ಫೇಮಸ್ ಯೂತ್ ಕ್ಲಬ್ ಮಹಿಳಾ ಮಂಡಲ ಹತ್ತನೇ ತೋಕರು ಇದರ ನೂತನ ಅಧ್ಯಕ್ಷರಾಗಿ ಪ್ರೇಮಲತಾ ಯೋಗೀಶ್ ಅವಿರೋಧ ಆಯ್ಕೆ

ಫೇಮಸ್ ಯೂತ್ ಕ್ಲಬ್ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆಯು ಸಂಸ್ಥೆ ಕಾರ್ಯಾಲಯದಲ್ಲಿ ನೆರವೇರಿತು.
ನೂತನ ಅಧ್ಯಕ್ಷರಾಗಿ ಸತತ ಮೂರನೇ ವರ್ಷಕ್ಕೆ ಶ್ರೀಮತಿ ಪ್ರೇಮಲತಾ ಯೋಗೀಶ್ ರವರು ಅವಿರೋಧವಾಗಿ ಆಯ್ಕೆಯಾದರು.ಉಪಾಧ್ಯಕ್ಷರಾಗಿ ಅಮಿತಾ ದಿನಕರ್ ಸಾಲ್ಯಾನ್, ಕಾರ್ಯದರ್ಶಿಯಾಗಿ ಶ್ರೀಮತಿ ಕುಸುಮಾ ಎಚ್ ಕೋಟ್ಯಾನ್, ಕೋಶಾಧಿಕಾರಿಯಾಗಿ ಶ್ರೀಮತಿ ಇಂದಿರಾ ಸಂಜೀವ ಕರ್ಕೇರ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀಮತಿ ಮಿತ್ರ ಮತ್ತು ಶ್ರೀಮತಿ ನಮಿತಾ ನವೀನ್ ಚಂದ್ರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅರ್ಚನಾ ಸಾಲ್ಯಾನ್ , ಸಮಿತಿ ಸದಸ್ಯರಾಗಿ ಪುಷ್ಪ, ವಾರಿಜಾ, ನಿಶ್ಮಿತಾ, ಶಶಿಕಲಾ, ಯಶೋಧ ಲಕ್ಷ್ಮಣ, ಸುಮಾ ಜೋಸೆಫ್, ಇಂದಿರಾ ದೇಜಪ್ಪ, ಸುಮಾ ಸುಂದರರವರು ಆಯ್ಕೆಯಾಗಿರುತ್ತಾರೆ. ಕಾರ್ಯಕ್ರಮವನ್ನು ಶ್ರೀಮತಿ ಕುಸುಮಾ ರವರು ನಿರೂಪಿಸಿದರು