ಡಿಸೆಂಬರ್ 1 ರಿಂದ ಆರಂಭವಾಗಲಿದೆ ಡಿಜಿಟಲ್ ರೂಪಾಯಿ ವಹಿವಾಟು | ಏನಿದು ಡಿಜಿಟಲ್ ರೂಪಾಯಿ?

ಡಿಜಿಟಲ್‌ ರೂಪಾಯಿ ಕುರಿತಂತೆ RBI ಗವರ್ನರ್ ಶಕ್ತಿಕಾಂತ ದಾಸ್, ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನೆರಡು ದಿನಗಳ ನಂತರ ಸಾಮಾನ್ಯ ಗ್ರಾಹಕರಿಗೆ ಇ–ರೂಪಾಯಿಯಲ್ಲಿ ವಹಿವಾಟು ಸೌಲಭ್ಯವನ್ನು ಒದಗಿಸುವುದಾಗಿ ತಿಳಿಸಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಿಲ್ಲರೆ ಮಟ್ಟದಲ್ಲಿ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

ಡಿಸೆಂಬರ್ 1 ರಿಂದ ರಿಟೇಲ್ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಗಾಗಿ ಪ್ರಾಯೋಗಿಕವಾಗಿ ಡಿಜಿಟಲ್‌ ರೂಪಾಯಿ ಲಭ್ಯವಾಗಲಿದೆ. RBI ನೀಡಿದ ಮಾಹಿತಿಯ ಪ್ರಕಾರ, ಡಿಸೆಂಬರ್ 1 ರಂದು, ಚಿಲ್ಲರೆ ವ್ಯಾಪಾರವು ಡಿಜಿಟಲ್ ರೂಪಾಯಿಗೆ (e₹–R) ಮೊದಲ ಬ್ಯಾಚ್ ಅನ್ನು ಪ್ರಾರಂಭಿಸುತ್ತದೆ. ಡಿಜಿಟಲ್ ರೂಪಾಯಿ, ಡಿಜಿಟಲ್ ಟೋಕನ್ ರೂಪದಲ್ಲಿರುತ್ತದೆ, ಅದು ಕಾನೂನು ಬದ್ಧವಾಗಿರುತ್ತದೆ.

ಪ್ರಸ್ತುತ ಕಾಗದದ ಕರೆನ್ಸಿ ಮತ್ತು ನಾಣ್ಯಗಳನ್ನು ವಿತರಿಸುವ ಅದೇ ಮುಖಬೆಲೆಯಲ್ಲಿ ಡಿಜಿಟಲ್ ರೂಪಾಯಿಯನ್ನು ನೀಡಲಾಗುತ್ತದೆ. ಡಿಸೆಂಬರ್ 1 ರಂದು ಕ್ಲೋಸ್ಡ್ ಯೂಸರ್ ಗ್ರೂಪ್ (ಸಿಯುಜಿ) ನಲ್ಲಿ ಆಯ್ದ ಸ್ಥಳಗಳಲ್ಲಿ ಈ ಪರೀಕ್ಷೆಯನ್ನು ಮಾಡಲಾಗುತ್ತದೆ ಎಂದು ಆರ್‌ ಬಿಐ ತಿಳಿಸಿದೆ.

ವ್ಯಾಪಾರಿ ಸಂಸ್ಥೆಗಳಲ್ಲಿ ಕ್ಯೂಆರ್ ಕೋಡ್ ಬಳಸಿ ವ್ಯಾಪಾರಿಗಳಿಗೆ ಹಣ ಪಾವತಿಸಬಹುದು ಎಂದು ಆರ್‌ಬಿಐ ಹೇಳಿದೆ. ಪಾಲುದಾರ ಬ್ಯಾಂಕ್‌ಗಳು ನೀಡುವ ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಬಳಕೆದಾರರು ಇ-ಆರ್ (e₹–R) ನೊಂದಿಗೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ.

Related Posts

Leave a Reply

Your email address will not be published.