ದಿಲ್ಲಿ : ವಿಮಾನಗಳಲ್ಲಿ ಬಾಂಬಿಟ್ಟ ಸುಳ್ಳು ಕರೆಗಳ ಸರಣಿ: ಮರಳಿ ಬಂದಿಳಿದ ಲಂಡನ್ ದಿಲ್ಲಿ ವಿಮಾನ
ಇದೇ ಸೋಮವಾರದಿಂದ ವಿಮಾನಗಳಲ್ಲಿ ಬಾಂಬ್ ಇಟ್ಟಿರುವ ಬೆದರಿಕೆ ಕರೆಗಳು ಬರುತ್ತಿದ್ದು, ಕಳೆದ ೨೪ ಗಂಟೆಗಳಲ್ಲಿನ 3 ಸೇರಿ ಒಟ್ಟು ೩೫ಕ್ಕೂ ಹೆಚ್ಚು ಬಾಂಬ್ ಬೆದರಿಕೆ ಕಾರಣಕ್ಕೆ ವಿಮಾನಗಳನ್ನು ಬೇರೆಡೆ ತಿರುಗಿಸಿದೆ, ಇಲ್ಲವೇ ತುರ್ತಾಗಿ ಅಲ್ಲೇ ಕೆಳಕ್ಕೆ ಇಳಿಸಲಾಯಿತು.
ಕಳೆದ 24 ಗಂಟೆಗಳಲ್ಲಿ ಮೂರು ಪ್ರಮುಖ ವಿಮಾನ ಯಾನಗಳು ತತ್ತರಿಸಿವೆ. ವಿಸ್ತಾರ ಸೇವೆಯ ಲಂಡನ್ ದಿಲ್ಲಿ ವಿಮಾನವನ್ನು ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ತಿರುಗಿಸಲಾಗಿದೆ. ಜೈಪುರ ದುಬಾಯಿ, ಬೆಂಗಳೂರು ಮುಂಬಯಿ ಹಾರಾಟ ಕೂಡ ಹೀಗೆಯೇ ತತ್ತರಿಸಿದವು. ಈ ಎಲ್ಲ ಪ್ರಕರಣಗಳಲ್ಲೂ ಅನಂತರ ಅವೆಲ್ಲ ಸುಳ್ಳು ಬೆದರಿಕೆ ಕರೆಗಳು ಎಂದು ತಿಳಿದು ಬಂದಿವೆ. ಆದರೆ ಪ್ರಯಾಣಿಕರ ಕ್ಷೇಮಕ್ಕಾಗಿ ಕೂಡಲೆ ಪ್ರಯಾಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ದುಬಾಯಿ ಜೈಪುರ ವಿಮಾನವನ್ನು ತಡವಾಗಿ ಹಾರಿಸಲಾಯಿತು. ಇವೆಲ್ಲ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಟ್ವೀಟ್ ಮೂಲಕ ಇಲ್ಲವೇ ಮೊಬಾಯಿಲ್ ಕರೆ ಮೂಲಕ ಬಾಂಬ್ ಇಟ್ಟಿರುವುದಾಗಿ ಹೇಳಿದವುಗಳಾಗಿವೆ. ಒಟ್ಟು 35 ಪ್ರಕರಣಗಳು ಕಳೆದ ಐದು ದಿನಗಳಿಂದ ನಡೆದಿವೆ. ಈ ಸಂಬಂಧ ಈ ವಾರ ಒಂದೆರಡು ಬಂಧನಗಳು ಕೂಡ ನಡೆದಿವೆ. ಅದರಲ್ಲಿ 17 ವರುಷದ ಬಾಲಕ ಕೂಡ ಸೇರಿದ್ದಾನೆ.