Home Archive by category Uncategorized (Page 3)

ಮಂಗಳೂರು: ಫೆ.23ರಿಂದ ಫೆ.25ರ ವರೆಗೆ ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

ಅದ್ಯಪಾಡಿ ಬೈಲು ಮಾಗಣೆಯ ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಫೆ.23ರಿಂದ ಫೆ.25ರ ವರೆಗೆ ಬ್ರಹ್ಮಶ್ರೀ ಶಿಬರೂರು ಶ್ರೀ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ನಡೆಯಲಿದೆ. ಫೆ.23 ರಂದು ಬೆಳಿಗ್ಗೆ ಗಣಪತಿ ಹೋಮ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ನಾಗತಂಬಿಲ, ರುದ್ರಯಾಗ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,

ಲಾಡುಲಾಲ್ ಲಬಕ್ ದಾಸ್

ಬೆಂಗಳೂರಿನ ಚಿಕ್ಕಪೇಟೆಯ ಬಟ್ಟೆ ವ್ಯಾಪಾರಿ ಹಾಗೂ ಜೂಗನಹಳ್ಳಿಯ ಬಂಗಲೆ ವಾಸಿ ಲಾಡುಲಾಲ್ ಪಿಟ್ಲಿಯಾ ಅವರು ಈಗ ರಾಜಸ್ತಾನದ ಸಹಾರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎನ್ನುತ್ತದೆ ಸುದ್ದಿ. ಬೆಂಗಳೂರಿನ ಚಿಕ್ಕಪೇಟೆಯ ಬಟ್ಟೆ ವ್ಯಾಪಾರವೆಲ್ಲ ಗುಜರಾತ್, ರಾಜಸ್ತಾನಿಗಳ ಕಯ್ಯಲ್ಲಿ ಇದೆ ಎಂಬ ಕೆಲವರದು ಟೀಕೆಯಲ್ಲ ಸತ್ಯ. ಕನ್ನಡ ಹೋರಾಟಗಾರರು ಕೆಲವರು ರಾಜ್ಯೋತ್ಸವದ ಸಮಯದಲ್ಲಿ ಇದನ್ನು ನಗದು ಮಾಡಿಕೊಳ್ಳುವುದು ನಡೆದಿದೆ. ನಲವತ್ತೈದು ವರುಷಗಳ ಹಿಂದೆ

ಜಿ ಎಸ್‍ ಟಿ ಉಕ್ಕಿಸಿದರೂ ಕರ್ನಾಟಕಕ್ಕೆ ಕತ್ತರಿ ಭಾಗ್ಯ

ಅರವಿಂದ ಪನಗರಿಯ ಅವರು 16ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಆಯ್ಕೆ ಆಗುತ್ತಿದ್ದಂತೆ ಕರ್ನಾಟಕದ ತೆರಿಗೆ ಪಾಲು ಕಡಿಮೆ ಆಗಿರುವ ಅಂಶ ಹೊರ ಬಿದ್ದಿದೆ. ಅದೇ ವೇಳೆ ಗುಜರಾತಿಗೆ ಹಣಕಾಸು ವರುಷದ ತೆರಿಗೆ ಪಾಲು 51 ಶೇಕಡಾ ಹೆಚ್ಚು ಆಗಿರುವುದು ದೇಶವನ್ನೇ ಕಕ್ಕಾಬಿಕ್ಕಿಗೊಳಿಸಿದೆ.ಕಳೆದ ಕೆಲವು ದಶಕಗಳಿಂದ ಗುಜರಾತಿಗಳು ವಿದೇಶಗಳಲ್ಲಿ ಹೋಗಿ ನೆಲೆಸುವುದು ಅಧಿಕವಾಗಿದೆ. ಕಳೆದೊಂದು ದಶಕದಿಂದ ದೇಶದಲ್ಲೇ ಅತಿ ಹೆಚ್ಚು ಗುಜರಾತ್ ಉದ್ಯಮಿಗಳು ಬ್ಯಾಂಕುಗಳಿಗೆ ಟೋಪಿ ಹಾಕಿ

ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-4 ಗ್ರ್ಯಾಂಡ್ ಫಿನಾಲೆ: ಪಲ್ಲವಿ’ಸ್ ನ್ಯೂಟ್ರಿಮಿಕ್ಸ್ ತೆಲಿಕೆದ ತೆನ್ನಾಲಿ ವಿನ್ನರ್, ವೆಸ್ಟ್‍ ಕೋಸ್ಟ್ ಬಂಗಾರ್ ಬಂಟ್ವಾಳ್ ರನ್ನರ್ ಅಪ್

ಕರಾವಳಿಯ ಪ್ರಸಿದ್ಧವಾಹಿನಿ ವಿ4 ನ್ಯೂಸ್ 247 ಚಾನೆಲ್ ವಿಭಿನ್ನ ಪರಿಕಲ್ಪನೆಯ ಕಾಮಿಡಿ ರಿಯಾಲಿಟಿ ಶೋ ಕಾಮಿಡಿ ಪ್ರೀಮಿಯರ್ ಲೀಗ್. ಕಾಮಿಡಿ ಪ್ರೀಮಿಯರ್ ಲೀಗ್ ತುಳುನಾಡಿನ ಉದಯೋನ್ಮುಖ ಕಲಾವಿದರು ಹಾಗೂ ತಂಡಗಳಿಗೆ ವಿ4 ನ್ಯೂಸ್ 24×7 ಒದಗಿಸಿದ ಒಂದು ವಿಭಿನ್ನ ವೇದಿಕೆ. ಒಂದೇ ಕಡೆ ಚಿತ್ರೀಕರಣ ನಡೆಯದೆ ತಿಂಗಳಿಗೊಂದು ಕಡೆಗಳಂತೆ ಊರೂರಿಗೆ ತೆರಳಿ ಕಾಮಿಡಿ ಸಂತೆಯಂತೆ ಪ್ರದರ್ಶನಗಳನ್ನು ನೀಡಿ ಹಾಸ್ಯದ ರಸದೌತಣ ಉಣಬಡಿಸುವುದು ವಿ4 ನ್ಯೂಸ್ 24×7 ಕಾಮಿಡಿ

ಡಿ.30ರಂದು “ಮಂಗಳೂರು ಕಂಬಳ”

ಮಂಗಳೂರು: ನಗರದ ಬಂಗ್ರಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಸಿಟಿಯಲ್ಲಿ ಡಿಸೆಂಬರ್ 30ರಂದು ಮಂಗಳೂರು ಕಂಬಳ ಅದ್ಧೂರಿಯಾಗಿ ನಡೆಯಲಿದ್ದು ಇದರ ಅಂಗವಾಗಿ ಛಾಯಾಚಿತ್ರ ಸ್ಪರ್ಧೆ, ಕಲರ್ ಕೂಟ ಮತ್ತು ರೀಲ್ ಕಂಟೆಸ್ಟ್ ಆಯೋಜಿಸಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ ಮಾಹಿತಿ ನೀಡಿದರು. ಅವರು ನಗರ ಖಾಸಗಿ ಹೊಟೇಲಿನಲ್ಲಿ ಸಉದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಡಿ.30ರಂದು ಬೆಳಗ್ಗೆ 8:30ಕ್ಕೆ ದಿ. ರತ್ನ ಮಾಧವ ಶೆಟ್ಟಿ ವೇದಿಕೆಯಲ್ಲಿ ಕಂಬಳ

