ಡಿವೈಎಫ್ಐ ಆಶ್ರಯದಲ್ಲಿ ಭಗತ್ ಸಿಂಗ್ ಹುತಾತ್ಮ ದಿನಾಚರಣೆ

ಸ್ವಾತಂತ್ರ್ಯ ಚಳುವಳಿಯ ಧ್ರುವತಾರೆಗಳಾದ ಶಹೀದ್ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳಾದ ರಾಜ್ ಗುರು, ಸುಖದೇವ್ ಅವರು ಬ್ರಿಟಿಷರ ನೇಣುಗಂಬಕ್ಕೆ ನಗು ನಗುತ್ತಲೇ ಏರಿದ ಹುತಾತ್ಮರಾದ ಕ್ರಾಂತಿಕಾರಿಗಳ ಬಲಿದಾನವನ್ನು ನೆನಪಿಸಿ ಡಿವೈಎಫ್ಐ ಸುರತ್ಕಲ್ ಘಟಕದ ಆಶ್ರಯದಲ್ಲಿ ಕಾನ ಜಂಕ್ಷನ್ ಬಳಿ ಕ್ಯಾಂಡಲ್ ದೀಪ ಬೆಳಗಿ ಹುತಾತ್ಮರಾದ ಧೀರ ಸಂಗಾತಿಗಳಿಗೆ ಕೆಂಪು ವಂದನೆ ಸಲ್ಲಿಸಲಾಯಿತು.ಈ ಸಂಧರ್ಭದಲ್ಲಿ ಭಾಗವಹಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಭಗತ್ ಸಿಂಗ್ ಮತ್ತು ಹುತಾತ್ಮ ಸಂಗಾತಿಗಳ ಬಲಿದಾನ ವ್ಯರ್ಥ ಆಗಬಾರದು ಯುವಜನರು ಭಗತ್ ಸಿಂಗರ ತ್ಯಾಗ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಧ್ವನಿ ಇಲ್ಲದ ಶೋಷಿತರ ಧ್ವನಿ ಆಗಬೇಕೆಂದು ಕರೆ ನೀಡಿದರು.

ಡಿವೈಎಫ್ ನಗರ ಉಪಾಧ್ಯಕ್ಷ ಶ್ರೀನಾಥ್ ಕುಲಾಲ್, ಸುರತ್ಕಲ್ ಘಟಕ ಅಧ್ಯಕ್ಷರಾದ ಬಿ.ಕೆ ಮಕ್ಸೂದ್, ಮುಖಂಡರಾದ ಸೈಫರ್ ಆಲಿ ಚೊಕ್ಕಬೆಟ್ಟು, ಮುಸ್ತಫಾ ಅಂಗರಗುಂಡಿ, ಜೋಯ್ ಜನತಾಕಾಲನಿ, ಗಣೇಶ್ ಪ್ರೇಮ್ ನಗರ, ಫ್ರಾನ್ಸಿಸ್ ಕಾನ, ಹರೀಶ್, ನವಾಜ್ ಕುಳಾಯಿ, ಇಮ್ತಿಯಾಜ್ ಕುಳಾಯಿ, ಸಾಮಾಜಿಕ ಮುಂದಾಳು ಶರೀಫ್ ಜನತಾ ಕಾಲನಿ ಉಪಸ್ಥಿತರಿದ್ದರು.
