ದೇರಳಕಟ್ಟೆ ಫ್ಲಾಟ್‍ನಲ್ಲಿ ತಪ್ಪಿದ ಭಾರೀ ಅಗ್ನಿ ಅವಘಢ

ಉಳ್ಳಾಲ: ದೇರಳಕಟ್ಟೆ ಎರಡು ಆಸ್ಪತ್ರೆಗಳ ನಡುವೆ ಇರುವ ಫ್ಲಾಟ್ ಒಂದರಲ್ಲಿ ಅಗ್ನಿ ಅವಘಢ ಸಂಭವಿಸಿದ್ದು, ಫ್ಲಾಟ್ ನ ಮೆನೇಜರ್ ಸಮಯಪ್ರಜ್ಞೆಯಿಂದ 100ಕ್ಕೂ ಅಧಿಕ ಮಂದಿಯಿರುವ 13 ಮಹಡಿಗಳ ಫ್ಲಾಟ್‍ನಲ್ಲಿ ಅಗ್ನಿ ದುರಂತ ತಪ್ಪಿದೆ.

ದೇರಳಕಟ್ಟೆ ಕ್ಷೇಮ ಆಸ್ಪತ್ರೆ ಬಳಿಯಿರುವ ಫ್ಲಾಮ ನೆಸ್ಟ್ ಫ್ಲಾಟ್‍ನಲ್ಲಿ ಅಗ್ನಿ ಅವಘಢ ಸಂಭವಿಸಿರುವುದು.
ಫ್ಲಾಟ್‍ನ 202ರ ರೂಮಿನಲ್ಲಿ ದಂತ ವೈದ್ಯಕೀಯ ಕಲಿಯುವ ಇಬ್ಬರು ವಿದ್ಯಾರ್ಥಿನಿಯರಿದ್ದು, ಡಿ.20 ರ ಬೆಳಿಗ್ಗೆ ಕಾಲೇಜಿನಲ್ಲಿ ಕಾರ್ಯಾಗಾರವಿದೆಯೆಂದು ಬೇಗನೇ ತೆರಳಿದ್ದರು. ಆದರೆ ಆತುರದಲ್ಲಿ ಬಟ್ಟೆಗಳಿಗೆ ಇಸ್ತ್ರೀ ಹಾಕಿರುವ ವಿದ್ಯಾರ್ಥಿನಿಯರು, ಸ್ವಿಚ್ ಆಫ್ ಮಾಡಿದರೂ, ಇಸ್ಟ್ರೀ ಪೆಟ್ಟಿಗೆಯನ್ನು ಮಲಗುವ ಬೆಡ್‍ನಲ್ಲಿರಿಸಿ ಕಾಲೇಜಿಗೆ ತೆರಳಿದ್ದರು. ಆದರೆ ಬೆಳಗ್ಗಿನಿಂದ ಹೊಗೆಯ ವಾಸನೆ ಫ್ಲಾಟ್ ತುಂಬಾ ಬರುತ್ತಿದ್ದು, ಮ್ಯಾನೇeರ್ ಆಗಿರುವ ಕುತ್ತಾರು ನಿವಾಸಿ ಮಹಮ್ಮದ್ ಶಾಹಿದ್ ಶಫೀಕ್ ಹುಡುಕಲು ಆರಂಭಿಸಿದ್ದರು. ಒಂದು ಗಂಟೆಯ ನಂತರ 202ರ ರೂಮಿನಲ್ಲಿ ಹೊಗೆ ಬರುತ್ತಿರುವುದು ಗಮನಕ್ಕೆ ಬಂದಿದೆ.

ಆದರೆ ರೂಮಿಗೆ ಬೀಗ ಹಾಕಿರುವುದರಿಂದ ತೆರೆಯಲು ಸಾಧ್ಯವಾಗದೆ, ವಿದ್ಯಾರ್ಥಿನಿಯರಿಗೆ ಮೊಬೈಲ್ ಮೂಲಕ ಸಂಪರ್ಕಿಸಿದ್ದಾರೆ. ರೂಮಿನಿಂದ ಹೊಗೆ ಬರುತ್ತಿರುವುದನ್ನು ತಿಳಿಸಿ ತಕ್ಷಣಕ್ಕೆ ವಾಪಸ್ಸು ಬರುವಂತೆ ಸೂಚಿಸಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ತಕ್ಷಣ ಫ್ಲಾಟ್ ನತ್ತ ಆಗಮಿಸಿದ್ದು, ಬೀಗ ತೆರೆಯುವ ಸಂದರ್ಭ ರೂಮಿನೊಳಕ್ಕೆ ದಟ್ಟವಾದ ಹೊಗೆ ಆವರಿಸಿತ್ತು. ಧೈರ್ಯ ಮಾಡಿದ ಮ್ಯಾನೇಜರ್ ಶಫೀಕ್ ನೇರವಾಗಿ ಒಳನುಗ್ಗಿ ಕಿಟಕಿಯನ್ನು ತೆರೆದಿದ್ದಾರೆ. ಹೊಗೆಯ ಕಾರಣ ನಿಖರವಾಗಿ ಗೊತ್ತಾಗದೇ ಕೆಲಹೊತ್ತು ಅದರೊಳಗೆ ಉಳಿದು ಗಮನಿಸಿದ್ದಾರೆ. ಆ ವೇಳೆ ಬೆಡ್ಡಿಗೆ ಬೆಂಕಿ ಆವರಿಸಲು ಆರಂಭವಾಗಿದೆ. ತಕ್ಷಣ ಫ್ಲಾಟ್‍ನ ವಾಚ್‍ಮೆನ್ ಲೋಕೇಶ್ ಎಂಬವರನ್ನು ಕರೆದಿದ್ದು, ಇಬ್ಬರೂ ಸೇರಿಕೊಂಡು ಬೆಂಕಿ ಆವರಿಸಿದ ಬೆಡ್ ಅನ್ನು ಹೊರಗೆಸೆದು ಅವಘಢವನ್ನು ತಪ್ಪಿಸಿದ್ದಾರೆ. ಫ್ಲಾಟ್ ಪ್ರಬಂಧಕ ಶಾಹಿದ್ ಶಫೀಕ್ ಅವರು ಸ್ವಲ್ಪ ಹೊತ್ತು ತಡಮಾಡುತ್ತಿದ್ದರೂ ಬೆಂಕಿಯಿಡೀ ಪ್ಲಾಟ್ ಗೆ ಆವರಿಸುವ ಸಂಭವವಿತ್ತು. ಮಹಮ್ಮದ್ ಶಾಹೀದ್ ಶಫೀಕ್ ಅವರು ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ನ ಕಾರ್ಯದರ್ಶಿಯೂ ಆಗಿದ್ದಾರೆ

Related Posts

Leave a Reply

Your email address will not be published.