18ರ ಲಗ್ನ ವಿಘ್ನ, 21ರ ವಿವಾಹ ವಿಚಾರಗಳು
ಮಗು ಮದುವೆ, ಬಾಲ್ಯ ವಿವಾಹ ಭಾರತ ಮತ್ತು ಕರ್ನಾಟಕದ ಒಂದು ಅಂಟು ಜಾಡ್ಯವಾಗಿ ಬಲಿತು ಕುಳಿತಿದೆ.ಲಗ್ನದ ವಯಸ್ಸನ್ನು 21ಕ್ಕೆ ಏರಿಸಿದರೂ ಸಮಸ್ಯೆ ಪರಿಹಾರ ಆಗಿಲ್ಲ. ಮದುವೆಯ ವಯಸ್ಸು 21 ಎಂದಾಗ ಹೆಣ್ಣು ಉನ್ನತ ಓದು ಮುಗಿಸಿರುವುದು ಸಾಧ್ಯ. 18 ಎಂದರೆ ಕಲಿಕೆ ಕಡೆ ಇಲ್ಲವೇ ಸಂಸಾರ ತೂಗಿಸಿಕೊಂಡು ಓದಬೇಕು. 21ಕ್ಕೆ ಹೆಣ್ಣು ಕೆಲಸಕ್ಕೆ ಸೇರಿರುವುದೂ ಸಾಧ್ಯ. ಇದು ಸಂಸಾರಕ್ಕೆ ಅನುಕೂಲ. ಭಾರತೀಯ ಸಮಾಜದಲ್ಲಿ ಅನಾನುಕೂಲವೂ ಆಗಬಹುದು.
21ರಲ್ಲಿ ಹೆಣ್ಣು ಸ್ವತಂತ್ರವಾಗಿ ತೀರ್ಮಾನಿಸಬಲ್ಲಳು. 18ರಲ್ಲಿ ಹೆತ್ತವರ ನಿರ್ಧಾರವೇ ಅಂತಿಮ.ಇಂತಾವೆಲ್ಲದರಲ್ಲೂ ಅನುಕೂಲ, ಅನಾನುಕೂಲ ಎರಡೂ ಇವೆ. ಮದುವೆಗೆ ಹೆಚ್ಚು ಹಣ ಸೇರಿಸಬಹುದು, ಸೇರಿಸಿದ್ದು ಬೇರೆಯದಕ್ಕೆ ಕೂಡ ವ್ಯಯವಾಗಬಹುದು. ಅನಗತ್ಯ ಎಂದರೂ ಜನ ಬಿಡಬೇಕಲ್ಲ.ಹೆಚ್ಚು ಓದು, ಹೆಚ್ಚು ಸಂಬಳ ಸಮಾನ ವರ ಹುಡುಕಲು ಕೆಲವೊಮ್ಮೆ ತಡೆ ಎನಿಸಲೂ ಬಹುದು