ದೇರಳಕಟ್ಟೆ: ಆವರಣ ಗೋಡೆ ಕುಸಿದು ಎರಡು ಕಾರಿಗೆ ಹಾನಿ

ದೇರಳಕಟ್ಟೆ ಯೇನೆಪೊಯ ಆಸ್ಪತ್ರೆ ಬಳಿ ಮರದ ಮಿಲ್ಲೊಂದರ ಆವರಣ ಗೋಡೆ ಕುಸಿದು ಎರಡು ಕಾರು ಮತ್ತು ಒಂದು ಕೈಗಾಡಿಗೆ ಹಾನಿಯಾದ ಘಟನೆ ನಡೆದಿದ್ದು, ಘಟನೆಯ ಸಂದರ್ಭದಲ್ಲಿ ವಾಹನದಲ್ಲಿ ಯಾರೂ ಇಲ್ಲದ ಕಾರಣ ಮತ್ತು ಆವರಣ ಗೋಡೆ ಬದಿಯಲ್ಲಿ ಎರಡೇ ವಾಹನಗಳು ಇದ್ದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

  ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಆವರಣಗೋಡೆ ಒದ್ದೆಯಾಗಿದ್ದು, ಎತ್ತರದ ಹಳೆ ಗೋಡೆಯಾಗಿದ್ದು, ಕುಸಿದು ಬಿದ್ದಿದೆ. ಯೇನೆಪೊಯ ವೈದ್ಯರಿಗೆ ಸೇರಿದ ಕಾರು ಮತ್ತು ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆದುಕೊಂಡು ಬಂದಿದ್ದ ಕೇರಳ ಮೂಲದವರ ಕಾರು ಸಂಪೂರ್ಣ ಹಾನಿಯಾಗಿದ್ದು, ಸ್ಥಳೀಯ ಬೇಲ್‌ಪುರಿ ಗಾಡಿ ಕಲ್ಲಿನಡಿಗೆ ಸಿಕ್ಕಿ ಸಂಪೂರ್ಣ ಹಾನಿಯಾಗಿದೆ.

 ವಾಹನಗಳು ಕಡಿಮೆಯಿತ್ತು : ಆಸ್ಪತ್ರೆಗೆ ಬರುವ ಜನರಿಗೆ ಖಾಸಗಿಯಾಗಿ ಖಾಲಿ ಸ್ಥಳದಲ್ಲಿ ಹಣ ಪಾವತಿ ಮಾಡಿ ಖಾಸಗಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಪ್ರತೀ ದಿನ ಪಕ್ಕದ ಮರದ ಮಿಲ್ಲಿನ ಆವರಣಗೋಡೆ ಬಳಿ ಐದರಿಂದ ಆರು ವಾಹನಗಳನ್ನು ನಿಲ್ಲಿಸಲಾಗುತ್ತಿತ್ತು. ವಾಹನಗಳ ಸಂಖ್ಯೆ ಕಡಿಮೆಯಿದ್ದು, ಎರಡು ಕಾರು ಮಾತ್ರ ನಿಂತಿತ್ತು. ಅದರ ಇನ್ನೊಂದು ಭಾಗದಲ್ಲಿ ಕಾರುಗಳಿದ್ದು, ಯಾವುದೇಹಾನಿಯಾಗಿಲ್ಲ. ಎರಡೂ ಕಾರುಗಳು ಬಾಗಶ: ಹಾನಿಯಾಗಿದ್ದು, ಬೇಲ್‌ಪುರಿ ಮಾರುವವನ ಕೈಗಾಡಿ ಎರಡು ದಿನಗಳ ಹಿಂದೆ ೧೫ ಸಾವಿರ ಪಾವತಿ ಮಾಡಿ ಆವರಣ ಗೋಡೆ ಪಕ್ಕದಲ್ಲಿಟ್ಟಿದ್ದು ಸಂಪೂರ್ಣ ಹಾನಿಯಾಗಿದೆ.

Related Posts

Leave a Reply

Your email address will not be published.