ಫಾದರ್ ಮುಲ್ಲರ್ ಕಾಲೇಜಿನ ವತಿಯಿಂದ ಅಂತರ್ ಕಾಲೇಜು ಬ್ಯಾಡ್ಮಿಂಟನ್ ಪಂದ್ಯಾವಳಿ
ಫಾದರ್ ಮುಲ್ಲರ್ ಕಾಲೇಜಿನ ವಾಕ್ ಮತ್ತು ಶ್ರವಣ ವಿಭಾಗದ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಪುರುಷ ಮತ್ತು ಮಹಿಳಾ ಬ್ಯಾಡ್ಮಿಂಟನ್ ಪಂದ್ಯಾವಳಿ ಶ್ರೀ ಕೆಮ್ಮಾರ್ ಬಾಲಕೃಷ್ಣ ಗೌಡ ಸ್ಮಾರಕ ಟ್ರೋಫಿ ನವೆಂಬರ್ 14 ಮತ್ತು 15ರಂದು ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಎಫ್‍ಎಂಸಿ ಪ್ರಾಂಶುಪಾಲರಾದ ಪ್ರೊ. ಅಖಿಲೇಶ್ ಪಿ.ಎಂ. ಹೇಳಿದರು.
ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಈ ಪಂದ್ಯಾವಳಿಯಲ್ಲಿ ಸುಮಾರು 25 ಪುರುಷರ ತಂಡಗಳು ಮತ್ತು 18 ಮಹಿಳಾ ತಂಡಗಳು ಸುಮಾರು 500 ಸ್ಪರ್ಧಿಗಳು ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ವಿವಿಧ ಕಾಲೇಜುಗಳಿಂದ ಭಾಗವಹಿಸಿದ್ದಾರೆ. ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಏಕಕಾಲದಲ್ಲಿ 10 ತಂಡಕ್ಕೆ ಬ್ಯಾಡ್ಮಿಂಟನ್ ಆಡುವ ಅವಕಾಶವಿದೆ. ಮಂಗಳೂರು ಸ್ಮಾರ್ಟ್‍ಸಿಟಿಗೆ ಪೂರಕವಾದಂತಹ ಏಕೈಕೆ ಇಂಡೋರ್ ಸ್ಟೇಡಿಯಂ ಆಗಿದೆ.
ಆನಂತರ ಫಾದರ್ ಮುಲ್ಲರ್ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ್ ಎಸ್.ಎನ್ ಅವರು ಮಾತನಾಡಿ, ಪಂದ್ಯಾವಳಿಯ ವಿಜೇತರಿಗೆ ಪ್ರಶಸ್ತಿಯನ್ನು ನೀಡಲಿದ್ದೇವೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಸಂಘಟನಾ ಕಾರ್ಯದರ್ಶಿ ಡಾ. ಶ್ರೇಯಾಂಕ್ ಪಿ. ಸ್ವಾಮಿ, ಫಾದರ್ ಮುಲ್ಲರ್ ಸಂಸ್ಥೆಯ ಉಪಪ್ರಾಂಶುಪಾಲರಾದ ಸಿಂಥೀಯಾ ಸಾಂತ್ಮಾಯಾರ್, ಪಿಆರ್‍ಒ ಕೆಲ್ವಿನ್ ಉಪಸ್ಥಿತರಿದ್ದರು.