Home Archive by category karavali (Page 13)

ವಿಟ್ಲ :ಕಬಕ-ವಿಟ್ಲ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ವಿಟ್ಲ: ನಾನು ಇದೇ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಿ, ಗೆದ್ದು ಶಾಸಕಿಯಾಗಿ ಹಿಂದಿನ ಅವಧಿಯಲ್ಲಿ ಮಂಜೂರುಗೊಳಿಸಿದ್ದ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ತೋರಿಸಿಕೊಡುವುದಾಗಿ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಹೇಳಿದ್ದಾರೆ. ಕಬಕ-ವಿಟ್ಲ ರಸ್ತೆ ದುರಸ್ತಿಗೆ ಆಗ್ರಹಿಸಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮತ್ತು ಕಬಕ ವಲಯ ಕಾಂಗ್ರೆಸ್‌ನ ಆಶ್ರಯದಲ್ಲಿ

ಬೆಳ್ಳಾರೆ : ಪಜ್ಜೆ ಫೂಟ್ ವರ‍್ಸ್ ಪಾದರಕ್ಷೆ ಮಳಿಗೆ ಶುಭಾರಂಭ

ಪಜ್ಜೆ ಫೂಟ್ ವರ‍್ಸ್ ಸುಸಜ್ಜಿತ ಪಾದರಕ್ಷೆ ಮಳಿಗೆಯನ್ನು ಬೆಳ್ಳಾರೆ ವಾಣಿಜ್ಯ ವರ್ತಕರ ಸಂಘದ ಅಧ್ಯಕ್ಷರಾದ ರಾಜೇಶ್ ಶಾನುಭೋಗ್ ದೀಪ ಬೆಳಗಿಸುವ ಉದ್ಘಾಟಿಸಿದರು. ನಂತರ ಶುಭಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ಮಾಧವ ಗೌಡ ಬೆಳ್ಳಾರೆ ಅಧ್ಯಕ್ಷರು ವಾಣಿಜ್ಯ ವರ್ತಕರ ಸಂಘ ಬೆಳ್ಳಾರೆ ಹಾಗೂ ಶಾಹಿನ್ ಮಹಾಲಿನ ಮಾಲಕರದ ಅಬ್ದುಲ್ ಹಮೀದ್ ಹಾಗೂ ಪ್ರಗತಿ ಪಾಲುದಾರಾದ ಬಿ.ಎಂ ಮೊಹಮ್ಮದ್ ಹಾಗೂ ಆರ್. ಕೆ. ಭಟ್ ಕುರುo ಬುಡೇಳು,

ಮಂಗಳೂರು : ಪ್ಲಾಸ್ಟಿಕ್ ಹೆಕ್ಕಿಕೋ ಜನಜಾಗೃತಿ ಕಾರ್ಯಕ್ರಮ

ನಗರದ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕ, ಕಾಶ್ಯ ವಾರ್ಡ್ ಇವರ ಸಹಯೋಗದೊಂದಿಗೆ ಕಾಶ್ಯ ಪೇಟೆಯಲ್ಲಿ ಪ್ಲಾಸ್ಟಿಕ್ ನಿರ್ಮೂಲನದ ಬಗ್ಗೆ ಪ್ಲಾಸ್ಟಿಕ್ ಹೆಕ್ಕಿಕೋ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭವು ಸಂತ ರೀಟಾ ವಿದ್ಯಾಸಂಸ್ಥೆ ಕಾಸ್ಸಿಯಾ ಶಾಲಾ ಸಭಾಭವನದಲ್ಲಿ ಜರಗಿತು.ಎನ್.ಎಸ್.ಎಸ್ ಶಿಬಿರ ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಡಿದ ಮಂಗಳೂರು ಮಹಾನಗರ ಪಾಲಿಕೆ

