2)

ತಿದ್ದುಪಡಿಗಳು ಪೂರಕವಿರಬೇಕು, ಕೊರೆಯುವುದಲ್ಲ

ಭಾರತದ ನಾಗರಿಕರಾದ ನಾವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ, ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸುತ್ತಾ ದೃಢ ಮನಸ್ಸಿನಿಂದ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲ ನಾಗರಿಕರಿಗೆ ಈ ಕೆಳಗಿನ ಹಕ್ಕುಗಳನ್ನು ಕಾತರಿಪಡಿಸಲಾಗುತ್ತದೆ.ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ. ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ

ಸುರತ್ಕಲ್ ವ್ಯಾಪ್ತಿಯಲ್ಲಿ ಪದ್ಮರಾಜ್ ಆರ್ ರೋಡ್ ಶೋ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಅವರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರ ನೇತೃತ್ವದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ ಮುಕ್ಕ ಶ್ರೀರಾಮ ಭಜನಾ ಮಂದಿರದಿಂದ ಆರಂಭವಾದ ರೋಡ್ ಶೋ ಮುಕ್ಕ ಮಸ್ಜಿದ್, ಮುಕ್ಕ ಸ್ಯಾಕ್ರೆಡ್ ಹಾರ್ಟ್ ಚರ್ಚ್, ಮುಕ್ಕ ಭಂಡಾರ ಮನೆಗೆ ಭೇಟಿ, ಕಾಟಿಪಳ್ಳ ಜಂಕ್ಷನ್‌ನಲ್ಲಿ ಸಭೆ

ಸುರತ್ಕಲ್ : ಪಟ್ಲ ಫೌಂಡೇಶನ್ ಘಟಕದ ಚತುರ್ಥ ವಾರ್ಷಿಕೋತ್ಸವ

ಸುರತ್ಕಲ್: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಇದರ ಸುರತ್ಕಲ್ ಘಟಕದ ಚತುರ್ಥ ವಾರ್ಷಿಕೋತ್ಸವ ಕಾರ್ಯಕ್ರಮವು ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ದೀಪ ಪ್ರಜ್ವಲನೆಗೈದ ಯಕ್ಷಧ್ರುವ ಯಕ್ಷ ಶಿಕ್ಷಣ ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಯುಎಸ್ ಎ ಮಾತನಾಡಿ, “ಅಮೇರಿಕದಲ್ಲಿ ಯಕ್ಷಗಾನ ಮಾಡಿಸುವ ಮೂಲಕ ಅಲ್ಲಿನ ಜನರಿಗೂ ನಮ್ಮ ಕರಾವಳಿಯ ಸಂಸ್ಕೃತಿಯ ಪರಿಚಯ ಮಾಡಿದ ಕೀರ್ತಿ ಪಟ್ಲ ಸತೀಶ್ ಶೆಟ್ಟಿ

ಮಹಾಪ್ರಭು ಮೋದಿಯವರ ಮುಖದಲ್ಲಿ ಆತಂಕ : ಪ್ರಕಾಶ್ ರಾಜ್

400 ಬಿಡಿ 200 ಕೂಡ ಕಷ್ಟ ಎಂಬ ಆತಂಕ ಮಹಾಪ್ರಭು ಮೋದಿಯವರ ಮುಖದಲ್ಲಿ ಕಾಣಿಸುತ್ತಿದೆ. ಆದರೂ ರಾಜ ಸೋಗಿನಲ್ಲಿ ಸುತ್ತುತ್ತಿದ್ದಾರೆ ಎಂದು ನಟ ರಾಜಕಾರಣಿ ಪ್ರಕಾಶ್ ರಾಜ್ ಹೇಳಿದರು. ಅವರು ಮೈಸೂರಿನಲ್ಲಿ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ 133ನೇ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಮಹಾಪ್ರಭುವಿಗೆ ಬೇಕಾದುದು ವಿದೂಷಕರ ತಂಡ. ಕರ್ನಾಟಕದಿಂದ ಲೋಕ ಸಭೆಗೆ ಆಯ್ಕೆ ಆಗಿದ್ದ 27 ಮಂದಿ ಕೂಡ ವಿದೂಷಕರು. ಈ ಬಾರಿ ಅದಕ್ಕೆ ಅವಕಾಶ ನೀಡಬೇಡಿ. ಮಹಾಪ್ರಭು

