ದೀಪಾವಳಿ ಹಬ್ಬದ ಸಡಗರಕ್ಕೆ ಗ್ರಹಣದ ಎಫೆಕ್ಟ್

ದೀಪಾವಳಿ ಹಬ್ಬದ ನಡುವೆಯೇ ಇಂದು ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಬರೋಬ್ಬರಿ 27 ವರ್ಷಗಳ ಬಳಿಕ ಇದೀಗ ಕೇತುಗ್ರಸ್ತ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣವನ್ನು ಕೇತು ಖಗ್ರಾಸ ಸೂರ್ಯಗ್ರಹಣ, ಖಂಡಗ್ರಾಸ ಸೂರ್ಯಗ್ರಹಣ ಎಂದು ಕೂಡ ಕರೆಯಲಾಗುತ್ತದೆ. ಈ ಗ್ರಹಣ ಭಾರತದ ಹಲವು ಭಾಗಗಳಲ್ಲಿಯೂ ಗೋಚರವಾಗಲಿದೆ. ಬೆಂಗಳೂರು, ದೆಹಲಿ, ಕೊಲ್ಕತ್ತಾ, ಚೆನ್ನೈ, ವಾರಾಣಸಿ, ಮಥುರಾದಲ್ಲಿ ಈ ಗ್ರಹಣವನ್ನು ಕಾಣಬಹುದು. ಸೂರ್ಯ ಗ್ರಹಣ ಎಫೆಕ್ಟ್ ರಸ್ತೆಗಳು ಸ್ತಬ್ಧಖಂಡಗ್ರಾಸ ಸೂರ್ಯ ಗ್ರಹಣದ ಎಫೆಕ್ಟ್ ನಿಂದ ಜನರ ಓಡಾಟ ಇಲ್ಲದೆ NH 66 ರಸ್ತೆಗಳು ಬಿಕೋ ಎನ್ನುತ್ತಿದೆ ವ್ಯಾಪಾರ ವಹಿವಾಟು ಇಲ್ಲದೆ ಮಧ್ಯಾಹ್ನದ ನಂತರ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.
ಬೈಂದೂರು ಹಾಗೂ ಕುಂದಾಪುರ ಹೋಗುವ ಬಸ್ ಗಳು ಖಾಲಿ ಆಗಿ ಓಡಾಡುತ್ತಿವೆ.ದೀಪಾವಳಿ ಹಬ್ಬದ ಸಡಗರಕ್ಕೆ ಗ್ರಹಣದ ಎಫೆಕ್ಟ್ ನಿಂದ ಮಂಕಾಗಿದೆ…
