ಕಡಲ ತಡಿಯಲ್ಲಿ ಆಟಿ ಸಂಭ್ರಮ

ಕಡಲ ತಡಿಯ ಕರಾವಳಿಯಲ್ಲೀಗ ಆಟಿ ತಿಂಗಳಿನ ಸಂಭ್ರಮ, ಸಡಗರ ಮನೆ ಮಾಡಿದೆ. ವಿವಿಧ ಬಗೆಯ ತಿನಿಸು ತಯಾರು ಮಾಡಿ ತಿನ್ನುವುದೇ ಒಂದು ಖುಷಿ. ಕೇವಲ ಆಹಾರಗಳು ಮಾತ್ರವಲ್ಲ ಆಟೋಟ ಸ್ಪರ್ಧೆಗಳು ಕೂಡ ಕೆಸರಿನ ಗದ್ದೆಯಲ್ಲಿ ವಿಶೇಷ ಮೆರುಗು ನೀಡುತ್ತದೆ. ಇದಕ್ಕಾಗಿಯೇ ಆಟಿ ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾದ ವೇದಿಕೆ ಸಿದ್ದಗೊಳ್ಳಿವುದು ಸರ್ವ ಸಾಮಾನ್ಯ. ಇದು ಮೊದಲಿನಿಂದಲೂ ಆಚರಿಸಿಕೊಂಡು ಬಂದ ಪದ್ದತಿ. ಒಂದು ಕಾಲಕ್ಕೆ ಬಡತನದ ಸಂಕೇತವಾಗಿದ್ದ ಆಟಿಯ ಆಹಾರಗಳು ಈಗ ಆ ಕಾಲದ ಅರಿವು ಮೂಡಿಸುವ ಹೊಸ ಸಂದರ್ಭವನ್ನು ಸೃಷ್ಟಿಸಿದೆ.

ರಾಜ್ಯದ ಇತರ ಭಾಗಗಳಲ್ಲಿ ಆಷಾಡ ಎಂದು ಆಚಿಸಿದರೆ, ತುಳುನಾಡಿನ ಜನರಿಗೆ ಅದು ಆಟಿ ಎಂದೇ ಕರೆಯಲ್ಪಡುವ ಗೌಜಿ ತಮ್ಮನದ ತಿಂಗಳುಗಳಾಗಿವೆ ಆಚರಿಸುತ್ತಾರೆ. ಈ ತಿಂಗಳೆಂದರೆ ಅದು ತುಳು(Tulu)ವರಿಗೆ ಜೀವಂತಿಕೆ ತುಂಬಿದ ದಿನಗಳು ಅಂತಾನೆ ಹೇಳಬಹುದು. ಆಟಿ ಅಂದರೆ ಬಡತನ ಮತ್ತು ಹಸಿವಿನದಿನಗಳಾಗಿತ್ತು. ಹಸಿವು ಮತ್ತು ಬಡತನವಿದ್ದಲ್ಲಿ ಆರೋಗ್ಯ ವಿರುತ್ತೆ ಅನ್ನೋದು ಹಿಂದಿನವರ ನಂಬಿಕೆ ಹಾಗೂ ರೂಡಿ. ಅದೇ ಕಾರಣಕ್ಕೆ ನಮ್ಮ ಪೂರ್ವಿಕರು ನೂರು ವರ್ಷಕ್ಕೂ ಅಧಿಕ ಬದುಕುತ್ತಿದ್ದರು. ಪ್ರಕೃತಿದತ್ತವಾದ ಆಹಾರಗಳನ್ನು ಸೇವಿಸುತ್ತಾ ಒಂದು ರೀತಿಯ ವೃತಾಚರಣೆಯನ್ನೇ ಮಾಡುತ್ತಿದ್ದರು. ಅವರಿಗದುವೆ ಒಂದು ರೀತಿಯ ಆಯುರ್ವೇದ.