ಶಿವಮೊಗ್ಗದಲ್ಲಿ ಗೀತಾ ಶಿವರಾಜಕುಮಾರ್ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜಕುಮಾರ್ ಅವರ ಸೋಮವಾರ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಾಮಪತ್ರ ಸ್ವೀಕರಿಸಿದರು. ಗೀತಾರ ಪತಿ ನಟ ಶಿವರಾಜಕುಮಾರ್, ಮಾಜೀ ಮಂತ್ರಿ ಕಿಮ್ಮನೆ ರತ್ನಾಕರ್, ಮಂಜುನಾಥ ಭಂಡಾರಿ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ಅಭಿಮಾನಿಗಳು ಶಿವಣ್ಣ ಶಿವಣ್ಣ ಎಂದು ಹೊರಗೆ ಜಮಾಯಿಸಿದ್ದರು.ಅನಂತರ ರಾಮಣ್ಣ ಶ್ರೇಷ್ಟಿ ಉದ್ಯಾನದಲ್ಲಿ ಮೆರವಣಿಗೆ ಮತ್ತು

ಮೂಡುಬಿದಿರೆ: ಗೋವಿಂದ ಭಟ್ ಅವರಿಗೆ ಬಲಿಪ ಭಾಗವತ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಯಕ್ಷಗಾನ ಲೋಕದ ಮೇರು ಭಾಗವತ ದಿ. ಬಲಿಪ ನಾರಾಯಣ ಭಾಗವತ ಅವರ ಮೊದಲ ವರ್ಷದ ಸಂಸ್ಮರಣೆಯ ಅಂಗವಾಗಿ ಹಿರಿಯ ಕಲಾವಿದ ಗೋವಿಂದ ಭಟ್ ಅವರಿಗೆ ಬಲಿಪ ಭಾಗವತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾರೂರಿನ ನೂಯಿಯಲ್ಲಿರುವ ಬಲಿಪರ ನಿವಾಸದ ಆವರಣದಲ್ಲಿ ಜರಗಿದ ಕಟೀಲು ಮೇಳದ ಹರಿಕೆ ಬಯಲಾಟದ ರಂಗಸ್ಥಳದಲ್ಲಿ ಮಾನಪತ್ರ, ನಗದು ಗೌರವದೊಂದಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗೋವಿಂದ ಭಟ್‌ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಬಲಿಪರು ಎಂದರೆ ಯಕ್ಷಗಾನ ಯಕ್ಷಗಾನ

ಪ್ರಧಾನಿ ಮೋದಿಯವರ ಖಾತರಿಗಳು ಸುಳ್ಳುಗಳ ಖಾತರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕೆ

ಲೋಕಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ‘ಸುಳ್ಳಿನ ಪತ್ರ’ ಎಂದಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿಯವರ ಖಾತರಿಗಳು ‘ಸುಳ್ಳುಗಳ ಖಾತರಿಗಳಾಗಿವೆ’ ಎಂದು ಟೀಕಿಸಿದ್ದಾರೆ. ಮೋದಿ ಅವರು, ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣಗೊಳಿಸುವುದು, ಬೆಲೆ ಏರಿಕೆ ಹಾಗೂ ಹಣದುಬ್ಬರ ನಿಯಂತ್ರಣ ಸೇರಿದಂತೆ, ಈ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾರಾಗಿದ್ದಾರೆ.

ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೊ: ಪೊಲೀಸ್ ಇಲಾಖೆ ಹೈ ಅಲರ್ಟ್

ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದು, ಮಂಗಳೂರು ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದ್ದು, ಏರ್​ಪೋರ್ಟ್​​​ನಿಂದ ರೋಡ್ ಶೋ ಮುಕ್ತಾಯವಾಗುವ ಪ್ರದೇಶದವರೆಗೂ ಬಿಗಿ ಭದ್ರತೆ ಇರಲಿದ್ದು, ಸುಮಾರು 2500 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಕುರಿತಾಗಿ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್​ ಪ್ರತಿಕ್ರಿಯಿಸಿದ್ದು, ವಿಮಾನ ನಿಲ್ದಾಣದಿಂದ ಲೇಡಿಹಿಲ್​​ವರೆಗೂ ವಿಶೇಷ ಭದ್ರತೆ ಒದಗಿಸಲಾಗಿದ್ದು, ಸುಮಾರು 2500 ಸಾವಿರ ಪೊಲೀಸ್

ಪುತ್ತೂರು: ಅಪಾಯಕಾರಿ ತಿರುವು ತೆರವಿಗೆ ಶಾಸಕರ ಸೂಚನೆ

ಮಾಣಿ – ಮೈಸೂರು ರಾ.ಹೆದ್ದಾರಿ 275 ರ ಆರ್ಯಾಪು ಗ್ರಾಪಂ ವ್ಯಾಪ್ತಿಯ ಕಲ್ಲರ್ಪೆಯಲ್ಲಿ ಅಪಾಯಕಾರಿ ತಿರುವು ಇದ್ದು ಅದನ್ನು ಶಾಸಕರಾದ ಅಶೋಕ್ ರೈ ವೀಕ್ಷಣೆ ಮಾಡಿದರು. ಈ ತಿರುವಿನಲ್ಲಿ ಅನೇಕ ವಾಹನ ಅಫಘಾತಗಳು ನಡೆದಿದ್ದು ಮೂವರು ಮೃತಪಟ್ಟ ಘಟನೆಯೂ ನಡೆದಿತ್ತು. ಇಲ್ಲಿರುವ ಅಪಾಯಕಾರಿ ಧರೆಯನ್ನು ತೆರವು ಮಾಡಿ ವಾಹನ ಸಂಚಾರ ಗೋಚರಿಸುವಂತೆ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಶಾಸಕರಿಗೆ ಅನೇಕ ಮಂದಿ ಮನವಿಯನ್ನು ಮಾಡಿದ್ದರು. ಈ

ಆಳ್ವಾಸ್ ಕಾಲೇಜಿನಲ್ಲಿ ತುಳು ರಂಗ್- 2024:ತುಳು ಭಾಷೆಯ ಆಸ್ತಿಯಾಗೋಣ: ಅರವಿಂದ್ ಕೆ. ಪಿ

ಮೂಡುಬಿದಿರೆ:  ನಾವು ಎಷ್ಟೇ ದೂರವಿದ್ದರೂ ಭಾಷೆ ಎಲ್ಲರನ್ನೂ, ಎಲ್ಲತನವನ್ನೂ ಒಗ್ಗೂಡಿಸುತ್ತದೆ. ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಎಲ್ಲವನ್ನೂ ಒಗ್ಗೂಡಿಸುವ ಕಾರ್ಯವನ್ನು ನಾವು ಮಾಡುವುದರ ಜೊತೆಗೆ  ತುಳು ಭಾಷೆಯ ಆಸ್ತಿಯಾಗುವ ಕೆಲಸ ಮಾಡಬೇಕಾಗಿದೆ  ಎಂದು ಅಂತರಾಷ್ಟ್ರೀಯ ಮೋಟಾರ್  ರೇಸರ್ ಮತ್ತು ಚಲನಚಿತ್ರ ನಟ ಅರವಿಂದ್ ಕೆ. ಪಿ ಹೇಳಿದರು. ಅವರು ಆಳ್ವಾಸ್ ಪದವಿ ಕಾಲೇಜಿನ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಶನಿವಾರ ಆಯೋಜಿಸಿದ್ದ ಅಂತರ್ ಕಾಲೇಜು “ತುಳು