ಡಾ. ಹರಿಕೃಷ್ಣ ರೈಯವರಿಗೆ ಅಮೆರಿಕಾದಲ್ಲಿ ನಡೆದ “ಜಿ. ಇ ಹೆಲ್ತ್ ಕೇರ್ ವಿಶ್ವ ಸಂಶೋಧನಾ ಸ್ಪರ್ಧೆ”ಯಲ್ಲಿ ಪೀಪಲ್ ಚಾಯ್ಸ್ ಅವಾರ್ಡ್ 2025

ಸುಳ್ಯದ ಡಾ. ಹರಿಕೃಷ್ಣ ರೈ ಯವರು ಬೆಂಗಳೂರಿನ ಜಿ.ಇ ಹೆಲ್ತ್ ಕೇರ್ ಸಂಸ್ಥೆಯಲ್ಲಿ ಸೀನಿಯರ್ ಪ್ರಾಡಕ್ಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಎ.4 ರಂದು ಅಮೇರಿಕಾದ ವಿಸ್ಕಾನ್ಸಿನ್ ರಾಜ್ಯದ ಮಿಲ್ವಾಕೀ ನಗರದಲ್ಲಿ ನಡೆದ ಜಿ ಇ ಹೆಲ್ತ್ ಕೇರ್ ವಿಶ್ವ ಸಂಶೋಧನಾ ಸ್ಪರ್ಧೆ 2025 ರಲ್ಲಿ ಭಾಗವಹಿಸಿ, ಅವರು ಪ್ರದರ್ಶಿಸಿದ ” ಎಂ.ಆರ್.ಐ ಸ್ಕ್ಯಾನರ್ ನಲ್ಲಿ ಕ್ಯಾಮರಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ರೋಗಿಗಳ ಉಸಿರಾಟದ ಹಾಗೂ ಹೃದಯದ ಇ.ಸಿ.ಜಿ ತರಂಗರೂಪ ಪಡೆಯುವ” ತಂತ್ರಜ್ಞಾನ” ಕ್ಕೆ ಜಿ.ಇ ಸಂಸ್ಥೆ ನೀಡುವ ಪೀಪಲ್ ಚಾಯ್ಸ್ ಅವಾರ್ಡ್ ನ್ನು ಜಿ. ಇ ಹೆಲ್ತ್ ಕೇರ್ ಸಂಸ್ಥೆಯ ವಿಶ್ವ ಸಂಶೋಧನಾ ವಿಭಾಗದ ಜನರಲ್ ಮ್ಯಾನೇಜರ್ ಡಾ. ಜೇಸನ್ ಪೋಲ್ಸನ್ ಅವರು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಜಿ ಇ ಸಂಸ್ಥೆಯ ಸಿ.ಟಿ.ಓ ಜ್ಹೂಲಿ, ವೈಸ್ ಪ್ರೆಸಿಡೆಂಟ್ ಅನುಜ್ ಕರುಣ್, ಚೀಫ್ ಆರ್ಕಿಟೆಕ್ಟ್ ಆಂಡ್ರೂ ಬೈಶಾಂಕ್ ಅವರು ವೇದಿಕೆಯಲ್ಲಿದ್ದು ಡಾ.ಹರಿಕೃಷ್ಣ ರೈ ಯವರ ಈ ಹೊಸ ತಂತ್ರಜ್ಞಾನ ಅನ್ವೇಷಣೆಯನ್ನು ಶ್ಲಾಘಿಸಿ ಸಂಸ್ಥೆಯು ಈ ತಂತ್ರಜ್ಞಾನವನ್ನು ಮುಂದಿನ ದಿನಗಳಲ್ಲಿ ಜಿ. ಇ ಸಂಸ್ಥೆಯು ಹೊರತರಲಿರುವ ಎಂ.ಆರ್.ಐ ಸ್ಕ್ಯಾನರುಗಳಲ್ಲಿ ಅಳವಡಿಸಿ ರೋಗಿಗಳ ಹೃದಯ ಹಾಗೂ ಶ್ವಾಸಕೋಶ ಸಂಬಂದಿತ ಸ್ಕ್ಯಾನ್ ಗಳನ್ನು ಶೀಘ್ರಗೊಳಿಸಲು ಬಳಸಿಕೊಳ್ಳಲಿದೆಯೆಂದು ಈ ಸಂಶೋಧನಾ ಅಧಿವೇಶನದಲ್ಲಿ ಘೋಷಿಸಿದರು.

ಈ ಸಂಶೋಧನಾ ಸ್ಪರ್ಧೆಯಲ್ಲಿ ಜಿ.ಇ ಸಂಸ್ಥೆಯ ಭಾರತ, ಚೀನಾ, ಇಸ್ರೇಲ್, ಯೂರೋಪ್ ಹಾಗೂ ಅಮೇರಿಕಾ ದೇಶಗಳ ಸಂಶೋಧನಾ ಪ್ರತಿನಿಧಿಗಳು ಭಾಗವಹಿಸಿದ್ದರು. ಡಾ. ಹರಿಕೃಷ್ಣ ರೈ ಯವರು ಸುಳ್ಯ ಗಾಂಧಿನಗರದ ನಿವೃತ್ತ ವಲಯಾರಣ್ಯಧೀಕಾರಿಗಳಾದ ಶ್ರೀ ನಾರಾಯಣ ರೈ ಯವರ ಪುತ್ರರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ಜಿ.ಇ ಹೆಲ್ತ್ ಕೇರ್ ಸಂಸ್ಥೆಯಲ್ಲಿಸೇವೆ ಸಲ್ಲಿಸುತ್ತಿದ್ದಾರೆ.

Related Posts

Leave a Reply

Your email address will not be published.