ಮಾ.26 : ಕ್ಲಬ್ ಮಂತ್ರ ವತಿಯಿಂದ ಅತಿ ದೊಡ್ಡ ಹೋಲಿ ಹಬ್ಬ

ಕ್ಲಬ್ ಮಂತ್ರ ವತಿಯಿಂದ ಮಂಗಳೂರಿನಲ್ಲಿ ಅತಿ ದೊಡ್ಡ ಹೋಲಿ ಹಬ್ಬವನ್ನು ಮಾರ್ಚ್ 26ರಂದು ಆಯೋಜನೆ ಮಾಡಿದ್ದಾರೆ. ಇವಿಎಮ್ ಪ್ರೆಸೆಂಟ್ಸ್ ರಂಗ್ ದ ಬರ್ಸ ಸೀಸನ್-6 ನಗರದ ಮರೋಳಿಯ ಸೂರ್ಯವುಡ್ಸ್‍ನಲ್ಲಿ ಅದ್ಧೂರಿಯ ಕಾರ್ಯಕ್ರಮ ನಡೆಯಲಿದೆ.
ಮಂಗಳೂರಿನ ಜನತೆ ಬಣ್ಣದ ಓಕುಳಿಯಲ್ಲಿ ಸಂಭ್ರಮಿಸಲು ಸಿದ್ದರಾಗಿ ಇದೇ ಮಾರ್ಚ್ 26ರಂದು ಕ್ಲಬ್ ಮಂತ್ರ ವತಿಯಿಂದ ಇವಿಎಮ್ ಪ್ರೆಸೆಂಟ್ಸ್ ರಂಗ್ ದ ಬರ್ಸ ಸೀಸನ್-6ನ್ನು ಆಯೋಜನೆ ಮಾಡಿದ್ದಾರೆ. ಪರಸ್ಪರ ಬಣ್ಣ ಹಚ್ಚಿ ಓಕುಳಿಯಾಟದಲ್ಲಿ ಮಿಂದೆದ್ದು ಹೋಲಿ ಹಬ್ಬವನ್ನು ರಂಗೇರಿಸಲು ಅವಕಾಶವನ್ನು ಮಾಡಿಕೊಡುತ್ತಿದ್ದಾರೆ. ಮಾತ್ರವಲ್ಲದೆ ತಮಟೆ ಡೊಳ್ಳಿನ ನಾದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಬಹುದು. ಸಿನಿ ತಾರೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದಾರೆ.ಇಲೆಕ್ಟ್ರಿಪ್ಲೇಯಿಂಗ್ ಸೌಂಡ್, ಡೋಲ್, ರೈನ್ ಡ್ಯಾನ್ಸ್, ಟೊಮ್ಯಾಟಿನೊ, ಜೊತೆಗೆ ನೈಸರ್ಗಿಕ ಬಣ್ಣಗಳ ರಂಗಿನಲ್ಲಿ ಮಿಂದೇಳುವ ಅವಕಾಶ. ಪಾಸ್‍ಗಾಗಿ 8123414444, 8660521293 ಇಂದೇ ಸಂಪರ್ಕಿಸಬಹುದು.

Related Posts

Leave a Reply

Your email address will not be published.