ಭಟ್ಕಳದ ಮುಟ್ಟಳ್ಳಿಗೆ ಸಿಎಂ ಬೊಮ್ಮಾಯಿ ಭೇಟಿ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುಟ್ಠಳ್ಳಿಯಲ್ಲಿ ಮಳೆಯಿಂದಾಗಿ ಅಪಾರ ಹಾನಿಗೊಳಗಾಗಿದ್ದು, ಸಿಎಂ ಬಸರವಾಜ್ ಬೊಮ್ಮಾಯಿ ಅವರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ಮುಟ್ಠಳ್ಳಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿತವಾದ ಸ್ಥಳ ವೀಕ್ಷಣೆ ಮಾಡಿದರು. ನಿನ್ನೆ ದಿನ ಲಕ್ಷ್ಮಿ ನಾರಾಯಣ ನಾಯ್ಕ ರವರ ಮನೆಯಮೇಲೆ ಗುಡ್ಡ ಕುಸಿದು ಅನಂತನಾಯ್ಕ(,35), ಮಗಳು ಲಕ್ಷ್ಮಿ ನಾಯ್ಕ, (40) ಮೊಮ್ಮಗ ಪ್ರವೀಣ್ (16) ಒಟ್ಟು ನಾಲ್ಕು ಜನ ಭೂಸಮಾದಿಯಾಗಿದ್ದರು. ಮೃತ ವ್ಯಕ್ತಿಯ ಕುಟುಂಬಕ್ಕೆ ತಲಾ ಐದು ಲಕ್ಷದ ಮಂಜೂರಾತಿ ಆದೇಶ ಪ್ರತಿಯನ್ನು ಸಿ.ಎಂ. ಅವರು ನೀಡಿದರು.

ಇನ್ನು ಪೂರ್ಣ ಹಾನಿಯಾದ ಐದು ಜನರಿಗೆ ತಲಾ ತೊಂಬತ್ತು ಸಾವಿರದ ನೂರು ಮಂಜೂರಾತಿ ಆದೇಶ ಪ್ರತಿ ಸಿ.ಎಂ ನೀಡಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿ ಭಟ್ಕಳದಲ್ಲಿ ಮಹಾ ಮಳೆಯಿಂದ ಒಟ್ಟಾರೆ ಅಂದಾಜು 40 ಕೋಟಿ ನಷ್ಟವಾಗಿದೆ. 1500 ಹೆಚ್ಚಿನ ಅಂಗಡಿಗಳಿಗೆ ನೀರು ನುಗ್ಗಿ ನಷ್ಟವಾಗಿದೆ.ಮೀನುಗಾರಿಕಾ ದೋಣಿ ಗಳಿಗೆ ಹಾನಿ ಆಗಿದೆ, ಇವೆಲ್ಲದಕ್ಕೂ ಪರಿಹಾರ ನೀಡುವುದಾಗಿ ತಿಳಿಸಿದರು. ಸಾವನಪ್ಪಿದ ಕುಟುಂಬದ ಮಕ್ಕಳಿಗೆ ಸರ್ಕಾರದ ವತಿಯಿಂದ ಶಿಕ್ಷಣದ ವೆಚ್ಚ ಬರಿಸುವುದಾಗಿ ತಿಳಿಸಿದರು.

ಸಿ.ಎಂ ಬೊಮ್ಮಾಯಿ ಜೊತೆ ಕಂದಾಯ ಸಚಿವ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಿವರಾಮ್ ಹೆಬ್ಬಾರ್, ಭಟ್ಕಳ ಶಾಸಕ ಸುನಿಲ್ ನಾಯ್ಕ, ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಬಿ.ಜೆ.ಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ, ಕಾರವಾರ ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳವೇಕರ್, ಪುರಸಭಾ ಸದಸ್ಯ ಶ್ರೀಕಾಂತ್ ನಾಯ್ಕ ಆಸರಕೆರಿ ಸಾಥ್ ನೀಡಿದರು.

Related Posts

Leave a Reply

Your email address will not be published.