ಮಂಗಳೂರು : ಅಲೋಶಿಯಸ್ ಕಾಲೇಜಿನಲ್ಲಿ `ಮ್ಯಾಥ್ ಫಿಯೆಸ್ಟಾ 2ಕೆ22

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ಗಣಿತಶಾಸ್ತಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಅಂತರಕಾಲೇಜು ಫೆಸ್ಟ್ -`ಮ್ಯಾಥ್ ಫಿಯೆಸ್ಟಾ 2ಕೆ22 ಅನ್ನು ಹಮ್ಮಿಕೊಳ್ಳಲಾಗಿತ್ತು. ಪ್ರೊ ಕೆ.ಎ.ಕೃಷ್ಣಮೂರ್ತಿ ಅವರ 109ನೇ ಜನ್ಮ ದಿನಾಚರಣೆಯ ನೆನಪಿಗಾಗಿ ವಿವಿಧ ಕಾಲೇಜುಗಳ ಯುಜಿ ವಿದ್ಯಾರ್ಥಿಗಳಿಗೆ ಒಂದು ದಿನದ ಅಂತರ ಕಾಲೇಜು ಫೆಸ್ಟ್ ಅನ್ನು ಆಯೋಜಿಸಲಾಗಿತ್ತು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್‌ಎಫ್ ರಸ್ಕಿನ್ಹಾ ಹಾಲ್‌ನಲ್ಲಿ ಅಂತರಕಾಲೇಜು ಫೆಸ್ಟ್

ಸುಳ್ಯ:ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆ

ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸಭೆಯು ಇಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ನಂದ ಕುಮಾರ್, ಸುಳ್ಯ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕರುಣಾಕರ, ಆರೋಗ್ಯ ಇಲಾಖೆಯ ಸಹಾಯಕ ಇಂಜಿನಿಯರ್ ರಾಜೇಶ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸುನಿಲ್

ಮೂಡುಬಿದಿರೆ : ಜಲಜೀವನ್ ಮಿಷನ್ ಯೋಜನೆ-ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿಪೂಜೆ

ಮೂಡುಬಿದಿರೆ : ಜಲಜೀವನ್ ಮಿಷನ್ ಯೋಜನೆಯಡಿ ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯ ಮುಂಡೇಲು, ಮಂಜೊಲು ಗುಡ್ಡೆ ಹಾಗೂ ಪೆಲತ್ತಡ್ಕ ಬಳಿ 94 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೀರಿನ ಟ್ಯಾಂಕ್ ಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಗುದ್ದಲಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಕೋಟ್ಯಾನ್ ಈ ಭಾಗದ ಮೂಲಭೂತ ಸೌಕರ್ಯವಾಗಿರುವ ಕುಡಿಯುವ ನೀರನ್ನು ಜನರಿಗೆ ಒದಗಿಸಬೇಕೆಂಬುದು ಸರಕಾರದ ಕನಸಿನ ಯೋಜನೆಯಾಗಿದೆ. ಅಲ್ಲದೆ ಈ ಭಾಗದ ಜನರ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು 3

ವೆಸ್ಟ್ ಕೋಸ್ಟ್ “ಹೀರೋ ಉತ್ಸವ” ಜೊತೆಗೆ “ಬೋನನ್ ಝ” ಫೆಸ್ಟಿವಲ್ ಆಫರ್

ಮಂಗಳೂರಿನ ಹೆಸರಾಂತ ದ್ವಿಚಕ್ರ ವಾಹನ ಶೋರೂಮ್ ಆದ ವೆಸ್ಟ್ ಕೊಸ್ಟ್ ನಲ್ಲಿ ಇದೀಗ ಗ್ರಾಹಕರಿಗೆ ಸ್ವಾತಂತ್ರೋತ್ವದ ಪ್ರಯುಕ್ತ ಬೋನನ್ ಝಾ ಫೆಸ್ಟಿವಲ್‌ನ್ನು ಆಯೋಜಿಸಿದ್ದಾರೆ. ಹಲವಾರು ರೀತಿಯ ರಿಯಾಯಿತಿಯೊಂದಿಗೆ ಮತ್ತು ಉಚಿತ ಕೊಡುಗೆ ಜೊತೆಗೆ ಇದೀಗ ವೆಸ್ಟ್ ಕೋಸ್ಟ್ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಭರ್ಜರಿ ಒಂದು ತಿಂಗಳುಗಳ ಕಾಲ ಈ ಆಫರ್‌ನ್ನು ನೀಡುತ್ತಿದ್ದಾರೆ. ಗ್ರಾಹಕರಿಗಾಗಿ ೦% ಡೌನ್ ಪೇಮೆಂಟ್, ಪ್ರತಿವಾರ ಲಕ್ಕಿ ಡ್ರಾ ಜೊತೆಗೆ ಬಂಪರ್ ಪ್ರೈಜ್

