ಎರ್ಮಾಳ್ : ಉಚ್ಚಿಲ ಪೇಟೆಯಲ್ಲಿ ಕಳ್ಳರ ಲಗ್ಗೆ-ಹಲವಾರು ಅಂಗಡಿಗಳ ಬೀಗ ಮುರಿದು ನಗದು ಕಳವು

ಉಚ್ಚಿಲ ರಾಷ್ಟಿçÃಯ ಹೆದ್ದಾರಿ 66ರ ಬಳಿಯ ಅಂಗಡಿಗಳಿಗೆ ನುಗ್ಗಿದ ಕಳ್ಳನೊಬ್ಬ ಶಟರ್ ಬೀಗ ಮುರಿದು, ಹಣವನ್ನು ಕದ್ದೊಯ್ದ ಘಟನೆ ನಡೆದಿದ್ದು, ಕಳವು ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಉಚ್ಚಿಲದ ಮಹಮ್ಮದ್ ರಫೀಕ್ ರವರ ಸೈಬರ್ ಕೆಫೆ, ಹೋಟೆಲ್ ಸ್ಪೆöÊಸ್, ತವಕ್ಕಲ್ ಬೇಕರಿ ಶಶಿ ಲಂಚ್ ಹೋಮ್ ನ ಬೀಗ ಮುರಿದು ಹಣ ದೋಚಿದ್ದಾನೆ. ಸ್ಕೂಟರಿನಲ್ಲಿ ಬಂದ ಕಳ್ಳ ಶಟರ್ ಮುರಿದು ಒಳಗೆ ಹೋಗಿದ್ದಾನೆ. ಕೇವಲ ಹಣ ಮಾತ್ರ ಕಳ್ಳತನ ಮಾಡಿದ್ದಾನೆ. ಸೈಬರ್ ನಲ್ಲಿ ಲಕ್ಷಾಂತರ ಮೌಲ್ಯದ ಲ್ಯಾಪ್ಟಾಪ್ ಇದ್ದು, ಅದನ್ನು ಮುಟ್ಟಿಲ್ಲ. ಡ್ರಾಯರ್ ಬೀಗ ಮುರಿದು ಕಳ್ಳತನ ನಡೆಸಿದ್ದಾನೆ.ಹೆಲ್ಮೆಟ್ ಮತ್ತು ಜಾಕೆಟ್ ಧರಿಸಿದ ಯುವಕ ಬರುವ ಮತ್ತು ಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಡುಬಿದ್ರೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಳ್ಳನ ಜಾಡು ಹಿಡಿಯುವಲ್ಲಿ ಯ±ಸು ಸಾಧಿಸಿದ್ದು, ಕಳ್ಳನಿಗಾಗಿ ಬಲೆ ಬೀಸಿದ್ದಾರೆ.

Related Posts

Leave a Reply

Your email address will not be published.