ಮಣ್ಣಗುಡ್ಡದ ಅಂಗಡಿಯಲ್ಲಿ ಬೆಂಕಿ : ಸಕಾಲದಲ್ಲಿ ಆರಿಸಿದ ಅಗ್ನಿಶಾಮಕ ದಳ

ಮಂಗಳೂರು ಮಣ್ಣಗುಡ್ಡದ ಮಠದಕಣಿ ರಸ್ತೆಯ ಮಿಶನ್ ಗೋರಿ ರಸ್ತೆಯಲ್ಲಿದ್ದ ದಿನಸಿ ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಸಂಬವಿಸಿ ಅಂಗಡಿಯಲ್ಲಿದ್ದ ವಸ್ತುಗಳಲ್ಲಿ ಸುಟ್ಟು ಕರಕಲಾಗಿವೆ.ಅಗ್ನಿಶಾಮಕ ದಳದವರು ಸಕಾಲದಲ್ಲಿ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಆಚೀಚೆಯ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹರಡಲಿಲ್ಲ. ಆದರೆ ಸಂದೀಪ್ ಎಂಬವರಿಗೆ ಸೇರಿದ ಅಂಗಡಿಯೊಳಗಿನ ವಸ್ತುಗಳೆಲ್ಲ ಸುಟ್ಟು ಹೋಗಿವೆ. ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಅವಘಡಕ್ಕೆ ಕಾರಣ ಎನ್ನಲಾಗಿದೆ. ಇಂದು ಮುಂಜಾವ ಐದೂವರೆ

ಮಗನ ಗದ್ದೆಯಿಂದ ಹೂಕೋಸು ಕಿತ್ತ ತಾಯಿ : ಅಮ್ಮನನ್ನೇ ಕಂಬಕ್ಕೆ ಕಟ್ಟಿ ಹೊಡೆದ ಪುತ್ರ

ಒಡಿಶಾ ರಾಜ್ಯದ ಕಿಯೊಂಜಾರ್ ಜಿಲ್ಲೆಯಲ್ಲಿ ಹೂಕೋಸು ಕಿತ್ತು ಪಲ್ಯ ಮಾಡಿ ತಿಂದಿದ್ದಾರೆ ಎಂದು ಮಗನೇ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ನಡೆದಿದೆ. 70ರ ಮಹಿಳೆ ಸರಸಪಸಿ. ಈಕೆಯ ಕಿರಿಯ ಮಗ ಪ್ರತ್ಯೇಕ ಕೃಷಿ ಭೂಮಿ ಹೊಂದಿದ್ದ. ಆಕೆ ಆ ಮಗನ ಹೊಲದಿಂದ ಹೂಕೋಸು ತಂದು ಪಲ್ಯ ಮಾಡಿ ತಿಂದಿದ್ದಳು. ಕೆರಳಿ ಜಗಳಕ್ಕೆ ಬಂದಿದ್ದ ಮಗ. ತಾಯಿಯೂ ಜಗಳಕ್ಕೆ ನಿಂತಳು. ತಾಯಿಯನ್ನೇ ಮಿಂಚುರಿ ಕಂಬಕ್ಕೆ ಕಟ್ಟಿ ಹೊಡೆದಿದ್ದಾನೆ. ಆಗ ಬೇರೆಯವರು ಬಂದು

ಮೂಗಜ್ಜನ ಕೋಳಿ ಅರೆ ಭಾಷಾ ಚಿತ್ರ : ನವೀನ್ ಡಿ. ಪಡೀಲ್‍ಗೆ ಉತ್ತಮ ನಟ ಪ್ರಶಸ್ತಿ

ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಅಂತರರಾಷ್ಟ್ರ ಚಲನಚಿತ್ರ ಅಕಾಡೆಮಿ ಯೋಜಿತ ಅಂತರರಾಷ್ಟ್ರ ಚಲನಚಿತ್ರೋತ್ಸವದಲ್ಲಿ ಮೂಗಜ್ಜನ ಕೋಳಿ ಚಿತ್ರದ ನಟನೆಗಾಗಿ ಕುಸಲ್ದರಸೆ ನವೀನ್ ಡಿ. ಪಡೀಲ್ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಜೀಟಿಗೆ ಚಿತ್ರದ ಬಳಿಕ ಸಂತೋಷ್ ಮಾಡ ನಿರ್ದೇಶಿಸಿದ ಅರೆ ಭಾಷೆಯ ಚಿತ್ರ ಮೂಗಜ್ಜನ ಕೋಳಿ. ಇದರಲ್ಲಿ ನವೀನ್ ಪಡೀಲ್ ಅವರು ಮೂಗಜ್ಜನ ಪಾತ್ರ ವಹಿಸಿದ್ದಾರೆ. ಕೋಳಿಗಳ ವಿಷಯದಲ್ಲಿ ಜೀವ ಇಟ್ಟಿರುವ ಮಾತೇ ಇಲ್ಲದ ಒರಟು ಮುದುಕನ

