ಜಿಲ್ಲಾ ಉಸ್ತುವಾರಿ ಸಚಿವರ ನೇಮಕ – ದ.ಕ. ಜಿಲ್ಲೆಗೆ ಸಚಿವ ದಿನೇಶ್ ಗುಂಡೂರಾವ್ , ಉಡುಪಿ ಲಕ್ಷ್ಮೀ ಹೆಬ್ಬಾಳ್ಕರ್

ರಾಜ್ಯ ಸರಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.ದಕ್ಷಿಣ ಕನ್ನಡಕ್ಕೆ ದಿನೇಶ್ ಗುಂಡೂರಾವ್, ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ಬೆಂಗಳೂರು ನಗರಕ್ಕೆ ಡಿಕೆ ಶಿವಕುಮಾರ್, ತುಮಕೂರು ಜಿಲ್ಲೆಗೆ ಡಾ. ಜಿ ಪರಮೇಶ್ವರ್, ಗದಗ ಜಿಲ್ಲೆಗೆ ಹೆಚ್.ಕೆ ಪಾಟೀಲ್, ಬೆಂಗಳೂರು ಗ್ರಾಮಾಂತರಕ್ಕೆ ಕೆ.ಹೆಚ್ ಮುನಿಯಪ್ಪ, ರಾಮನಗರಕ್ಕೆ ರಾಮಲಿಂಗಾರೆಡ್ಡಿ, ಚಿಕ್ಕಮಗಳೂರಿಗೆ ಕೆಜೆ ಜಾರ್ಜ್, ವಿಜಯಪುರಕ್ಕೆ ಎಂ.ಬಿ ಪಾಟೀಲ್, ಮೈಸೂರಿಗೆ ಹೆಚ್.ಸಿ ಮಹದೇವಪ್ಪ, ಬೆಳಗಾವಿಗೆ ಸತೀಶ್ ಜಾರಕಿಹೊಳಿ, ಕಲಬುರ್ಗಿಗೆ ಪ್ರಿಯಾಂಕಾ ಖರ್ಗೆ, ಹಾವೇರಿಗೆ ಶಿವಾನಂದ ಪಾಟೀಲ್, ವಿಜಯನಗರಕ್ಕೆ ಜಮೀರ್ ಅಹ್ಮದ್ ಖಾನ್, ಯಾದಗಿರಿಗೆ ಶರಬಸಪ್ಪ ದರ್ಶನಾಪುರ್, ಬೀದರ್‍ಗೆ ಈಶ್ವರ್ ಖಂಡ್ರೆಯನ್ನು ನೇಮಿಸಿದ್ದಾರೆ. ಇನ್ನುಳಿದಂತೆ, ಮಂಡ್ಯ ಜಿಲ್ಲೆಗೆ ಚೆಲುವರಾಯಸ್ವಾಮಿ, ದಾವಣಗೆರೆಗೆ ಎಸ್.ಎಸ್ ಮಲ್ಲಿಕಾರ್ಜುನ್, ಧಾರವಾಡಕ್ಕೆ ಸಂತೋಷ್ ಲಾಡ್, ರಾಯಚೂರಿಗೆ ಶರಣಪ್ರಕಾಶ್ ಪಾಟೀಲ್, ಬಾಗಲಕೋಟೆಗೆ ಆರ್.ಬಿ ತಿಮ್ಮಾಪುರ್, ಚಾಮರಾಜನಗರಕ್ಕೆ ಕೆ.ವೆಂಕಟೇಶ್, ಕೊಪ್ಪಳಕ್ಕೆ ಶಿವರಾಜ್ ತಂಗಡಗಿ, ಚಿತ್ರದುರ್ಗಕ್ಕೆ ಡಿ.ಸುಧಾಕರ್, ಬಳ್ಳಾರಿಗೆ ಬಿ. ನಾಗೇಂದ್ರ, ಹಾಸನಕ್ಕೆ ಕೆ.ಎನ್ ರಾಜಣ್ಣ, ಕೋಲಾರಕ್ಕೆ ಬೈರತಿ ಸುರೇಶ್, ಉತ್ತರ ಕನ್ನಡ ಜಿಲ್ಲೆಗೆ ಮಂಕಾಳ ವೈದ್ಯ, ಶಿವಮೊಗ್ಗಜಿಲ್ಲೆಗೆ ಮಧು ಬಂಗಾರಪ್ಪ, ಚಿಕ್ಕಬಳ್ಳಾಪುರಕ್ಕೆ ಡಾ. ಎಂ ಸಿ ಸುಧಾಕರ್, ಕೊಡಗು ಜಿಲ್ಲೆಗೆ ಎನ್.ಎಸ್ ಬೋಸರಾಜು ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

Related Posts

Leave a Reply

Your email address will not be published.