ಬೈಂದೂರು ಕ್ಷೇತ್ರಕ್ಕೆ ಹೊಸ ಸರ್ಕಾರಿ ಗೋ ಶಾಲೆ ಮಂಜೂರಾತಿಗೆ ಆಗ್ರಹ
ಬೈಂದೂರು: ಪತ್ರಿಕೆ ಗಳಲ್ಲಿ ವರದಿ ಆದಂತೆ ಗೋಶಾಲೆ ಗಳಿಗೆ ಅಗತ್ಯ ಪ್ರಮಾಣದಲ್ಲಿ ಗೋವುಗಳು ಬರುತ್ತಿಲ್ಲ ಹಾಗಾಗಿ ಹೊಸ ಗೋಶಾಲೆ ಗಳನ್ನು ನಿರ್ಮಿಸುವ ಬದಲು ಈಗಿರುವ ಗೋಶಾಲೆ ಗಳನ್ನು ಬಲವರ್ಧನೆ ಮಾಡುತ್ತೇವೆ ಎಂಬ ಸಚಿವರು ನೀಡಿರುವ ಹೇಳಿಕೆ ಹಾಗೂ ಸ್ಪಷ್ಟೀಕರಣಕ್ಕೆ ಶಾಸಕ ಗುರುರಾಜ್ ಗಂಟೊಹೊಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಇರುವ ಗೋಶಾಲೆ ಗಳಿಗೆ ಗೋವುಗಳು ಬರುತ್ತಿಲ್ಲ ಎಂದು ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗುವಂತೆ ಹೇಳಿಕೆ ಸರಿಯಲ್ಲ ಉಡುಪಿ ಜಿಲ್ಲೆಯಲ್ಲಿ ಖಾಸಗಿ ಗೋ ಶಾಲೆಗಳು ಇದ್ದರೂ ಯಾರೂ ಕೂಡ ಗೋವುಗಳನ್ನು ತೆಗೆದು ಕೊಳ್ಳುವ ಪರಿಸ್ಥಿಯಲ್ಲಿ ಇಲ್ಲ. ಹಾಗಿರುವಾಗ ಯಾವ ಆಧಾರದಲ್ಲಿ ಗೋಶಾಲೆ ಗಳಿಗೆ ಗೋವುಗಳು ಬರುತ್ತಿಲ್ಲ ಎಂದು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಜಿಲ್ಲೆಗೆ ಒಂದರಂತೆ ಎಲ್ಲಾ ಜಿಲ್ಲೆ ಗಳಿಗೂ ಸರಕಾರಿ ಗೋ ಶಾಲೆ ನಿರ್ಮಾಣವಾಗಲೆಬೇಕು. ಹಾಗೂ ಜಿಲ್ಲೆಯೊಳಗೆ ಅಗತ್ಯ ಇದ್ದ ಕಡೆ ತಾಲೂಕಿಗೂ ಒಂದರಂತೆ ಸರಕಾರಿ ಗೋಶಾಲೆ ನಿರ್ಮಾಣಕ್ಕೆ ಕ್ರಮವಾಗಬೇಕು.
ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಿನ ನಿತ್ಯ ಬೀಡಾಡಿ ಗೋವುಗಳು ಅಪಘಾತದಲ್ಲಿ ಸಾವನಪ್ಪುತ್ತಿದೆ. ಹಾಗಾಗಿ ಬೈಂದೂರಿಗೆ ಹೊಸ ಗೋಶಾಲೆ ಮಂಜೂರುಮಾಡಲಿ ಗೋಶಾಲೆಗೆ ಪೂರ್ತಿ ಗೋವುಗಳನ್ನು ಬರುವ ಹಾಗೆ ಮಾಡುವ ಜವಾಬ್ದಾರಿ ನಮ್ಮದು. ಆದಷ್ಟು ಬೇಗ ಸರ್ಕಾರಿ ಗೋ ಶಾಲೆ ಮಂಜೂರು ಮಾಡಲಿ ಎಂದು ಶಾಸಕರು ಆಗ್ರಹಿಸಿದ್ದಾರೆ.