ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ಸಂಸ್ಥೆಯಲ್ಲಿ ದೀಪಾವಳಿ ಹಬ್ಬ ಆಚರಣೆ
ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ಸಂಸ್ಥೆಯಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ದೀಪವನ್ನ ಬೆಳಗಿಸುವುದರ ಮೂಲಕ ದೀಪಾವಳಿ ಆಚರಣೆಗೆ ಚಾಲನೆ ನೀಡಿ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೂ ಸಿಬ್ಬಂದಿ ವರ್ಗದವರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಕನ್ನಡ ಮಾಧ್ಯಮ ವಿಭಾಗದ ಮುಖ್ಯಗುರುಗಳಾದ ಶ್ರೀಧರ ಗೌಡ ದೀಪಾವಳಿ ಹಬ್ಬದ ಹಿನ್ನೆಲೆ, ಆಚರಣೆಯ ವಿಶೇಷತೆ ಹಾಗೂ ಅದರ ಸಂದೇಶವನ್ನು ತಿಳಿಸಿದರು.
ದೀಪಾವಳಿಯ ಸಾಂಪ್ರದಾಯಿಕ ತಿನಿಸು ಅವಲಕ್ಕಿ ಹಾಗೂ ಪಾನೀಯ ವ್ಯವಸ್ಥೆ ಮಾಡಲಾಯಿತು. ಇದರ ಪ್ರಾಯೋಜಕತ್ವವನ್ನು ನೆಲ್ಯಾಡಿ ಗಣೇಶ್ ಸ್ಟೋರ್ ನ ಮಾಲಕರಾದ ದಿನೇಶ್.ಟಿ.ಎಂ ಅವರು ವಹಿಸಿದ್ದರು.
ವಿದ್ಯಾರ್ಥಿಗಳೆಲ್ಲರೂ ದೀಪಾವಳಿ ಆಚರಣೆಯ ಸಂಭ್ರಮದಲ್ಲಿ ಪಟಾಕಿ ಸಿಡಿಸಿ, ಸಿಹಿಯನ್ನು ಸವಿದು ಸಂತಸಪಟ್ಟರು.
ಆಡಳಿತ ಅಧಿಕಾರಿ ಜಾನ್.ಕೆ., ಸಂಯೋಜಕರಾದ ರೆ.ಫಾ ಜಿಜನ್, ಕನ್ನಡ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ಶ್ರೀಧರ ಗೌಡ, ಆಂಗ್ಲ ಮಾಧ್ಯಮದ ಮುಖ್ಯಗುರು ಯಶೋಧರ.ಕೆ, ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.