ಶರಣ್ ಪಂಪ್ ವೆಲ್ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ಕಮಿಷನರ್ ಗೆ ಫಾಝಿಲ್ ತಂದೆ  ದೂರು

ಮಂಗಳೂರು: ತುಮಕೂರು ಹಾಗೂ ಉಳ್ಳಾಲದಲ್ಲಿ ಬಜರಂಗದಳದ ನೇತೃತ್ವದಲ್ಲಿ ನಡೆದಿರುವ ಶೌರ್ಯ ಯಾತ್ರೆಯಲ್ಲಿ ಸುರತ್ಕಲ್ ಫಾಝಿಲ್ ಹತ್ಯೆಯನ್ನು ಸಮರ್ಥನೆ ಮಾಡಿ ಬಹಿರಂಗ ಹೇಳಿಕೆ ನೀಡಿರುವ ವಿಎಚ್ ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ರನ್ನು ತಕ್ಷಣ ಬಂಧಿಸಿ ಎಂದು ಮೃತ ಫಾಝಿಲ್ ತಂದೆ  ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ನೀಡುವಂತೆ ಫಾಝಿಲ್ ತಂದೆಗೆ ಸೂಚನೆಯನ್ನು ನೀಡಿದ್ದಾರೆ. ಅಲ್ಲದೆ ಪ್ರಕರಣದ ಬಗ್ಗೆ ಕಾನೂನು ಸಲಹೆ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದು ಅವರಿಗೆ ತಿಳಿಸಿದ್ದಾರೆ

ಬಳಿಕ ಮಾತನಾಡಿದ ಫಾಝಿಲ್ ತಂದೆ ಉಮರ್ ಫಾರೂಕ್ ಅವರು, ನಿನ್ನೆ ಶರಣ್ ಪಂಪ್ ವೆಲ್ ತುಮಕೂರು ಹಾಗೂ ಉಳ್ಳಾಲದಲ್ಲಿ ಬಹಿರಂಗ ಭಾಷಣದಲ್ಲಿ ತನ್ನ ಪುತ್ರನನ್ನು ಸಾಯಿಸಿರುವ ಬಗ್ಗೆ ಹೇಳಿದ್ದಾರೆ. ಈ ಕೊಲೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುವಂತೆ ಹಿಂದೆಯು ಹೇಳಿದ್ದೆ. ಆದರೆ ಈ ಕೊಲೆ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದು ನಿನ್ನೆ ಗೊತ್ತಾಗಿದೆ. ಮಂಗಳೂರು ಪೊಲೀಸ್ ಕಮೀಷನರ್ ಗೆ, ಎಡಿಜಿಪಿ, ಡಿಜಿಪಿ ಅವರಿಗೆ ಮನವಿ ನೀಡಿದ್ದೇನೆ. ಶರಣ್ ಪಂಪ್ ವೆಲ್ ಫಾಝಿಲ್ ನನ್ನು ಓಡಿಸಿ ಓಡಿಸಿ ಹೊಡೆದಿದ್ದೇನೆ ಎಂದು ಹೇಳಿದ್ದಾನೆ. ಎಂಟು ಜನರು ನನ್ನ ಪುತ್ರನನ್ನು ಓಡಿಸಿ ಕೊಂದದ್ದು ಶೂರತ್ವ ಅಲ್ಲ, ಹೇಡಿಗಳು. ಹಿಂದೂಗಳು ಒಳ್ಳೆಯವರು. ಆದರೆ ಹಿಂದುತ್ವ ಎಂದು ಹೇಳುವ ಇವರದ್ದು ಹಣ ಮಾಡುವ ಗುಂಪು. ಶರಣ್ ಪಂಪ್ ವೆಲ್ ಗೆ ತಾಕತ್ತು ಇದ್ದಲ್ಲಿ ನಾನು ಒಬ್ಬ, ಇವನು ನನ್ನತ್ರ ಬಂದು ನೋಡಲಿ. ಯಾರೋ ಪಾಪದ ಮಕ್ಕಳನ್ನು ಸಾಯಿಸುವುದು ಬೇಡ. ಇವರ ಓಟಿಗಾಗಿ ರಾಜಕೀಯ ಬೇಳೆ ಬೇಯಿಸುವುದು ಬೇಡ ಎಂದರು.

Related Posts

Leave a Reply

Your email address will not be published.