ಪಡುಬಿದ್ರಿಯಲ್ಲಿ ಈದ್ ಮಿಲಾದ್ ಸಂಭ್ರಮ…
ಪ್ರವಾದಿಯವರ ಜನ್ಮ ದಿನಾಚರಣೆಯ ಅಂಗವಾಗಿ ಪಡುಬಿದ್ರಿಯ ಕಂಚಿನಡ್ಕದಿಂದ ಆರಂಭಗೊಂಡ ಜಾಥದಲ್ಲಿ ನೂರಾರು ಮುಸ್ಲಿಂ ಭಾಂದವರು ಭಾಗವಹಿಸಿದ್ದು, ದ್ವಿಚಕ್ರ ವಾಹನ ಸಹಿತ ಅಟೋ ರಿಕ್ಷಾಗಳು ಈ ಜಾಥದಲ್ಲಿ ಪಾಲ್ಗೊಂಡಿದ್ದವು.
ಈ ಬಗ್ಗೆ ಮಾಹಿತಿ ನೀಡಿದ ಉರ್ದು ಶಾಲಾ ಮುಖ್ಯ ಶಿಕ್ಷಕ ಶಫಿಯುಲ್ಲಾ ಎಂಬವರು, ಲೋಕಕ್ಕೆ ಒಳ್ಳೆಯ ವಿಚಾರಗಳನ್ನು ಸಾರಿದ ಪ್ರವಾದಿಯವರ ಜನ್ಮ ದಿನಾಚರಣೆಯನ್ನು ಪಡುಬಿದ್ರಿ ಜಮಾತ್ ಮುಖಾಂತರ ಬಹಳ ಅದ್ಧೂರಿಯಾಗಿ ಆಚರಿಸುತ್ತಿದ್ದು, ಈ ದಿನವೂ ಕಂಚಿನಡ್ಕದಿಂದ ಮಸೀದಿವರಗೆ ಜಾಥ ನಡೆದಿದ್ದು, ಪಡುಬಿದ್ರಿ ಜಮಾತ್ ವ್ಯಾಪ್ತಿಯ ಹಿರಿಯರು ಸಹಿತ ಮಕ್ಕಳು ಕೂಡಾ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಎಂದರು.