ಮೂಡುಬಿದಿರೆ: ಪಡುಮಾರ್ನಾಡ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ್ಕ ಪಾಡ್ಯಾರ್ ನಿವಾಸಿ ಸುಜಾತ ಎಂಬವರ ಮನೆಗೆ ನಿನ್ನ ರಾತ್ರಿ ಸಿಡಿಲು ಬಡಿದು ಮನೆಯ ಕರೆಂಟ್ ಸ್ವಿಚ್ ಬೋರ್ಡ್, ‘ವಿದ್ಯುತ್ ವಯರ್‌ಗಳು ಸುಟ್ಟು ಸುಮಾರು 50 ಸಾವಿರ ಮೌಲ್ಯದ ವಿದ್ಯುತ್ ಇತರ ಸಲಕರಣೆಗಳು ಹಾನಿಗೀಡಾಗಿವೆ. ಸ್ಥಳಕ್ಕೆ ಮೂಡುಮಾರ್ನಾಡ್ ಪಂಚಾಯತ್ ಪಿಡಿಓ ಅನಿಲ್, ಭೇಟಿ ನೀಡಿ
ಮೂಡುಬಿದಿರೆ : ಜಲಜೀವನ್ ಮಿಷನ್ ಯೋಜನೆಯಡಿ ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯ ಮುಂಡೇಲು, ಮಂಜೊಲು ಗುಡ್ಡೆ ಹಾಗೂ ಪೆಲತ್ತಡ್ಕ ಬಳಿ 94 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೀರಿನ ಟ್ಯಾಂಕ್ ಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಗುದ್ದಲಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಕೋಟ್ಯಾನ್ ಈ ಭಾಗದ ಮೂಲಭೂತ ಸೌಕರ್ಯವಾಗಿರುವ ಕುಡಿಯುವ ನೀರನ್ನು ಜನರಿಗೆ ಒದಗಿಸಬೇಕೆಂಬುದು ಸರಕಾರದ ಕನಸಿನ ಯೋಜನೆಯಾಗಿದೆ. ಅಲ್ಲದೆ ಈ ಭಾಗದ ಜನರ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು 3
ಮೂಡುಬಿದಿರೆ: ಇಲ್ಲಿನ ತಾಲೂಕು ತಹಶೀಲ್ದಾರ್ ತಾಲೂಕು ಸತ್ಯಪ್ಪ ಸಚ್ಚಿದಾನಂದ ಕುಚನೂರು ಅವರು ಬೆಳುವಾಯಿ ಗ್ರಾಮ ಪಂಚಾಯತ್‌ನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ವಾಸ್ತವ್ಯ ಹೂಡಿದರು. ಪಂಚಾಯತ್ ಅಧ್ಯಕ್ಷೆ ಸುಶೀಲಾ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪಂಚಾಯತ್‌ನ ಮಾಜಿ ಅಧ್ಯಕ್ಷ ರಾಘು ಪೂಜಾರಿ ಮಾತನಾಡಿ, ಮನೆಗಳ ಬಳಿ ಮರಗಳಿಲ್ಲದಿದ್ದರೂ ಡೀಮ್ಸ್ ಫಾರೆಸ್ಟ್ ಎಂದು ಪಟ್ಟಿಯನ್ನು ಕೊಟ್ಟಿದ್ದಾರೆ, ಇದಲ್ಲದೇ
ವಸತಿ ಯೋಜನೆಗಳಗೆ ಸರಕಾರದಿಂದ ಅನುದಾನ ಬಿಡುಗಡೆಯಾಗದೆ ಫಲಾನುಭವಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಹಿಂದೆ ಮಂಜೂರಾತಿ ಆದೇಶ ನೀಡಿದ ಅನೇಕ ಪಲಾನುಭವಿಗಳ ಮನೆಗಳು ಅನುದಾನ ಇಲ್ಲದೆ ಅರ್ಧದಲ್ಲಿ ನಿಂತಿವೆ. ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಫಲಾನುಭವಿಗಳ ಜತೆಗೂಡಿ ಮರಸಭೆ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಪುರಸಭೆಯ ಕಾಂಗ್ರೆಸ್ ಸದಸ್ಯರು ಎಚ್ಚರಿಕೆ ನೀಡಿದರು. ಪುರಸಭೆ ವಿಶೇಷ ಸಭೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ
ಮೂಡುಬಿದಿರೆ : ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಬೇಡಿಕೆಯಿರಿಸಿ ಜು 1ರಿಂದ ರಾಜ್ಯಾದಂತ ಪೌರಕಾರ್ಮಿಕರು ಅನಿರ್ಧಿಷ್ಠಾವಧಿ ಮುಷ್ಕರ ನಡೆಸುವುದರಿಂದ ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ನಮ್ಮಲ್ಲೂ ಸಮಸ್ಯೆಯಾಗಲಿದೆ ಆದ್ದರಿಂದ ಪ್ರತೀ ವಾರ್ಡ್ ಮಟ್ಟದಲ್ಲಿ ಪೌರಕಾರ್ಮಿಕ ವೃತ್ತಿ ಮಾಡುವವರನ್ನು ಗುರುತಿಸಿ ತಾತ್ಕಾಲಿಕವಾಗಿ ನೇಮಿಸಿದರೆ ಉತ್ತಮ ಎಂದು ಪರಿಸರ ಇಂಜಿನಿಯರ್ ಶಿಲ್ಪಾ ಸಲಹೆ ನೀಡಿದರು. ಅವರು ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ
ಮೂಡುಬಿದಿರೆ : ಭಾರತೀಯ ಜನತಾಪಾರ್ಟಿ ಯುವಮೋರ್ಚಾ ಮೂಲ್ಕಿ ಮೂಡುಬಿದಿರೆ ಮಂಡಲದ ವತಿಯಿಂದ ದರೆಗುಡ್ಡೆಯ ಸಿರಿಸಂಪದ ಫಾರ್ಮ್ನಲ್ಲಿ ಜು.3ರಂದು ಕೆಸರ್‍ಡೊಂಜಿ ಕಮಲದಿನ ಎಂಬ ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಮಂಡಲಾಧ್ಯಕ್ಷ ಸುನಿಲ್ ಆಳ್ವ ತಿಳಿಸಿದರು. ಬಿಜೆಪಿ ಕಛೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಕಾರ್ಯಕರ್ತರಲ್ಲಿ ಬಾಂಧವ್ಯ ವೃದ್ಧಿಸುವ