ಅಡುಗೆ ಅನಿಲ ದರ ಏರಿಕೆ : ದೊಂದಿ ಮೆರವಣಿಗೆ

ಕಾಸರಗೋಡು ಜಿಲ್ಲೆಯ ಪೆರ್ಲದ ಬೆದ್ರಂಪಳ್ಳದಲ್ಲಿ ಡಿ.ವೈ.ಎಫ್.ಐ ನೇತೃತ್ವದಲ್ಲಿ ಅಡುಗೆ ಅನಿಲ ದರ ಏರಿಕೆಯನ್ನು ಖಂಡಿಸಿ ದೊಂದಿ ಮೆರವಣಿಗೆ ನಡೆಯಿತು.
ಅಡುಗೆ ಅನಿಲ ದರ ಏರಿಕೆಯನ್ನು ವಿರೋಧಿಸಿ ಬೆದ್ರಂಪಳ್ಳದಲ್ಲಿ ನಡೆದ ದೊಂದಿ ಮೆರವಣಿಗೆಯನ್ನು ಡಿ.ವೈ.ಎಫ್.ಐ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯೆ ಸಚಿತಾ ಬಿ ಪೆರ್ಲ ಉದ್ಘಾಟಿಸಿದರು. ವಾಣಿಜ್ಯ ಸಿಲಿಂಡರ್ ಗೆ 350 ರೂಪಾಯಿ ಹಾಗೂ ಗೃಹ ಬಳಕೆಯ ಸಿಲಿಂಡರ್ ಗೆ 50 ರೂಪಾಯಿ ಏರಿಕೆ ಮಾಡುವ ಮೂಲಕ ಕೇಂದ್ರ ಸರಕಾರವು ಜನರ ಮೇಲೆ ಗದಾ ಪ್ರಹಾರ ಮಾಡಿದೆ ಎಂದು ಸಚಿತಾ ಬಿ ಪೆರ್ಲ ಆಕ್ರೋಶ ವ್ಯಕ್ತಪಡಿಸಿದರು.ಈ ಪ್ರತಿಭಟನಾ ದೊಂದಿ ಮೆರವಣಿಗೆಯಲ್ಲಿ ಡಿವೈಎಫ್ ಐ ಮಾಜಿ ವಲಯ ಸಮಿತಿ ಸದಸ್ಯ ಅವಿನಾಶ್ , ಬೆದ್ರಂಪಳ್ಳ ಫಟಕ ಅಧ್ಯಕ್ಷ ಕಾರ್ತಿಕ್ ಮೊದಲಾದವರು ಭಾಗವಹಿಸಿದ್ದರು.