ಶ್ರೀಕೃಷ್ಣಮಠದಲ್ಲಿ ದೀಪಾವಳಿಯ ಅಮಾವಾಸ್ಯೆ ಪ್ರಯುಕ್ತ ಸೋಮವಾರ ರಾತ್ರಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಅದಮಾರು ಕಿರಿಯ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರು “ಬಲೀಂದ್ರ ಪೂಜೆ” ನಡೆಸಿದರು. ಬಳಿಕ ಪಂಚ ದೀಪ
ಶಿರ್ವ : ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸುಮಾರು 53 ವರ್ಷಗಳಿಂದ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದ ದೇವಾಡಿಗ ಸಮಾಜದ ಹಿರಿಯ ಮುಂದಾಳು,ನಾಸಿಕ್ ನ ಶಾರದಾ ಹೋಟೆಲ್ ನ ಮಾಲಕ ಕುತ್ಯಾರು ಕೋರ್ದೊಟ್ಟು ಸೋಮಪ್ಪ ಬಾಬು ದೇವಾಡಿಗ (94) ಅವರು ಅ. 24 ರಂದು ನಾಸಿಕ್ ಜಿಲ್ಲೆಯ ದೇವಲಾಲಿಯ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ,ನಾಲ್ವರು ಪುತ್ರರು ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ ಅವರು ಕುತ್ಯಾರು ಗ್ರಾಮದ ಧಾರ್ಮಿಕ ಮತ್ತು ಸಾಮಾಜಿಕ
ತುಳುನಾಡಿನ ಕೊರಗಜ್ಜ ಸ್ವಾಮಿ ಮತ್ತೊಮ್ಮೆ ತನ್ನ ಕಾರ್ಣಿಕವನ್ನು ತೋರಿಸಿಕೊಟ್ಟಿದೆ. ನಂಬಿದವರನ್ನು ಹರಸಿ,ಇಷ್ಟಾರ್ಥಗಳನ್ನು ಈಡೇರಿಸುವ ಕೊರಗಜ್ಜ ಆರಿ ಹೋಗುತ್ತಿದ್ದ ಕುಟುಂಬವೊಂದರ ನಂದದೀಪವನ್ನು ಬೆಳಗಿಸಿಕೊಟ್ಟಿರುವ ಅಪರೂಪದ ಘಟನೆಗೆ ತುಳುನಾಡು ಸಾಕ್ಷಿಯಾಗಿದೆ. ನಾಲ್ಕು ತಿಂಗಳ ಹಸುಕೂಸೊಂದು ಕೊರಗಜ್ಜನ ಕೃಪೆಯಿಂದ ಸಾವನ್ನೇ ಗೆದ್ದು ಬಂದಿದೆ.ಹೌದು ಸಾಗರ ಮೂಲದ ಪುಟ್ಟ ಹೆಣ್ಣು ಮಗುವಿಗೆ ವಿಪರೀತ ಜ್ವರ ಕಂಡು ಬಂದಿತ್ತು.ಎರಡು ದಿನ ಕಳೆದರೂ ಜ್ವರ ಕಡಿಮೆಯಾಗದೇ ಮಗು
ಮೀನುಗಾರಿಕೆ ತೆರಳಿದ್ದ ನಾಡದೋಣಿಯ ಇಂಜಿನ್ ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ ಬಂಡೆಗೆ ಬಡಿದು ದೋಣಿ ಮುಗುಚಿ ಬಿದ್ದು, ಮೀನುಗಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಉಡುಪಿ ಜಿಲ್ಲೆಯ ಕಾಪು ಲೈಟ್ ಹೌಸ್ ಬಳಿ ನಡೆದಿದೆ. ಇಂದು ಬೆಳಗ್ಗೆ ಐದು ಮಂದಿ ಮೀನುಗಾರರು, ನಾಡದೋಣಿಯಲ್ಲಿ ಕಾಪುವಿನಿಂದ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದಲ್ಲಿ ದೋಣಿಯ ಇಂಜಿನ್ ತಾಂತ್ರಿಕ ದೋಷ ಉಂಟಾಗಿ, ಕಾಪು ಲೈಟ್ ಹೌಸ್ ತಲುಪುತ್ತಿದ್ದಂತೆ, ಬಂಡೆಗೆ ಬಡಿದಿದೆ. ಈ ವೇಳೆ ದೋಣಿ ಮಗುಚಿ
