ಬಿ.ಎಸ್.ಪಿ . ಜಿಲ್ಲಾ ಅಧ್ಯಕ್ಷ ದಾಸಪ್ಪ ಎಡಪದವು‌ ನಿಧನ

ಮಂಗಳೂರು : ಬಹುಜನ ಸಮಾಜ ಪಕ್ಷ( ಬಿಎಸ್ಪಿ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ದಾಸಪ್ಪ ಎಡಪದವು (63)ಅವರು ಇಂದು ನಿಧನರಾದರು.
ಇಂದು ಮುಂಜಾನೆ ಗುರುಪುರದ ತನ್ನ ನಿವಾಸದಲ್ಲಿ ಹೃದಯಾಘಾತದಿಂದ ದಾಸಪ್ಪ ಅವರು ನಿಧನರಾದರು.ಗುರುಪುರ ದಲಿತ ಅಭಿವೃದ್ಧಿ ಸಮಿತಿಯ ಸ್ಥಾಪಕರಾಗಿದ್ದ ದಾಸಪ್ಪ ಅವರು , ಭೌದ್ಧ ಧರ್ಮದ ಅನುಯಾಯಿಯಾಗಿದ್ದರು. ಬಹುಜನ ಸಮಾಜ ಸಂಘಟನೆಯ ಸಲುವಾಗಿ ರಾಜ್ಯವ್ಯಾಪಿಯಾಗಿ ದಾಸಪ್ಪ ಅವರು ಕಾರ್ಯನಿರ್ವಹಿಸುತ್ತಿದ್ದರು.ಮೃತರು ಪತ್ನಿ ಹಾಗೂ ನಾಲ್ವರು ಪುತ್ರರು, ಮೂರು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Related Posts

Leave a Reply

Your email address will not be published.