24ನೇ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾಟ

ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಆಶ್ರಯದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ 27ನೇ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಯೆನೆಪೋಯ ತಂಡ ಮೂರು ವಿಭಾಗಗಳಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ನೆಹರೂ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್ ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮೈಗೂಡಿಸಿಕೊಂಡಾಗ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.
ಆನಂತರ ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷರಾದ ಡಿ.ಎಂ ಅಸ್ಲಂ ಅವರು ಮಾತನಾಡಿ, ಪ್ರತೀ ವರ್ಷ ಇಂಡಿಪೆಂಡೆಂಟ್ ಫುಟ್ಬಾಲ್ ಪಂದ್ಯಾಟವನ್ನು ಹಮ್ಮಿಕೊಂಡು ಬರುತ್ತಿದ್ದು, ಫುಟ್ಬಾಲ್ ಸ್ಪರ್ಧೆಯಲ್ಲಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಕ್ರೀಡಾ ಸ್ಪೂರ್ತಿಯನ್ನು ಬೆಳೆಸಿ ಉತ್ತುಂಗಕ್ಕೇರಬೇಕು ಎಂದು ಹೇಳಿದರು. ಫ್ರೌಢಶಾಲೆಯ ಬಾಲಕರ ವಿಭಾಗದಲ್ಲಿ ಯೇನಪೋಯ ಪ್ರೌಢಶಾಲೆ ಪ್ರಥಮ ಹಾಗೂ ಮಂಗಳೂರಿನ ಪ್ರೆಸ್ಟೀಜ್ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಬಜಪೆಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಹೈಸ್ಕೂಲ್ ತಂಡ ಪ್ರಥಮ ಹಾಗೂ ಉಚ್ಚಿಲ ಬೋವಿಸ್ ಆಂಗ್ಲ ಮಾಧ್ಯಮ ತಂಡ ದ್ವಿತೀಯ ಸ್ಥಾನಿಯಾಯಿತು.
ಪಿಯು ಬಾಲಕರ ವಿಭಾಗದಲ್ಲಿ ಯೆನಪೋಯ ಪಿಯು ಕಾಲೇಜು ಪ್ರಥಮ, ಸಂತ ಅಲೋಶಿಯಸ್ ಕಾಲೇಜು ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಸಂತ ಅಲೋಶಿಯಸ್ ಕಾಲೇಜು ಪ್ರಥಮ ಹಾಗೂ ಅಲೋಶಿಯಸ್ ಬಿ ತಂಡ ದ್ವಿತೀಯ ಸ್ಥಾನ, ಕಾಲೇಜು ವಿಭಾಗದಲ್ಲಿ ಯೇನೆಪೋಯ ಕಾಲೇಜು ತಮಡ ಪ್ರಥಮ ಹಾಗೂ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು.
ವಿಜೇತರರಿಗೆ ಗಣ್ಯರು ಟ್ರೋಫಿಯನ್ನು ವಿತರಿಸಿದರು.