ಉಡುಪಿ: ಉಡುಪಿ ಮೂಲದ ಸಿನಿ ಶೆಟ್ಟಿ 2022ರ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 21ರ ಹರೆಯದ ಸಿನಿ ಶೆಟ್ಟಿ ಉಡುಪಿ ಜಿಲ್ಲೆಯ ಇನ್ನಂಜೆಯವರು. ಸ್ಪರ್ಧೆಯಲ್ಲಿ ಸಿನಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಭಾನುವಾರ ಜುಲೈ 04 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಫಿನಾಲೆಯಲ್ಲಿ ಸಿನಿ ಶೆಟ್ಟಿ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಕೊಂಡರು. ಸಿನಿ ಮುಂಬೈನಲ್ಲಿ ಹುಟ್ಟಿ ಬೆಳೆದರೂ ಕೂಡಾ ಮಿಸ್ ಇಂಡಿಯಾ
ಮಠಾಧೀಶರೇ ಆಗಲೀ..ಮಂತ್ರಿ ಮಾಗದರೇ ಆಗಲೀ ಅಧಿಕಾರದ ಪಿತ್ತ ನೆತ್ತಿಗೇರಿ ಎಲ್ಲವೂ ನಾನೇ, ಎಲ್ಲವೂ ನಾನು ನನ್ನಿಂದಲೇ ನಡೆಯಬೇಕು ಎಂಬ ಸರ್ವಾಧಿಕಾರ ಧೋರಣೆ ತಾಳಿದರೆ ಅವರ ಅವನತಿ ಆರಂಭವಾದಂತೆ ಎಂಬುದಾಗಿ ಶ್ರೀರಾಮ ಕ್ಷೇತ್ರ ಕನ್ಯಾಡಿಯ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. ಅವರು ಕಾಪು ಬಿಲ್ಲವರ ಸಹಾಯಕ ಸಂಘದ ಅಧೀನದಲ್ಲಿ ನೂತನವಾಗಿ ನಿರ್ಮಿಣಗೊಳ್ಳಲಿರುವ ಬ್ರಹ್ಮಶ್ರೀ ನಾರಾಯಣಗುರು ಜ್ಞಾನ ಮಂದಿರದ ಶಿಲಾನ್ಯಾಸ ಕಾರ್ಯದಲ್ಲಿ ಭಾಗವಹಿಸಿ,
ಕಳೆದ 16 ವರ್ಷಗಳಿಂದ ಮೂತ್ರಪಿಂಡದ ಕಾಯಿಲೆಯಿಂದ ಪಡುಬಿದ್ರಿಯ ಜೀವನ ಕುಮಾರ್ ಎಂಬವರು ಬಳಲುತ್ತಿದ್ದು, ವಾರಕ್ಕೆ ಎರಡು ಬಾರಿಯಂತೆ ಡಯಾಲೀಸಿಸ್ ಮಾಡುತ್ತಾ ಬರುತ್ತಿದ್ದರು. ಇದೀಗ ಅವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನೆಪ್ರೋಲಾಜಿ ವಿಭಾಗದಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸೆಗೆ ಅಧಿಕ ವೆಚ್ಚ ತಗುಲಲಿದ್ದು, ಸಹಾಯ ಮಾಡುವ ದಾನಿಗಳ ನಿರೀಕ್ಷೆಯಲ್ಲಿದ್ದಾರೆ. ಜೀವನ್ ಕುಮಾರ್ ಅವರಿಗೆ ಸಹಾಯ ಮಾಡಲಿಚ್ಚಿಸುವವರು Jeevan Kumar
ಕಾರ್ಕಳ ಪುರಸಭೆಯ ಸಾಮಾನ್ಯ ಸಭೆ ಬೀದಿ ಬದಿಗಳಲ್ಲಿ ಮೀನು ವ್ಯಾಪಾರ ನಿಷೇಧಿಸಬೇಕು : ಪುರಸಭೆ ಅಧ್ಯಕ್ಷೆ ಸುಮಕೇಶವ್ ಹೇಳಿಕೆ
ಕಾರ್ಕಳ: ಬೀದಿ ಬದಿಗಳಲ್ಲಿ ಮೀನು ವ್ಯಾಪಾರವನ್ನು ನಿಷೇಧಿಸಬೇಕು, ಇಲ್ಲವೆ ಆಯ್ದ ಜಾಗದಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲು ಅವಕಾಶ ಇದೆ ಎಂದು ಪುರಸಭೆ ಅಧ್ಯಕ್ಷೆ ಸುಮಕೇಶವ್ ಹೇಳಿದ್ದರೆ.ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದರು. ಅಶ್ಪಕ್ ಅಹ್ಮದ್ ಮಾತನಾಡಿ, ಮೀನು ಮಾರಾಟ ವ್ಯವಸ್ಥೆ ಕಲ್ಪಿಸಲು ಅವಕಾಶವಿದೆ ಎಂದರು. ಪ್ರತಿಮಾ ರಾಣೆ ಮಾತನಾಡಿ, ಈ ಬಗ್ಗೆ ಅನೇಕ ಬಾರಿ ಚರ್ಚೆ ನಡೆದಿದೆ. ಹೊಟ್ಟೆಪಾಡಿಗಾಗಿ ಬೀದಿ ಬದಿಯಲ್ಲಿ ವ್ಯಾಪಾರ ನಿರ್ವಹಿಸುತ್ತಿದ್ದಾರೆ.