ಬ್ರಹ್ಮಶ್ರೀ ನಾರಾಯಣ ಗುರುಗಳ ನಿಗಮ ಘೋಷಣೆ ಮಾಡಿ ,ಸೇಂದಿ ಇಳಿಸುವುದಕ್ಕೆ ಅನುಮತಿ ನೀಡಬೇಕು : ಡಾ. ಪ್ರಣಾವಾನಂದ ಸ್ವಾಮೀಜಿ

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ನಿಗಮವನ್ನು ಘೋಷಣೆ ಮಾಡದೆ ಸಮಾಜದ ಜನಾಂಗಕ್ಕೆ ಮೂಗಿಗೆ ತುಪ್ಪವನ್ನು ಹಚ್ಚಿದರು ಇದು ಇಡೀ ಸಮುದಾಯಕ್ಕೆ ತೀವ್ರ ನೋವು ಉಂಟಾಗಿದೆ ಎಂದು ಡಾ. ಶ್ರೀ ಸ್ವಾಮಿ ಪ್ರಣವಂ ಸ್ವಾಮಿಗಳು ಹೇಳಿದರು.
ಅವರು ಬೀದರ್‍ನಲ್ಲಿ ಮಾಧ್ಯಮವನ್ನು ಉದ್ದೇಶಿ ಮಾತನಾಡಿ, ಸಚಿವ ಸುನಿಲ್ ಕುಮಾರ್ ಅವರು ರಾಜಕೀಯ ಲಾಭಕ್ಕೋಸ್ಕರ ಸಮುದಾಯವನ್ನು ದಾರಿ ತಪ್ಪಿಸುತ್ತಿರುವುದನ್ನು ಶ್ರೀಗಳು ಖಂಡಿಸಿದರು. ಮುಖ್ಯಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮವನ್ನು ಸಮಾಜದ ಸ್ವಾಮೀಜಿಗಳಿಗೆ ತಿಳಿಸದೆ ಮಾಡಿರುವುದು ಕೂಡ ಇಲ್ಲಿ ಗಮನಿಸಬಹುದು. ಕೂಡಲೇ ಬ್ರಹ್ಮಶ್ರೀ ನಾರಾಯಣ ಗುರುಗಳ ನಿಗಮವನ್ನು ಘೋಷಣೆ ಮಾಡಿ 500 ಕೋಟಿಯನ್ನು ಮೀಸಲಾಗಿ ಇಟ್ಟು ಕುಲಕಸುಬು ಸೇಂದಿಯನ್ನು ಇಳಿಸುವುದಕ್ಕೆ ರಾಜ್ಯಾದ್ಯಂತ ಅನುಮತಿ ನೀಡಬೇಕೆಂದು ಶ್ರೀ ಪ್ರಣವನಂದ ಸ್ವಾಮೀಜಿಗಳು ಆಗ್ರಹಿಸಿದ್ದಾರೆ. ಇಲ್ಲವಾದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ರಾಜ್ಯ ಸರ್ಕಾರಕ್ಕೆ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಬೀದರ್ ಜಿಲ್ಲಾಧ್ಯಕ್ಷರು ಡಾಕ್ಟರ್ ರಾಜಶೇಖರ್ ಸೇಡಂಕರ್ ಆರ್ಯ ಈಡಿಗ ಸಮಾಜದ ಅಧ್ಯಕ್ಷರು ಸಂಗಯ್ಯ ಸುಲ್ತಾನ್ ಪುರ್ ಬೀದರ್ ಸಮಾಜ ತಾಲುಕಾಧ್ಯಕ್ಷರು ಮತ್ತು ಅನೇಕ ಮುಖಂಡರುಗಳು ಶ್ರೀಗಳ ಜೊತೆ ಉಪಸ್ಥಿತರಿದ್ದರು.