ದೇರೆಬೈಲ್‍ನ ಕೇಬಲ್ ಆಪರೇಟರ್ ಕ್ಲೌಡ್ ಮೆನೇಜಸ್ ನಿಧನ

ಮಂಗಳೂರಿನ ದೇರೆಬೈಲ್‍ನ ನಿವಾಸಿಯಾಗಿರುವ ಕ್ಲೌಡ್ ಮೆನೇಜಸ್ ಅವರು ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ಪ್ರಾಯವಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಕ್ಲೌಡ್ ಮೇನೇಜಸ್ ಅವರು ನಗರದ ಯೆಯ್ಯಾಡಿಯಲ್ಲಿರುವ ವಿ4 ಡಿಜಿಟಲ್ ಇನ್ಫೋಟೆಕ್ ಪ್ರೈವೆಟ್ ಲಿಮಿಟೆಡ್‍ನ ಪಾರ್ಟನರ್ ಆಗಿದ್ದು, ದೇರೆಬೈಲ್‍ನ ಕೇಬಲ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಹಾಗೂ ಓರ್ವ ಪ್ಮತ್ರಿಯನ್ನು ಅಗಲಿದ್ದಾರೆ.
