ಜಿಲ್ಲೆಯ ಜನತೆ ಗೆಲ್ಲಬೇಕಾದರೆ ಬಿಜೆಪಿ ಸೊಲಲೇಬೇಕು – ಸುನಿಲ್ ಕುಮಾರ್ ಬಜಾಲ್
ರಾಜ್ಯದ ಜನತೆಯ ಬದುಕಿಗೆ ಹಾಗೂ ನಾಡಿನ ಸೌಹಾರ್ದತೆಗೆ BJP ಸರಕಾರ ಕಂಟಕಪ್ರಾಯವಾಗಿದೆ.ಜನರ ಬದುಕನ್ನು ರಕ್ಷಿಸಬೇಕಾದ BJP ತನ್ನ ಕೋಮುವಾದಿ ಅಜೆಂಡಾವನ್ನು ಮುಂದಿಟ್ಟು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿದೆ. ಜನತೆಯ ಕೋಟ್ಯಂತರ ಹಣವನ್ನು ಹಾಡುಹಗಲಲ್ಲೇ ನುಂಗಿ ಹಾಕಿದ ಬಿಜೆಪಿ 40% ಕಮಿಷನ್ ಸರಕಾರವೆಂದು ಕುಖ್ಯಾತಿಗಳಿಸಿದೆ. ಶಿಕ್ಷಣ ಉದ್ಯೋಗ ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಬಿಜೆಪಿ ಕರಾವಳಿ ಜಿಲ್ಲೆಯನ್ನು ತನ್ನ ಹಿಂದುತ್ವದ ಪ್ರಯೋಗಶಾಲೆಯನ್ನಾಗಿ ಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ.ಈ ನಿಟ್ಟಿನಲ್ಲಿ ಜಿಲ್ಲೆಯ ಜನತೆ ಗೆಲ್ಲಬೇಕಾದರೆ BJP ಅತ್ಯಂತ ಹೀನಾಯವಾಗಿ ಸೋಲಬೇಕಾಗಿದೆ ಎಂದು CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಕರೆ ನೀಡಿದರು.
ಅವರು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕಣ್ಣೂರು ಪ್ರದೇಶದಲ್ಲಿ CPIM ನೇತೃತ್ವದಲ್ಲಿ ಜರುಗಿದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
CPIM ಜಿಲ್ಲಾ ಯುವನಾಯಕರಾದ ಬಿ ಕೆ ಇಮ್ತಿಯಾಜ್ ರವರು ಮಾತನಾಡುತ್ತಾ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ ಬಿಜೆಪಿ ಒಂದೇ ಒಂದು ಉದ್ಯೋಗ ಸೃಷ್ಟಿಸದೆ ಯುವಜನತೆಗೆ ಮೋಸ ಮಾಡಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು CPIM ಕಣ್ಣೂರು ಶಾಖಾ ಕಾರ್ಯದರ್ಶಿ ಉಸ್ಮಾನ್ ಕಣ್ಣೂರುರವರು ವಹಿಸಿದ್ದರು.
ವೇದಿಕೆಯಲ್ಲಿ CPIM ಯುವನಾಯಕರಾದ ಸಾದಿಕ್ ಕಣ್ಣೂರು, ಜಗದೀಶ್ ಬಜಾಲ್, ಇಸಾಕ್,ಖಾದರ್,ರಿಯಾಝ್,ನೌಶಾದ್ ಮುಂತಾದವರು ಉಪಸ್ಥಿತರಿದ್ದರು.