ವಿಧಾನ ಪರಿಷತ್ತಿನಲ್ಲಿ ಪ್ರತಿ ಪಕ್ಷದ ನಾಯಕರಾಗಿ ಮಾಜೀ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ನೇಮಕ

ವಿಧಾನ ಪರಿಷತ್ತಿನಲ್ಲಿ ಪ್ರತಿ ಪಕ್ಷದ ನಾಯಕರಾಗಿ ಮಾಜೀ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ನೇಮಕಗೊಂಡಿದ್ದಾರೆ. ಏಳು ತಿಂಗಳ ಬಳಿಕ ಬಿಜೆಪಿ ಈ ತೀರ್ಮಾನ ತೆಗೆದುಕೊಂಡಿದೆ. ವಿಧಾನ ಪರಿಷತ್ತಿನಲ್ಲಿ ಉಪ ನಾಯಕರಾಗಿ ಸುನಿಲ್ ವಲ್ಯಾಪುರೆ ಅವರನ್ನು ನೇಮಿಸಲಾಗಿದೆ. ಅದೇ ವೇಳೆ ಎನ್. ರವಿಕುಮಾರ್ ಅವರನ್ನು ವಿಧಾನ ಪರಿಷತ್ತಿನಲ್ಲಿ ಮುಖ್ಯ ಸಚೇತಕರಾಗಿ ಬಿಜೆಪಿ ನೇಮಕ ಮಾಡಿದೆ. ಹುಬ್ಬಳ್ಳಿ ಧಾರವಾಡ ಶಾಸಕ ಅರವಿಂದ ಬೆಲ್ಲದ ಅವರನ್ನು ವಿಧಾನ ಸಭೆಯಲ್ಲಿ ಉಪ ನಾಯಕರಾಗಿ ಮತ್ತು

ಬೈಕಂಪಾಡಿ : ವಲಸೆ ಕೂಲಿ ಕಾರ್ಮಿಕನ ನಿಗೂಢ ಸಾವು

ಬಹು ಕಾಲದಿಂದ ಮಂಗಳೂರು ಬೈಕಂಪಾಡಿಯಲ್ಲಿರುವ ಎಪಿಎಂಸಿ ಯಾರ್ಡ್‍ನಲ್ಲಿ ಕೂಲಿಕಾರ್ಮಿಕನಾಗಿದ್ದ ಒಡಿಶಾ ಮೂಲದ ವ್ಯಕ್ತಿಯ ಮೃತ ದೇಹವು ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಮೃತ ವ್ಯಕ್ತಿಯು ಒಡಿಶಾ ರಾಜ್ಯದ ಜಾವಪುರ ಜಿಲ್ಲೆಯ 44ರ ವಲಸೆ ಕಾರ್ಮಿಕ ರಶಿಂರಂಜನ್ ಎಂದು ತಿಳಿದುಬಂದಿದೆ. ಕಾಲಿನ ಮಂಡಿ ಬಳಿ ಗಾಯದ ಗುರುತುಗಳಿದ್ದು ಲಘು ವಾಹನ ಗುದ್ದಿ ಸಾವು ಉಂಟಾಗಿರಬಹುದು ಎಂದು ಅನುಮಾನಾಸ್ಪದ ಪ್ರಕರಣವನ್ನು ದಾಖಲಿಸಲಾಗಿದೆ.ಪಣಂಬೂರು ಮತ್ತು ಮಂಗಳೂರು ಸಂಚಾರ