ಪುತ್ತೂರು: ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡರಿಂದ ಸಾರ್ವಜನಿಕ ಸಭೆ
ಪುತ್ತೂರು: ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾರವರು ಇಂದು ಉಪ್ಪಿನಂಗಡಿ ಪೇಟೆ, ಶಾಂತಿನಗರ,ಸತ್ತಿಕಲ್ಲು, ಪೆರ್ನೆ, ಹಿರೇಬಂಡಾಡಿ, ಅಡೆಕಲ್, ಪೆರಿಯಡ್ಕದಲ್ಲಿ ಸಾರ್ವಜನಿಕ ಭಾಷಣ ನಡೆಸಿ ಭರ್ಜರಿ ಮತ ಪ್ರಚಾರ ನಡೆಸಿದರು.
ಪುತ್ತೂರು ತಾಲೂಕಿನಲ್ಲಿ ಉಪ್ಪಿನಂಗಡಿ ಪಟ್ಟಣವು ಅತೀ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ಅಂತೆಯೇ ವ್ಯಾಪಾರ ವ್ಯವಹಾರದಲ್ಲಿ ಕೇಂದ್ರ ಬಿಂದು ಆಗಿರುವ ಪಟ್ಟಣ ಆದರೆ ಇಲ್ಲಿಗೆ ಯಾವುದೇ ಮೂಲಭೂತ ಸೌಕರ್ಯಗಳು ತಲುಪಿಲ್ಲ ಮುಖ್ಯ ಬಸ್ ನಿಲ್ದಾಣದಲ್ಲಿ ಒಂದು ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲ , ಬಸ್ಸು ನಿಲ್ದಾಣದಲ್ಲಿ ಒಂದು ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಇದನ್ನೆಲ್ಲಾ ಬಿಟ್ಟು ಬಿಜೆಪಿ ಹಾಗು ಕಾಂಗ್ರೇಸ್ ಪಕ್ಷಗಳು ಗ್ಯಾರಂಟಿ ,ಉಚಿತ ಎಂದು ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷರು ಅಶ್ರಫ್ ಕಲ್ಲೇಗ , ರಾಜ್ಯ ಜೆಡಿಎಸ್ ವಕ್ತಾರೆ ಶ್ರೀಮತಿ ಜೋಹರ ನಿಸಾರ್ ಅಹ್ಮದ್, ಉಪ್ಪಿನಂಗಡಿ ಜೆಡಿಎಸ್ ಬ್ಲಾಕ್ ಅಧ್ಯಕ್ಷರಾದ ಜಯರಾಜ್ ಅಮೀನ್,ಹಮೀದ್ ವಿಟ್ಲ, ರಫೀಕ್ ಮನಿಯಾರ್, ಜಲೀಲ್ ಕೊಯಿಲ ಮತ್ತಿತರರು ಉಪಸ್ಥಿತರಿದ್ದರು.