ಜೈವಿಕ ಸರಪಳಿಯನ್ನು ಸಂರಕ್ಷಿಸೋಣ : ಡಾ|| ಚೂಂತಾರು

ನಿರಂತರವಾಗಿ ಪರಿಸರದ ಮೇಲೆ ಉಂಟಾಗುತ್ತಿರುವ ದೌರ್ಜನ್ಯದಿಂದಾಗಿ ಪರಿಸರದಲ್ಲಿ ಬದುಕು ಕಟ್ಟಿಕೊಂಡಿರುವ ಜೀವ ಸಂಕುಲಗಳು ನಾಶವಾಗಿ, ಪರಿಸರದ ಸಮತೋಲನ ತಪ್ಪಿ ಹೋಗುತ್ತಿದೆ. ಜೈವಿಕ ಸರಪಳಿ ನಾಶವಾಗಿ ಹಲವಾರು ವಿರಳ ಗಿಡ ಸಸ್ಯಗಳು ಮತ್ತು ಪ್ರಾಣಿ ಸಂಕುಲಗಳು ನಾಶವಾಗಿ ಹೋಗುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ಕೂಡಲೇ ಎಚ್ಚೆತ್ತುಕೊಂಡು ಗಿಡಗಳನ್ನು ನೆಟ್ಟು ಮರಗಳನ್ನು ಪೋಷಿಸಿ ಪರಿಸರವನ್ನು ರಕ್ಷಿಸಬೇಕು. ಹಾಗಾದರೆ ಮಾತ್ರ ನಾಡು ಸಮೃದ್ಧವಾಗಿ ಕಾಲ ಕಾಲಕ್ಕೆ ಮಳೆ,

ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಸಚಿವ ಅಂಗಾರ ಭೇಟಿ : ಉಪ್ಪುಕಳ ಗ್ರಾಮಕ್ಕೆ ಶೀಘ್ರದಲ್ಲೇ ಸೇತುವೆ ನಿರ್ಮಾಣದ ಭರವಸೆ

ಮಳೆಯಿಂದ ಹಾನಿಗೊಳಗಾಗಿದ್ದ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಉಪ್ಪುಕಳ ಗ್ರಾಮಕ್ಕೆ ಬಂದರು ಹಾಗೂ ಮೀನುಗಾರಿಕೆ ಸಚಿವ ಅಂಗಾರ ಭೇಟಿ ನೀಡಿದ್ದು, ಶೀಘ್ರದಲ್ಲೇ ಸೇತುವೆ ನಿರ್ಮಾಣದ ಭರವಸೆ ನೀಡಿದರು. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 124 ಸೇತುವೆಗಳು ನಿರ್ಮಾಣವಾಗಿವೆ. ವಿಶೇಷ ಪ್ರಾಶಸ್ತ್ಯ ನೀಡಿ ಗ್ರಾಮಗಳನ್ನು ಬೆಸೆಯುವ ಸಂಪರ್ಕ ಸೇತುವೆ ನಿರ್ಮಿಸಲಾಗುತ್ತದೆ. ಉಪ್ಪುಕಳದಲ್ಲೂ ಅತೀ ಶೀಘ್ರದಲ್ಲೇ ಸೇತುವೆ ರಚನೆಯಾಗಲಿದ್ದು, ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಲಾಗುವುದು