ಬಿ.ಸಿ.ರೋಡು ಅಡ್ಡಹೊಳೆ ಚತುಷ್ಫಥ ಹೆದ್ದಾರಿ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಬಂಟ್ವಾಳ: ಬಿ.ಸಿ.ರೋಡು ಅಡ್ಡಹೊಳೆ ಚತುಷ್ಫಥ ಹೆದ್ದಾರಿ ಕಾಮಗಾರಿಯ ಪ್ರಗತಿಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾಣಿ, ಸೂರಿಕುಮೇರು, ಕಲ್ಲಡ್ಕ, ಮೆಲ್ಕಾರ್, ನೆಹರುನಗರದಲ್ಲಿ ಅಭಿವೃದ್ದಿ ಕಾಮಗಾರಿಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಂಜಿನಿಯರ್ ಹಾಗೂ ಗುತ್ತಿಗೆ ಸಂಸ್ಥೆ ಕೆಎನ್‌ಆರ್‌ಸಿಯ ಅಧಿಕಾರಿಗಳೊಂದಿಗೆ ಚರ್ಚಿದರು.
ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿಯಲ್ಲಿ ಅಭಿವೃದ್ದಿ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತೀವಾರ ಇಂತಿಷ್ಟು ಕಾಮಗಾರಿಗಳು ಮುಗಿಯಬೇಕು ಎನ್ನುವ ಗುರಿಯನ್ನು ನೀಡಲಾಗಿತ್ತು, ಮಳೆ ಇದ್ದುದರಿಂದ ಕಾಮಗಾರಿ ಎರಡು ಮೂರು ವಾರಗಳ ಕಾಲ ವಿಳಂಬವಾಗಿದೆ. ಮಾರ್ಚ್ ಅಂತ್ಯಕಕೆ ಶೇ.95 ಕೆಲಸ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಚತುಷ್ಫಥ ಹೆದ್ದಾರಿ ನಿರ್ಮಾಣದ ವೇಳೆ ಇದ್ದಂಹ ದೊಡ್ಡ ಅಡೆತಡಗಳೆಲ್ಲಾ ನಿವಾರಣೆಯಾಗಿದೆ. ಇಲ್ಲಿ ಸರ್ವಿಸ್ ರಸ್ತೆಗಳೆಲ್ಲಾ ಕಾಂಕ್ರೀಟ್ ರಸ್ತೆಗಳಾಗಿರುವುದರಿಂದ ಕಾಂಕ್ರಿಟ್ ಹಾಕಿದ ಬಳಿಕ ಕ್ಯೂರಿಂಗ್‌ಗೆ ಕೆಲವು ದಿನಗಳು ಬೇಕಾಗಿರುವುದರಿಂದ ವಾಹನ ಸಂಚಾರಕ್ಕೆ ಸ್ವಲ್ಪ ಅಡ್ಡಿಯಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭ ತಹಸೀಲ್ದಾರ್ ಅರ್ಚನಾ ಡಿ. ಭಟ್, ಆರ್‌ಐಗಳಾದ ಜನಾರ್ದನ, ವಿಜಯ್, ಸಂಚಾರಿ ಎಸೈ ಸುತೇಶ್, ಕೆಎನ್‌ಆರ್‌ಸಿ ಪ್ರಾಜೆಕ್ಟ್ ಮ್ಯಾನೇಜರ್ ಮಹೇಂದ್ರ ಸಿಂಗ್ ಉಪಸ್ಥಿತರಿದ್ದರು.