35ನೇ ಹಂತದ ಗೆಲುವು ಸಾಧಿಸಿ ದಾಖಲೆ ಬರೆದ ಕ್ಯಾವೆಂಡಿಶ್ ಬೆಲ್ಜಿಯಂನ ಲೆಜೆಂಡ್ ಎಡ್ಡಿ ಮೆರೆಕ್ಸ್ ದಾಖಲೆ ಪತನ
ಬ್ರಿಟನ್ನಿನ ಮಾರ್ಕ್ ಕ್ಯಾವೆಂಡಿಶ್ ಅವರು ಟೂರ್ ಡೆ ಫ್ರಾನ್ಸ್ ತುಳಿಬಂಡಿ ಸೈಕ್ಲಿಂಗ್‌ನಲ್ಲಿ 35ನೇ ಹಂತದ ಗೆಲುವು ಸಾಧಿಸಿ ದಾಖಲೆ ಬರೆದರು.
2021ರಲ್ಲಿ ಕ್ಯಾವೆಂಡಿಶ್ ಅವರು 34ನೇ ಹಂತ ಗೆಲುವು ಸಾಧಿಸಿ ಸೈಕ್ಲಿಂಗ್ ದಂತ ಕತೆ ಬೆಲ್ಜಿಯಂನ ಎಡ್ಡಿ ಮೆರೆಕ್ಸ್ ದಾಖಲೆ ಸರಿಗಟ್ಟಿದ್ದರು. ಈಗ ಮುರಿದು ದಾಖಲೆ ಬರೆದಿದ್ದಾರೆ. 5ನೇ ಹಂತದ ಸ್ಪ್ರಿಂಟ್ ಸೈಕ್ಲಿಂಗ್‌ನಲ್ಲಿ 69.4 ಕಿಲೋಮೀಟರ್ ವೇಗದಲ್ಲಿ ಬಂದ ಕ್ಯಾವೆಂಡಿಶ್ ಸೈಂಟ್ ವಲ್ಬಾಸ್‌ನಲ್ಲಿ ಕೈಯೆತ್ತಿ ತನ್ನ ದಾಖಲೆ ಗೆಲುವನ್ನು ಸೇರಿದವರೊಡನೆ ಸಂತೋಷಿಸಿದರು.
ಕಳೆದ ವರುಷ 8ನೇ ಹಂತದಲ್ಲಿ ಬಿದ್ದು ಗಾಯಗೊಂಡು ಹೊರ ಬಿದ್ದಿದ್ದ 39ರ ಕ್ಯಾವೆಂಡಿಶ್‌ರ ಸೈಕ್ಲಿಂಗ್ ಕತೆ ಮುಗಿಯಿತು ಎಂದೇ ತಿಳಿಯಲಾಗಿತ್ತು. ಆದರೆ 15ನೇ ಬಾರಿ ಟೂರ್ ಡೆ ಫ್ರಾನ್ಸ್ನಲ್ಲಿ ಸೈಕಲ್ ತುಳಿದರು ದಾಖಲೆ ಸಾಧಿಸಿದರು.