ತುಳುನಾಡಿನ ಆಟಿಡೊಂಜಿ ದಿನ ಜಾನಪದ ಕಲೆ ಇದೀಗ ದೂರ ಊರಿನಲ್ಲಿ ಮೇಲೈಸಿಲು ವೇದಿಕೆಯೊಂದು ಸಿದ್ದಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಾತ್ರ ಅತ್ಯಂತ ಹೆಚ್ಚಿನ ಆಡಂಬರದಲ್ಲಿ ಆಚರಿಸಲಾಗುತ್ತಿರುವ ಆಟಿ ಸಂಭ್ರಮಕ್ಕೆ ದುಬೈನ ಜನತೆ ಕೂಡ ಮೆಚ್ಚುಗೆ ವ್ಯಕ್ತ ಪಡಿಸಿದ್ದು ಮಾತ್ರವಲ್ಲದೆ ಆ ಊರಿನಲ್ಲೂ ಆಟಿ ಸಂಭ್ರಮವನ್ನು ಆಚರಿಸುತ್ತಿರುವುದು ಇತಿಹಾಸವೇ ಸರಿ. ಕಡಲ ತೀರದಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಇನ್ನು ದುಬೈನಲ್ಲಿಯೂ ಮಹತ್ವ ಪಡೆಯುವ ಸಡಗರದ ಹಬ್ಬವಾಗಿದ್ದು ಅಗಸ್ಟ್ 14 ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಂಧ್ಯಾ ಕ್ರೀಯೆಷನ್ಸ್ ಇವೆಂಟ್ಸ್ ನೆಟ್ವರ್ಕ್ ಟೀಂ ದುಬೈ ಮತ್ತು ಫಾರ್ಚೂನ್ ಪ್ಲಾಜಾ ಹೋಟೆಲ್ ದುಬೈ ಪ್ರವೀಣ್ ಶೆಟ್ಟಿ ಎಂಟರ್ಪ್ರೈಸಸ್ ಇವರ ಸಹಯೋಗದಲ್ಲಿ ನಡೆಯುವ ಆಟಿಡೊಂಜಿ ದಿನ ಕಾರ್ಯಕ್ರಮ ಫಾರ್ಚುನ್ ಪ್ಲಾಜಾ ಹೋಟೆಲ್ ಅಲ್ ಘುಸೈಸಸ್ ದುಬೈನಲ್ಲಿ ನಡೆಯಲಿದೆ. ತುಳು ನಾಡಿನ ಜಾನಪದ ಕಲೆಯ ಮೆರುಗು ನೀಡುವ ಈ ಕಾರ್ಯಕ್ರಮ ದುಭೈನಲ್ಲಿ ಅತ್ಯಂತ ಅದ್ದೂರಿಯಾಗಿ ಮೂಡಿ ಬರುವುದಂತು ನಿಜ. ಕಾರ್ಯಕ್ರಮ ಕೇವಲ ಕರಾವಳಿಗರ ಮೆಚ್ಚುಗೆಯನ್ನು ಪಡೆದಿದ್ದರೆ ಇದೀಗ ದೂರದ ಊರಿನಲ್ಲೂ ನಡೆಯುತ್ತಿರುವುದು ಒಂದು ಇತಿಹಾಸದ ಪುಟ ಸೇರಬಹುದು. ಈ ಮಾಸದಲ್ಲಿ ಹೆಚ್ಚಾಗಿ ಯಾರು ಕೂಡ ಶುಭ ಸಮಾರಂಭಗಳನ್ನು ಮಾಡಲು ಇಚ್ಛಿಸುವುದಿಲ್ಲ.

. ಕಾರ್ಯಕ್ರಮ ಕೇವಲ ಕರಾವಳಿಗರ ಮೆಚ್ಚುಗೆಯನ್ನು ಪಡೆದಿದ್ದರೆ ಇದೀಗ ದೂರದ ಊರಿನಲ್ಲೂ ನಡೆಯುತ್ತಿರುವುದು ಒಂದು ಇತಿಹಾಸದ ಪುಟ ಸೇರಬಹುದು. ಈ ಮಾಸದಲ್ಲಿ ಹೆಚ್ಚಾಗಿ ಯಾರು ಕೂಡ ಶುಭ ಸಮಾರಂಭಗಳನ್ನು ಮಾಡಲು ಇಚ್ಛಿಸುವುದಿಲ್ಲ. ಆದರೆ ದಕ್ಷಿಣ ಕರ್ನಾಟಕದ ಹಲವೆಡೆ ಈ ಮಾಸದಲ್ಲಿ ಆಷಾಢ ಹಬ್ಬವನ್ನು ಆಚರಿಸುತ್ತಾರೆ. ಈ ಮಾಸವನ್ನು ಭಾರತೀಯರು ಅಶುಭವೆಂದು ಪರಿಗಣಿಸುತ್ತಾರೆ. ಆಷಾಢ ಮಾಸವೆಂದಾಕ್ಷಣ ಹಲವರ ಮನಸ್ಸಿನಲ್ಲಿ ಇದೊಂದು ಅಶುಭ ಮಾಸವೆಂಬ ಭಾವನೆ ಮೂಡುತ್ತದೆ.

ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಸಿ
Shodhan prasad 0501272847
Ashok Bailoor 0505588745
ನಿತ್ಯಾನಂದ beskoor 0506191209
ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ :3.00 ವರೆಗೆ
ಉಚಿತ ಪ್ರವೇಶ

Related Posts

Leave a Reply

Your email address will not be published.