ದೇರಳಕಟ್ಟೆ : ಕಣಚೂರು ಸಂಸ್ಥೆಯಲ್ಲಿ ಓರಿಯಂಟೇಶನ್ ಕಾರ್ಯಕ್ರಮ
ನಾಟೆಕಲ್‌ನ ಕಣಚೂರು ಇಸ್ಲಾಮಿಕ್ ಎಜ್ಯುಕೇಶನ್ ಟ್ರಸ್ಟ್ನ ಫಿಸಿಯೋಥೆರಫಿ, ನರ್ಸಿಂಗ್ ಅಲೈಡ್ ಹೆಲ್ತ್ ಸೈನ್ಸ್ನ 2022-23ನೇ ಬ್ಯಾಚ್‌ನ ಓರಿಯಂಟೇಶನ್ ಕಾರ್ಯಕ್ರಮ ಮತ್ತು ಕಣಚೂರು ಕಾಲೇಜು ಆಫ್ ನರ್ಸಿಂಗ್ ಸೈನ್ಸ್ನ 2022-23 ಬ್ಯಾಚ್‌ನ ಕೋರ್ಸ್ ಉದ್ಘಾಟನಾ ಕಾರ್ಯಕ್ರಮ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಡಿಟೋರಿಯಂನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಳ್ಳಾಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವಕುಮಾರ್ ಅವರು, ಈ ದೇಶದ ನೆಲದ ಕಾನೂನನ್ನು, ನಿಯಮಗಳನ್ನು ಪಾಲಿಸಲೇ ಬೇಕಾದ್ದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಶಾಲಾ ಕಾಲೇಜುಗಳಲ್ಲಿ ರ‍್ಯಾಗಿಂಗ್ ಮಾಡುವಂತಿಲ್ಲ. ಒಂದು ವೇಳೆ ನಿಮ್ಮ ಮೇಲೆ ಕೇಸ್ ದಾಖಲಾಗಿ ಎಫ್‌ಐಆರ್ ದಾಖಲಾದ್ರೆ ಇಡೀ ಜೀವನವೇ ಹಾಳಾದಂತೆ. ಹಾಗಾಗಿ ನಿಮ್ಮ ಜೀವನವನ್ನು ನೀವು ಸುಂದರವಾಗಿ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.ಆನಂತರ ಕಣಚೂರು ಕಾಲೇಜಿನ ನರ್ಸಿಂಗ್ ಸೈನ್ಸ್ನ ಪ್ರಾಂಶುಪಾಲರಾದ ಪ್ರೊ. ಮೊಲಿ ಸಲ್ಡಾನಾ ಅವರು, ವೃತ್ತಿ ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿಸಿದ ಅವರು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಅಗತ್ಯ ಎಂದು ಹೇಳಿದರು.
ಕಣಚೂರು ಇನ್ಸಿಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಚೇರ್‌ಮೆನ್ ಹಾಜಿ ಯು.ಕೆ. ಮೋನು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂದರ್ಭದಲ್ಲಿ ಕಣಚೂರು ಕಾಲೇಜು ಆಫ್ ಫಿಸಿಯೋಥೆರಫಿ ಮತ್ತು ಇನ್ಸಿಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ನ ಡೀನ ಡಾ. ಮೊಹಮ್ಮದ್ ಸುಹೈಲ್, ಕಣಚೂರು ಇನ್ಸಿಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ನಿರ್ದೇಶಕರಾದ ಅಬ್ದುಲ್ ರೆಹಮಾನ್, ಕಣಚೂರು ಇನ್ಸಿಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ನ ಪ್ರಾಂಶುಪಾಲರಾದ ಡಾ. ಶಮೀಮಾ ಉಪಸ್ಥಿತರಿದ್ದರು.